Thursday, July 01, 2021

Rama - Gunabhirama -21 – He is the controller of all; How can He envy?

Rama - Gunabhirama -21 – He is the controller of all; How can He envy?


Envy is the last among the six enemies of humans that we have been seeing in the last few verses. Can Rama be envious of someone?

न मद्वशोऽसाविति चित्ततोदं मात्सर्यमार्याः समुदाहरन्ति |
विश्वं च यद्वश्यमवश्यमेतत् स मत्सरी चेत् तुरगोपि शृंगी || (सं। रा | २।१।२७)

The wise say ‘the agitation of the mind that - this person is not under my control, is known as envy/jealousy’. When the whole world is absolutely under His control, how can He be called envious? If He is jealous, then horses have horns!

अप्रीतिर्मद्वशो नायं इति मत्सर ईरितः (भागवत तात्पर्य)

As explained in the above definition from Bhagavata Tatparya, jealousy is that agony one feels when s/he sees that another person is not under his/her control. When everything in this world is under Rama’s control, how can He be envious of something? Just like horses can have no horns, Rama too cannot be jealous.

यो यो गुणो नाम स एव रामे यो यश्च दोषः स तु नैव तस्मिन् | (सं। रा | २।१।२९)


Anything known as a virtue is in Rama. Anything known as a defect is never in Rama.

Let such defect-less Rama, who is also full of virtues, protect us always!

ರಾಮ ಗುಣಾಭಿರಾಮ-೨೧ – ಎಲ್ಲವೂ ಯಾರ ವಶವೊ, ಅಂತಹವನಿಗೆ ಮಾತ್ಸರ್ಯವೇ?


ನಾವು ಕಳೆದ ಕೆಲವು ಶ್ಲೋಕಗಳಲ್ಲಿ ನೋಡುತ್ತಿರುವ ಆರು ವೈರಿಗಳಲ್ಲಿ, ಮಾತ್ಸರ್ಯವೆಂಬುದು ಕೊನೆಯದು. ರಾಮನಿಗೆ ಯಾರಲ್ಲಾದರೂ ಮತ್ಸರವಿದೆಯೇ?

ನ ಮದ್ವಶೋಽಸಾವಿತಿ ಚಿತ್ತತೋದಂ ಮಾತ್ಸರ್ಯಮಾರ್ಯಾಃ ಸಮುದಾಹರನ್ತಿ |
ವಿಶ್ವಂ ಚ ಯದ್ವಶ್ಯಮವಶ್ಯಮೇತತ್ ಸ ಮತ್ಸರೀ ಚೇತ್ ತುರಗೋಪಿ ಶೃಂಗೀ || (ಸಂ। ರಾ | ೨।೧।೨೭)

ಜ್ಞಾನಿಗಳ ಅಭಿಪ್ರಾಯದಲ್ಲಿ, ‘ಇವನು ನನ್ನ ವಶನಲ್ಲ’ ಎಂಬ ಮನೋವ್ಯಥೆಯೇ ಮಾತ್ಸರ್ಯ. ಸಕಲ ಲೋಕವೆ ಅವನ ವಶದಲ್ಲಿ ಅವಶ್ಯವಾಗಿ ಇದೆ. ಇಂತಹ ರಾಮನು ಮತ್ಸರಿಯಾಗುವನೇ? ಕುದುರೆಗಳಿಗೆ ಕೋಡುಗಳು ಇರುವಷ್ಟೆ ಸತ್ಯ, ರಾಮನೂ ಮತ್ಸರಿಯಾಗುವುದು!

ಅಪ್ರೀತಿರ್ಮದ್ವಶೋ ನಾಯಂ ಇತಿ ಮತ್ಸರ ಈರಿತಃ (ಭಾಗವತ ತಾತ್ಪರ್ಯ)

ಮೇಲಿನ ಭಾಗವತ ತಾತ್ಪರ್ಯದಲ್ಲಿ ತಿಳಿಸಿದಂತೆ, ‘ಈ ವ್ಯಕ್ತಿಯು ನನ್ನ ವಶದಲ್ಲಿ ಇಲ್ಲವಲ್ಲಾ’ ಎಂಬ ಕೊರಗುವಿಕೆಯೇ ಮಾತ್ಸರ್ಯ. ರಾಮನಿಗೆ ಆ ಕೊರಗು ಇಲ್ಲ, ಏಕೆಂದರೆ, ಸಕಲ ಚರಾಚರ ಜಗತ್ತು ಇವನ ವಶದಲ್ಲೇ ಇದೆ. ಕುದುರೆಗಳಿಗೆ ಕೋಡುಗಳು ಇರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ, ರಾಮನಿಗೆ ಮಾತ್ಸರ್ಯವೆಂಬುದು ಇರಲು ಸಾಧ್ಯವಿಲ್ಲ.

ಯೋ ಯೋ ಗುಣೋ ನಾಮ ಸ ಏವ ರಾಮೇ ಯೋ ಯಶ್ಚ ದೋಷಃ ಸ ತು ನೈವ ತಸ್ಮಿನ್ | (ಸಂ। ರಾ | ೨।೧।೨೯)

ಯಾವ ಯಾವುದು ಗುಣವೆಂದು ಪ್ರಸಿದ್ಧವೋ, ಅದೆಲ್ಲವೂ ರಾಮನಲ್ಲಿ ಇದೆ. ಯಾವ ಯಾವುದು ದೋಷವೆಂಬುದು ಪ್ರಸಿದ್ಧವೋ, ಅವು ರಾಮನಲ್ಲಿ ಇಲ್ಲವೇ ಇಲ್ಲ!!

ಅಂತಹ ಗುಣಪೂರ್ಣ, ದೋಷ ದೂರ ರಾಮನು ನಮ್ಮನ್ನು ಸದಾ ರಕ್ಷಿಸಲಿ!