Thursday, March 25, 2021

Learn from Rama -9 Keep your body and mind healthy; never misuse the weakness of others

 Learn from Rama -9

 Keep your body and mind healthy; never misuse the weakness of others


अरोगस्तरुणो वाग्मी वपुष्मान्देशकालवित् |
लोके पुरुषसारज्ञस्साधुरेको विनिर्मितः || २-१-१८

Rama was youthful, was free of diseases and had a healthy-looking body. He was an effective speaker. He knew the right time and place for actions. He could grasp the worth of every individual. He was the one gentleman/pious soul born on earth.

Lord Rama had a disease-free, good body and a healthy mind. We must have both our mind and body be healthy to remain without disease. Many a times, we ignore one for the other. Rama is teaching us to remain so and lead a healthy and happy life.
     Rama was able to grasp the essence of every individual appearing before Him. Rama knew the strength and weakness of every person. But the pious gentleman (sadhu) that He was, He would never use that weakness against them. This is another learning we should have from the Lord. Many of the modern strategies teach people to misuse the other person’s weakness for personal gains and for ulterior motives. But Rama teaches a high moral standard - that one should never misuse the weakness of a person against him.
     Let such Rama provide us a healthy mind and body and make us follow His morals.
----------------------------------------

ಶ್ರೀರಾಮನಿಂದ ಕಲಿಯೋಣ – ೯

ದೇಹ-ಮನಸ್ಸನ್ನು ಆರೋಗ್ಯವಾಗಿಟ್ಟುಕೊ; ಇತರರ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳಬೇಡ


ಅರೋಗಃ-ತರುಣೋ ವಾಗ್ಮೀ ವಪುಷ್ಮಾನ್-ದೇಶಕಾಲವಿತ್ |
ಲೋಕೇ ಪುರುಷಸಾರಜ್ಞಃ-ಸಾಧುರೇಕೋ ವಿನಿರ್ಮಿತಃ || ೨-೧-೧೮

ರಾಮನು ತರುಣನೂ, ರೋಗರಹಿತನೂ, ಉತ್ತಮ ದೇಹವುಳ್ಳವನೂ ಆಗಿದ್ದನು. ಉತ್ತಮ ವಾಗ್ಮಿಯೂ ಆಗಿದ್ದ ಶ್ರೀರಾಮನು ಯಾವುದೇ ಕಾರ್ಯಕ್ಕೆ ತಕ್ಕ ಸಮಯ ಮತ್ತು ಸ್ಥಳವನ್ನು ತಿಳಿದವನಾಗಿದ್ದನು. ಪ್ರತಿ ವ್ಯಕ್ತಿಯ ಸಾರವನ್ನು ತಿಳಿದವನಾದ ರಾಮನು, ಪುಣ್ಯಪುರುಷನೂ, ಸಾಧುವೂ ಆಗಿದ್ದನು.


     ಶ್ರೀರಾಮನು ಆರೋಗ್ಯಪೂರ್ಣನೂ, ಉತ್ತಮವಾದ ದೇಹ ಮತ್ತು ಮನಸ್ಸು ಇರುವವನೂ ಆಗಿದ್ದನು. ನಮ್ಮ ದೇಹ ಮತ್ತು ಮನಸ್ಸು ಕುಶಲವಾಗಿದ್ದರೆ, ಯಾವುದೇ ರೋಗಗಳು ನಮ್ಮನ್ನು ಕಾಡುವುದಿಲ್ಲ. ಹೆಚ್ಚಿನಂಶ, ನಾವು ಒಂದರ ಆರೋಗ್ಯವನ್ನು ಮರೆತು ಮತ್ತೊಂದರ ಆರೋಗ್ಯದ ಕಡೆಗೆ ಮಾತ್ರ ಗಮನ ನೀಡುತ್ತೇವೆ. ರಾಮನು, ಆರೋಗ್ಯಮಯ ಸಂತಸಪೂರ್ಣ ಜೀವನಕ್ಕೆ ದೇಹ ಮತ್ತು ಮನಸ್ಸನ್ನು ಪ್ರಸನ್ನವಾಗಿಟ್ಟುಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಿದ್ದಾನೆ.
     ರಾಮನಿಗೆ ತನ್ನ ಎದುರಿನ ಪ್ರತಿಯೊಬ್ಬ ವ್ಯಕ್ತಿಯ ಸಾರವು ತಿಳಿದಿರುತ್ತಿತ್ತು. ಆ ವ್ಯಕ್ತಿಯ ದೌರ್ಬಲ್ಯ ಮತ್ತು ಶಕ್ತಿ ಎರಡನ್ನೂ ರಾಮನು ತಿಳಿದಿರುತ್ತಿದ್ದ. ಆದರೆ, ಸಾಧುವಾದ ರಾಮನು ಇತರರ ದೌರ್ಬಲ್ಯವನ್ನು ಎಂದಿಗೂ ಅವರ ವಿರುದ್ಧ ಉಪಯೋಗಿಸಿದವನಲ್ಲ. ರಾಮನಿಂದ ಕಲಿಯಬೇಕಾದ ಮತ್ತೊಂದು ವಿಷಯವಿದು. ಇತ್ತೀಚಿನ ನೀತಿಗಳು ಇತರರ ದೌರ್ಬಲ್ಯಗಳನ್ನು ಹೇಗೆ ಅವರ ವಿರುದ್ಧ ಪ್ರಯೋಗಿಸಬೇಕು ಮತ್ತು ಅದರಿಂದ ವೈಯುಕ್ತಿಕ ಲಾಭವನ್ನು ಹೇಗೆ ಪಡೆಯಬೇಕು ಎಂದು ಹೇಳಿಕೊಡುತ್ತವೆ. ಆದರೆ, ರಾಮನು ಉತ್ಕೃಷ್ಟವಾದ ನೀತಿಯನ್ನು ತಿಳಿಸಿ ಅದರಂತೆ ನಮಗೆ ನಡೆಯಲು ತಿಳಿಸುತ್ತಿದ್ದಾನೆ – ಎಂದಿಗೂ ಇತರರ ದೌರ್ಬಲ್ಯವನ್ನು ಅವರ ವಿರುದ್ಧ ಉಪಯೋಗಿಸಬೇಡ ಎಂದು.
     ಇಂತಹ ಸನ್ನಡತೆಯ ರಾಮನು, ನಮಗೂ ಆರೋಗ್ಯಭರಿತ ದೇಹ-ಮನಸ್ಸನ್ನು ನೀಡಿ, ನಮ್ಮನ್ನೂ ಅವನ ಶ್ರೇಷ್ಠ ನೀತಿಗಳನ್ನು ಅನುಸರಿಸುವಂತೆ ಮಾಡಲಿ.

Thursday, March 18, 2021

Learn from Rama -8: Choose the good over the pleasant; never go against scriptures

Learn from Rama -8

Choose the good over the pleasant; never go against scriptures


नाश्रेयसि रतो विद्वान्न विरुद्धकथारुचिः |
उत्तरोत्तरयुक्तीनां वक्ता वाचस्पतिर्यथा || २-१-१७
Rama was uninterested in activities, which were not beneficial to auspiciousness/moksha. The scholar that He was, He had no taste in unholy talks - the ones that were against scriptures and righteousness. Similar to Vachaspathi, His eloquent speech contained a series of strategies for action, in support of His contention.

Lord Rama is teaching two extremely important and never to be forgotten rules – especially for saadhakas/those in the spiritual path.
First rule is that never do anything that takes you against the moksha marga; and the second rule is that don’t waste time in unwanted talks and particularly the ones that are not sacred, the ones that go against the scriptures and the ones that show irreverence to God.
        We have heard about the Shreyas (the good) and preyas (the pleasant) from Kathopanishat. i.e., ones that help in moksha and the ones that give us material enjoyment. Rama, though being the prince living amid bhoga/enjoyment, was never interested in anything that went against Shreyas/moksha (Of course, He is the giver of Moksha). He is teaching us the same here – look for Shreyas (good) and not for preyas (pleasant)!
        Similarly, Rama disliked anything that went against scriptures, that went against God. He would not show any interest even the talks that went against scriptures. Even in today’s world, we see innumerable things that go against the scriptures. An intelligent man must see what is going against shastras and eliminate such things from his being. Shun those talks, those little chit-chats that are against shastras, says Rama. Lord, as Krishna explicitly tells the same in Bhagavadgita. (तस्मात् शास्त्रं प्रमाणं ते कार्याकार्य-व्यवस्थितौ.. 16.24).
       Through His acts, Lord Rama, teaches us these prime concepts. Don’t go against shastras, don’t waste time in unwanted talks; always focus on the path of moksha. Let such Rama, the giver of Moksha lead us in the Shreyas marga and teach us the pious shastras.

------------------

ಶ್ರೀರಾಮನಿಂದ ಕಲಿಯೋಣ – ೮

ಶ್ರೇಯಸ್ಸಿನ ಮಾರ್ಗವನ್ನೆ ಆರಿಸಿಕೊ; ಶಾಸ್ತ್ರ-ವಿರುದ್ದವಾದದನ್ನು ಬಿಡು


ನಾಶ್ರೇಯಸಿ ರತೋ ವಿದ್ವಾನ್ನ ವಿರುದ್ಧಕಥಾರುಚಿಃ |
ಉತ್ತರೋತ್ತರಯುಕ್ತೀನಾಂ ವಕ್ತಾ ವಾಚಸ್ಪತಿರ್ಯಥಾ || ೨-೧-೧೭

ಶ್ರೀರಾಮನು ಶ್ರೇಯೊ ಮಾರ್ಗಕ್ಕೆ, ಅಂದರೆ ಮೋಕ್ಷಮಾರ್ಗಕ್ಕೆ, ಅನುಕೂಲವಲ್ಲದ ಯಾವುದನ್ನು ಇಷ್ಟಪಡುತ್ತಿರಲಿಲ್ಲ. ವಿದ್ವಾಂಸನಾದ ರಾಮನಿಗೆ ಶಾಸ್ತ್ರಕ್ಕೆ ವಿರುದ್ಧವಾದ, ಧರ್ಮಕ್ಕೆ ವಿರುದ್ಧವಾದ, ಅಪವಿತ್ರವಾದ ಮಾತುಗಳಲ್ಲಿ, ಯಾವುದೇ ರುಚಿ ಇರಲಿಲ್ಲ. ವಾಚಸ್ಪತಿಯಂತೆ ಯುಕ್ತಿಗಳನ್ನು ಉಪಯೋಗಿಸಿ ವಾದಗಳಲ್ಲಿ ತೊಡಗುತ್ತಿದ್ದ ರಾಮನು ಅಪ್ರತಿಮ ಮಾತುಗಾರನಾಗಿದ್ದ.


ಸಾಧಕರಿಗೆ ತುಂಬಾ ಮುಖ್ಯವಾಗಿ ಬೇಕಾದ, ಎಂದಿಗೂ ಮರೆಯಬಾರದ ಎರಡು ವಿಶಿಷ್ಟ ನಿಯಮಗಳನ್ನು ರಾಮನು ಇಲ್ಲಿ ಹೇಳಿಕೊಡುತ್ತಿದ್ದಾನೆ. ಮೊದಲನೆ ನಿಯಮ: ಮೋಕ್ಷದ ಹಾದಿಯಲ್ಲಿ ನಡೆಸದ ಯಾವುದೇ ಕೆಲಸವನ್ನು ಮಾಡಬೇಡ. ಮತ್ತು ಎರಡನೆ ನಿಯಮ: ಅನಗತ್ಯವಾದ, ಅಪವಿತ್ರವಾದ ಅಶಾಸ್ತ್ರೀಯವಾದ ಮಾತುಗಳಲ್ಲಿ ತೊಡಗಬೇಡ.
           ಕಠೋಪನಿಷತ್ತಿನ ಶ್ರೇಯಸ್ ಮಾರ್ಗ ಮತ್ತು ಪ್ರೇಯಸ್ ಮಾರ್ಗದ ಬಗ್ಗೆ ನಾವು ಕೇಳಿದ್ದೇವೆ – ಅಂದರೆ, ಮೋಕ್ಷದ ಮಾರ್ಗ ಮತ್ತು ಭೋಗದ ಮಾರ್ಗ. ಅತ್ಯಂತ ಸಿರಿವಂತ ರಾಜಕುಮಾರನಾದರೂ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ, ರಾಮನು ಭೋಗದಲ್ಲಿ ಆಸಕ್ತಿ ಇಡುತ್ತಿರಲಿಲ್ಲ. ಅದನ್ನೇ ನಮಗೂ ರಾಮನು ಕಲಿಸುತ್ತಿದ್ದಾನೆ – ಪ್ರೇಯಸ್ಸಿನ ಮಾರ್ಗದಿಂದ ದೂರವಿರಿ, ಶ್ರೇಯಸ್ಸಿನ ಮಾರ್ಗವನ್ನು ಹಿಡಿಯಿರಿ!
         ಅಂತೆಯೇ, ಅಶಾಸ್ತ್ರೀಯ, ಅಧಾರ್ಮಿಕ, ದೇವರಿಂದ ದೂರವಾಗುವ ವಿಷಯಗಳಲ್ಲಿ, ಅವುಗಳನ್ನು ಮಾತನಾಡುವುದರಲ್ಲಿಯೂ ರಾಮನಿಗೆ ಆಸಕ್ತಿ ಇರಲಿಲ್ಲ. ಇಂದಿನ ಜೀವನದಲ್ಲಿ, ಹೆಜ್ಜೆಗೊಂದರಂತೆ ನಮಗೆ ಕಾಣಸಿಗುವ ಅಶಾಸ್ತ್ರೀಯವಾದ ವಿಷಯಗಳಿವೆ. ಜಾಣನಾದವನು, ಶಾಸ್ತ್ರಕ್ಕೆ ವಿರುದ್ಧವಾದದ್ದನ್ನು ಬಿಟ್ಟು ಬಿಡಬೇಕು. ಅವುಗಳ ವಿಷಯವಾಗಿ ಮಾತನಾಡಲೂ ಬಾರದು ಎನ್ನುತ್ತಿದ್ದಾನೆ ರಾಮ. ಕೃಷ್ಣನಾದಾಗಲೂ ದೇವರು ಇದನ್ನು ಭಗವದ್ಗೀತೆಯಲ್ಲಿ ಹೇಳುತ್ತಾನೆ (ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೆ ಕಾರ್ಯಾಕಾರ್ಯ ವ್ಯವಸ್ಥಿತೌ ೧೬.೨೪).
           ಇಂತಹ ನಡತೆಗಳಿಂದ ಪ್ರಮುಖವಾದ ಸಂಗತಿಗಳನ್ನು ರಾಮನು ಹೇಳಿಕೊಡುತ್ತಿದ್ದಾನೆ. ಅಶಾಸ್ತ್ರೀಯವಾದದ್ದನ್ನು ಮಾಡಬೇಡ. ಅಪವಿತ್ರವಾದ ಮಾತುಗಳನ್ನು ಆಡಬೇಡ; ಕೇವಲ ಮೋಕ್ಷವನ್ನೇ ಲಕ್ಷ್ಯವಾಗಿಟ್ಟುಕೊ. ಮೋಕ್ಷದಾತನಾದ ಶ್ರೀರಾಮನು, ನಮ್ಮನ್ನು ಶ್ರೇಯೋ ಮಾರ್ಗದಲ್ಲಿ ನಡೆಸಿ, ಶುದ್ಧ ಶಾಸ್ತ್ರಗಳನ್ನು ಮಾತ್ರ ಬೋಧಿಸಲಿ. 

Friday, March 12, 2021

Learn from Rama -7 (Rama with His citizens: Happy when others are happy; sad when others are sad.)

Learn from Rama -7

Rama with His citizen: Happy when others are happy; sad when others are sad.

व्यसनेषु मनुष्याणां भृशं भवति दुःखितः | उत्सवेषु सर्वेषु पितेव परितुष्यति || --४०
Rama feels very sad if any of His citizen are afflicted; and Rama feels delighted in all the celebrations of people during the happy occasions of child-birth and the like, just as their own father.

The biggest quality every person should have is, love towards fellow beings, and compassion towards those in trouble. Rama’s compassion and care for His citizen shows us how a leader, nay, a human being should be.

Such was Rama’s love towards His citizen, that If any person in His kingdom was in pain, Rama would be hurt. If anyone was having a misery, Rama would feel the pain. If any person was suffering due to any distress, Rama would be sad. Rama would try and reduce/remove their reason for distress or give them some solace by staying around. And if anybody had any happy occasion and celebration, be it social or private, Rama would feel delighted.

Every home in Ayodhya had some occasion for celebration – marriage, upanayana, namakarana, child birth etc. Rama would be present for that occasion without having to be invited – without having any ego. Rama would behave as if it were His own blood relation and would attend those functions, celebrate along with the people and delight in their happiness, just like how a father would do during the celebrations of his own children.

It is exactly in contrast with our behaviour these days of waiting for a formal invitation for everything from the host and expecting them to force us into accepting the invite. Rama has no such ego! Rama was there for the people of Ayodhya in grief and joy alike; hence did they love and worship Him unconditionally and submit themselves to Rama completely.

“This body and soul, the grief and joy belong to Him! (तनु निन्नदु जीवन निन्नदु रंग  | अनुदिनदलि बाहॊ सुखदुःख निन्नदय्य - Kanakadasa). Rama through such innumerable acts of kindness, love, and compassion towards His citizens, teaches all of us to follow His footsteps. Let such affectionate Rama, our father, always be with us during our grief and joy.

-------------




ಶ್ರೀರಾಮನಿಂದ ಕಲಿಯೋಣ – ೭

ಪ್ರಜೆಗಳೊಂದಿಗೆ ರಾಮ; ಇತರರ ಸುಖವೆ ನನ್ನ ಸುಖ; ದುಃಖವೆ ನನ್ನ ದುಃಖ


ವ್ಯಸನೇಷು ಮನುಷ್ಯಾಣಾಂ ಭೃಶಂ ಭವತಿ ದುಃಖಿತಃ |
ಉತ್ಸವೇಷು ಚ ಸರ್ವೇಷು ಪಿತೇವ ಪರಿತುಷ್ಯತಿ || ೨-೨-೪೦


ಪ್ರಜೆಗಳಿಗೆ ದುಃಖವಾದಾಗ ರಾಮನು ತುಂಬಾ ಸಂಕಟಪಡುತ್ತಾನೆ. ಜನರ ಮನೆಗಳಲ್ಲಿ ಉತ್ಸವವಿದ್ದರೆ, ತಂದೆಯು ಸಂತಸ ಪಡುವಂತೆ, ರಾಮನು ಅತ್ಯಂತ ಸಂತೋಷ ಪಡುತ್ತಾನೆ.



ಮಾನವನ ಉತ್ತಮ ಗುಣವೆಂದರೆ, ಇತರರಲ್ಲಿ ಪ್ರೀತಿ ಮತ್ತು ದುಃಖದಲ್ಲಿರುವವರಲ್ಲಿ ಅನುಕಂಪ. ಪ್ರಭು ಶ್ರೀರಾಮನು ತನ್ನ ಪ್ರಜೆಗಳನ್ನು ತನ್ನವರಂತೆ ಪ್ರೀತಿಸುತ್ತಿದ್ದನು. ಕಷ್ಟದಲ್ಲಿರುವವರಲ್ಲಿ ಅನುಕಂಪ ತೋರುತ್ತಿದ್ದನು. ರಾಮನ ಈ ಗುಣ, ಕೇವಲ ನಾಯಕರಲ್ಲಿ ಇರಬೇಕಾದ ಗುಣವಲ್ಲ, ಪ್ರತಿಯೊಬ್ಬ ಮಾನವನಲ್ಲೂ ಇರಬೇಕಾದ ಮಾನವೀಯತೆ.

ಪ್ರಜೆಗಳಲ್ಲಿ ರಾಮನ ಪ್ರೀತಿ ಎಂತಹುದು ಎಂದರೆ, ತನ್ನ ರಾಜ್ಯದಲ್ಲಿ ಯಾರಾದರು ದುಃಖದಲ್ಲಿದ್ದರೆ, ರಾಮನು ನೋಯುತ್ತಿದ್ದ. ಯಾರಿಗಾದರೂ ಕಷ್ಟ ಬಂದರೆ, ರಾಮನು ಸಂಕಟಪಡುತ್ತಿದ್ದ. ಯಾರಾದರೂ ವ್ಯಸನದಲ್ಲಿದ್ದರೆ, ರಾಮನು ಕ್ಲೇಶಪಡುತ್ತಿದ್ದ. ರಾಮನು ಅವರ ಕಷ್ಟ ಪರಿಹಾರ ಮಾಡುವವರೆಗೋ ಅಥವ ದುಃಖ ದೂರವಾಗುವರೆಗೋ ಇದ್ದು, ಸಾಂತ್ವನ ನೀಡುತ್ತಿದ್ದ. ಹಾಗೆಯೇ, ಯಾರಾದರೂ, ಮನೆಯಲ್ಲಿಯೇ ಆಗಲಿ ಗ್ರಾಮದಲ್ಲಿಯೇ ಆಗಲಿ, ಸಂಭ್ರಮಾಚರಣೆಯಲ್ಲಿದ್ದರೆ, ರಾಮನು ಸಂತೋಷ ಪಡುತ್ತಿದ್ದ.

ಅಯೋಧ್ಯೆಯ ಪ್ರತಿ ಮನೆಯಲ್ಲಿಯೂ ಸಂಭ್ರಮಕ್ಕೆ ಕಾರಣವಿರುತ್ತಿದ್ದವು – ಮದುವೆ, ಮುಂಜಿ, ನಾಮಕರಣ, ಹುಟ್ಟು ಹಬ್ಬ ಇತ್ಯಾದಿ. ಅಂತಹ ಸಂದರ್ಭದಲ್ಲಿ ರಾಮನು ಅಲ್ಲಿಗೆ ಹಾಜರಾಗುತ್ತಿದ್ದ, ರಾಮನನ್ನು ಯಾರೂ ಕರೆಯಬೇಕಾಗಿರಲಿಲ್ಲ, ಅವನಿಗೆ ಆ ಅಹಂಕಾರವಿಲ್ಲ. ತಮ್ಮ ರಕ್ತಸಂಬಂಧಿಗಳ, ತನ್ನದೇ ಮಕ್ಕಳ ಮದುವೆ ಇತ್ಯಾದಿ ಸಂದರ್ಭಗಳಲ್ಲಿ ಕರೆಯದೆ ಹೋಗಿ, ತಂದೆಯು ಸಂಭ್ರಮ ಪಡುವಂತೆ, ರಾಮನೂ ಅವರೊಂದಿಗೆ ಸಡಗರದಿಂದ ಪಾಲ್ಗೊಂಡು, ಅವರ ಸುಖಗಳಲ್ಲಿ ಸಂತಸ ಪಡುತ್ತಿದ್ದ!

ಇಂದಿನ ನಮ್ಮ ಆಚರಣೆಯೋ ಇದಕ್ಕೆ ತದ್ವಿರುದ್ಧ – “ಅಧಿಕೃತ ಆಹ್ವಾನವಿಲ್ಲ, ತುಂಬಾ ಒತ್ತಾಯ ಮಾಡಲಿಲ್ಲ, ಗೊತ್ತಿದ್ದರೂ ಹೋಗಲಾರೆ” – ಎಂದೆಲ್ಲ ಅಹಂಕಾರದಿಂದ ಮೆರೆವ ನಾವು ವಿನಯಭರಿತನಾದ ರಾಮನಿಂದ ಎಷ್ಟು ಕಲಿಯಬೇಕು!! ಅಯೋಧ್ಯೆಯ ಜನರಿಗೆ ರಾಮನು, ಸುಖ-ದುಃಖದ ಸಂದರ್ಭಗಳಲ್ಲಿ ಸದಾ ಇರುತ್ತಿದ್ದರಿಂದಲೇ, ಪ್ರಜೆಗಳಿಗೆ ರಾಮನ ಮೇಲೆ ಅಂತಹ ಭಕ್ತಿ-ಪ್ರೇಮ ಮತ್ತು ಸಂಪೂರ್ಣ ಶರಣಾಗತಿ.

‘ತನು ನಿನ್ನದು ಜೀವನ ನಿನ್ನದು ರಂಗ, ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ’ (ಕನಕದಾಸರು). ತನ್ನ ಪ್ರಜೆಗಳಲ್ಲಿ ಕರುಣೆ ತೋರುವ, ಕೃಪೆ ಮಾಡುವ, ಅವರನ್ನು ಪ್ರೀತಿಸುವ ಇಂತಹ ಅಗಣಿತ ಗುಣ-ನಡೆಗಳಿಂದ ಆ ರಾಮಚಂದ್ರನು ನಮಗೂ ತನ್ನ ದಾರಿಯಲ್ಲಿ ನಡೆಯಲು ಕಲಿಸುತ್ತಿದ್ದಾನೆ. ಅಂತಹ ಪಿತೃಸ್ವರೂಪಿಯಾದ ಶ್ರೀರಾಮನು ನಮ್ಮೊಡನೆ ಸುಖ-ದುಃಖದಲ್ಲಿ ಸದಾ ಇರಲಿ.

Thursday, March 04, 2021

Learn from Rama -6 (Rama with His citizens: Mingle with your men)

Learn from Rama -6

Rama with His citizen: Mingle with your men


पौरान् स्वजनवन्नित्यं कुशलं परिपृच्छति | पुत्रेष्वग्निषु दारेषु प्रेष्यशिष्यगणेषु च ||
निखिलेनानुपूर्व्याच्च पिता पुत्रानिवौरसान् | २-२-३८


Rama enquires about the well-being of his people, as though they were his own, like a father does to his sons. He asks about their wives and children, about their servants and students, and in a perfect order
.

Rama, the prince of one of the biggest Kingdom of those times, is very humble and mingles with His citizens in a very simple manner. With His limitless love, Rama, when He meets the citizens, asks them about their kith and kin, even about their students and servants. He is not doing it superficially; He knows every person in Ayodhya and hence His queries are genuine. Rama is not enquiring just about the rich and popular people, He is also inquiring about the well-being of students, of servants of the house that He visits, such is His affection.
  Even at the Ashramas, Rama after paying due respects to the Rishis, asks 'Are your disciples serving you by properly performing their actions?' And all this in a perfect order of - Starting with the senior-most in the house/ashram and then to the juniors.  Rama, through His actions, is teaching us to have compassion, to mingle with everyone and to share the love.
  It may be comparable to the love a father has towards his children. Indeed, is He not our father?! Let such affectionate Rama, Gunabhirama, always love us and take care of our well-being.
-------------------------

ಶ್ರೀರಾಮನಿಂದ ಕಲಿಯೋಣ – ೬ 

ಪ್ರಜೆಗಳೊಂದಿಗೆ ರಾಮ; ಜನರೊಳೊಂದಾಗು


ಪೌರಾನ್ ಸ್ವಜನವನ್ನಿತ್ಯಂ ಕುಶಲಂ ಪರಿಪೃಚ್ಛತಿ |
ಪುತ್ರೇಷ್ವಗ್ನಿಷು ದಾರೇಷು ಪ್ರೇಷ್ಯಶಿಷ್ಯಗಣೇಷು ಚ ||
ನಿಖಿಲೇನಾನುಪೂರ್ವ್ಯಾಚ್ಚ ಪಿತಾ ಪುತ್ರಾನಿವೌರಸಾನ್ | ೨-೨-೩೮

ಪ್ರಜೆಗಳ ಸೌಖ್ಯದ ಬಗ್ಗೆ ಕಾಳಜಿಯುಳ್ಳ ರಾಮನು, ತಂದೆಯು ತನ್ನ ಮಕ್ಕಳ ಬಗ್ಗೆ ಪ್ರಶ್ನಿಸುವಂತೆಯೇ, ಪ್ರಜೆಗಳಲ್ಲಿಯೂ ವಿಚಾರಿಸುತ್ತಾನೆ. ಅವರ ಮಡದಿ-ಮಕ್ಕಳ ಬಗ್ಗೆ, ಸೇವಕರ, ವಿದ್ಯಾರ್ಥಿಗಳ ಬಗ್ಗೆ ಕ್ರಮವಾಗಿ ಪ್ರಶ್ನಿಸಿ ವಿಚಾರಿಸಿಕೊಳ್ಳುತ್ತಾನೆ.

ನಿಗರ್ವಿಯಾದ, ವಿನಯವಂತನಾದ ಶ್ರೀ ರಾಮನು ಪ್ರಜೆಗಳೊಂದಿಗೆ ಆನಂದದಿಂದ ಅತ್ಯಂತ ಸಹಜವಾಗಿ  ಹೊಂದಿಕೊಳ್ಳುತ್ತಾನೆ. ಪ್ರಜೆಗಳನ್ನು ಭೇಟಿಯಾದಾಗ ರಾಮನು, ಅವರ ಮಡದಿ-ಮಕ್ಕಳ-ಮನೆಯ ವಾರ್ತೆಯನ್ನು ಕೇಳುತ್ತಾನೆ. ಎಣೆಯಿರದ ಪ್ರೀತಿಯಿಂದ ಅವರ ಸೇವಕರ ಬಗ್ಗೆಯೂ, ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆಯೂ ವಿಚಾರಿಸುತ್ತಾನೆ. ಇದು ಕೇವಲ ಮೇಲ್ಮೆಯ ವಿಚಾರಣೆಯಲ್ಲ. ಆತನಿಗೆ ಅಯೋಧ್ಯೆಯ ಪ್ರತಿಯೊಬ್ಬ ಪ್ರಜೆಯ ವಿಷಯ ತಿಳಿದಿದೆ, ಆದ್ದರಿಂದ ರಾಮನಿಗೆ ಇದು ಅತ್ಯಂತ ಸಹಜ ಹಾಗೂ ನಟನೆಯಿಲ್ಲದ ನಡತೆ. ಅಲ್ಲದೇ, ರಾಮನು ಕೇವಲ ಸಿರಿವಂತರ, ವಿಖ್ಯಾತ ವ್ಯಕ್ತಿಗಳ ಬಗ್ಗೆಯಲ್ಲದೇ, ಮನೆ-ಮನೆಗಳಲ್ಲಿನ ಸೇವಕರ ಬಗ್ಗೆಯೂ ತಿಳಿದುಕೊಳ್ಳುತ್ತಾನೆ.
    ಆಶ್ರಮಗಳಿಗೆ ಹೋದಾಗ, ಋಷಿ-ಮುನಿಗಳಿಗೆ ವಂದಿಸಿದ ನಂತರ, ಆಸ್ಥೆಯಿಂದ ಅವರಲ್ಲಿ ವಿಚಾರಿಸುತ್ತಾನೆ ‘ನಿಮ್ಮ ಶಿಷ್ಯರು ನಿಮಗೆ ಸರಿಯಾಗಿ ಸೇವೆ ಮಾಡುತ್ತಿದ್ದಾರಷ್ಟೆ? ತಮ್ಮ-ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರಷ್ಟೆ?’ ಇವೆಲ್ಲವೂ ಶುದ್ಧವಾದ ಕ್ರಮದಿಂದ ಪ್ರಶ್ನಿಸುತ್ತಾನೆ – ಹಿರಿಯರಿಂದ ಶುರುಮಾಡಿ ಕಿರಿಯರ ತನಕ. ದಯಾಳುವಾದ ರಾಮನು, ತನ್ನ ಇಂತಹ ನಡತೆಯಿಂದ ನಮಗೂ ಕಲಿಸುತ್ತಿದ್ದಾನೆ – ಎಲ್ಲರೊಡನೆ ಬೆರೆಯಿರಿ, ಪ್ರೀತಿಯನ್ನು ಹಂಚಿರಿ  
    ತಂದೆಯು ತನ್ನ ಮಕ್ಕಳಲ್ಲಿ ಕಾಣಬಹುದಾದ ಪ್ರೇಮಕ್ಕೆ ವಾತ್ಸಲ್ಯಕ್ಕೆ ರಾಮನ ಈ ನಡತೆಯನ್ನು ಹೋಲಿಸಬಹುದೇನೋ. ರಾಮನು ನಮ್ಮೆಲ್ಲರ ತಂದೆಯಲ್ಲವೇ? ಇಂತಹ ರಾಮನು, ಗುಣಾಭಿರಾಮನು, ನಮ್ಮನ್ನು ಎಂದೆಂದಿಗೂ ಪ್ರೀತಿಸಲಿ, ನಮ್ಮನ್ನು ಸೌಖ್ಯದಿಂದಿರಿಸಲಿ