Tuesday, May 11, 2021

Learn from Rama -14 – No binge shopping; never remain idle

 Learn from Rama -14 – No binge shopping; never remain idle


श्रैष्ठ्यं शास्त्रसमूहेषु प्राप्तो व्यामिश्रकेषु च |
अर्थधर्मौ च संगृह्य सुखतन्त्रो न चालसः ||  (वा रा २-१-२७)

Rama was proficient in Shastras as well as other works like dramas, poems (also shastras and their subsidiaries). He enjoyed the pleasures (comforts) only after understanding the principles of righteousness and only after checking the economy and its soundness. Rama never remained idle.

    This is in continuation to the previous verse where we saw that Rama was careful about how the money is spent. This verse further explains Rama’s position. Lord Rama seems to be saying no to the binge shopping culture we see today. Spending money on essentials is important. But it should be exceed our necessities; and when anything is bought, one should validate whether its economical, whether it fits in line with one’s finances and whether it follows the principles of righteousness.
    But it does not mean that one should not enjoy the pleasures. Rama enjoys all the pleasures, but without breaking the principles mentioned above. Shastras say: अनिषिद्ध सुखत्यागि पशुरेव न संशयः (Isn’t a person not enjoying unforbidden pleasure, similar to an animal?)
    A person should enjoy the comforts without being a miser, but within the permissive limits of both righteousness and the economics.
    The other attribute we see in Lord Rama is that He is never inactive. Idleness is seen everywhere as a rust attaching to good metals. A person must always be active. Rama, though a rich prince raised in the palace with all comforts, is never idle.
    Let such Rama who activates every person in this world, to do everything, make us enjoy the pleasures following the path of righteousness.

-------------------

ಶ್ರೀರಾಮನಿಂದ ಕಲಿಯೋಣ – ೧೪ – ಕೊಳ್ಳುಬಾಕತನ ಬೇಡ; ಆಲಸ್ಯವೆಂದಿಗೂ ಬೇಡ

ಶ್ರೈಷ್ಠ್ಯಂ ಶಾಸ್ತ್ರಸಮೂಹೇಷು ಪ್ರಾಪ್ತೋ ವ್ಯಾಮಿಶ್ರಕೇಷು |
ಅರ್ಥಧರ್ಮೌ ಸಂಗೃಹ್ಯ ಸುಖತನ್ತ್ರೋ ಚಾಲಸಃ || (ವಾ ರಾ --೨೭)

ಶ್ರೀರಾಮನು ಶಾಸ್ತ್ರಗಳಲ್ಲಿ ಪ್ರವೀಣನು, ಉಪಶಾಸ್ತ್ರಗಳಲ್ಲಿಯೂ (ನಾಟಕ, ಕವನ ಮೊದಲಾದವುಗಳಲ್ಲಿಯೂ) ನಿಷ್ಣಾತನು. ಆದರೆ ಅವನು ಧರ್ಮಕ್ಕೆ ಅನುಗುಣವಾಗಿ ಸುಖವನ್ನು ಭೋಗಿಸುತ್ತಿದ್ದನು, ಹಾಗೆಯೇ, ಆ ಭೋಗವು ಆರ್ಥಿಕತೆಗೆ ಅನುಗುಣವಾಗಿದೆಯೇ ಎಂದು ಚಿಂತಿಸುತ್ತಿದ್ದನು. ರಾಮನು ಎಂದಿಗೂ ಆಲಸ್ಯದಿಂದ ಇರುತ್ತಿರಲಿಲ್ಲ.

ನಾವು ಹಿಂದೆ ಗಮನಿಸಿದ ಶ್ಲೋಕದಲ್ಲಿ ರಾಮನು ಹಣವನ್ನು ವ್ಯಯಿಸುವುದರಲ್ಲಿ ಇರಬೇಕಾದ ಎಚ್ಚರವನ್ನು ತೋರಿಸಿದ್ದನು. ಅದರ ಮುಂದುವರಿದ ಭಾಗದಂತಿರುವ ಇಲ್ಲಿನ ಶ್ಲೋಕವು ಇಂದಿನ ಕೊಳ್ಳುಬಾಕ ಸಂಸ್ಕೃತಿಯನ್ನು ಖಂಡಿಸುವಂತಿದೆ. ಅಗತ್ಯವಿರುವ ವಸ್ತುಗಳನ್ನು ಕೊಳ್ಳಲೇಬೇಕು. ಅಗತ್ಯವಿರುವ ಅಗತ್ಯವಿರುವಷ್ಟು ವಸ್ತುಗಳನ್ನೇ ಕೊಳ್ಳಬೇಕು. ಆದರೆ ವಸ್ತುವೊಂದನ್ನು ಕೊಂಡಾಗ ಇದಕ್ಕೆ ತೆತ್ತ ಬೆಲೆ ಸರಿಯಾಗಿದೆಯೇ, ನಮ್ಮ ಆರ್ಥಿಕತೆ ಅನುಗುಣವಾಗಿದೆಯೇ, ಧಾರ್ಮಿಕವಾದ ವ್ಯಯವೇ ಎಂದು ಚಿಂತಿಸಬೇಕು.

 ಆದರೆ, ಸುಖವನ್ನೇ ಭೋಗಿಸಬಾರದು ಎಂದಲ್ಲ. ರಾಮನು ಎಲ್ಲಾ ಸುಖಗಳನ್ನು ಭೋಗಿಸುತ್ತಾನೆ. ಆದರೆ ಇದು ಮೇಲಿನ ಅಂಶಗಳನ್ನು ಒಳಗೊಂಡಂತೆ ಇರುತ್ತಿತ್ತು. “ಅನಿಷಿದ್ಧ ಸುಖತ್ಯಾಗಿ ಪಶುರೇವ ನ ಸಂಶಯಃ” ಎಂದು ಶಾಸ್ತ್ರ ಹೇಳುತ್ತದೆ. (ನಿಷಿದ್ಧವಲ್ಲದ ಸುಖವನ್ನು ಭೋಗಿಸದೇ ಇರುವವನು ಪಶುವಿನಂತಲ್ಲವೇ?).

ಸುಖವನ್ನು ಹೊಂದುವಾಗ ಜುಗ್ಗತನವನ್ನು ಮಾಡದೇ, ಧಾರ್ಮಿಕತೆಯ ಮತ್ತು ಆರ್ಥಿಕತೆಯ ಪರಿಧಿಯೊಳಗೇ ನಡೆದುಕೊಂಡು ವಿಷಯವನ್ನು ಅದರ ಆನಂದವನ್ನು ಹೊಂದಬೇಕು.

ಗುಣಾಭಿರಾಮನ ಮತ್ತೊಂದು ಗುಣವೆಂದರೆ ಆತನು ಎಂದಿಗೂ ಆಲಸ್ಯದಿಂದಿರುವವನಲ್ಲ. ಈ ಆಲಸ್ಯವೆಂಬುದು, ಉತ್ತಮ ಲೋಹಗಳಿಗೆ ತಗುಲಿಕೊಳ್ಳುವ ತುಕ್ಕಿನಂತೆ. ಒಬ್ಬ ವ್ಯಕ್ತಿಯೂ ಸದಾ ಕ್ರಿಯಾಶೀಲನಾಗಿರಬೇಕು. ರಾಮನಾದರೂ, ಶ್ರೀಮಂತ ರಾಜ ಕುಟುಂಬದ ರಾಜಕುಮಾರನಾದರೂ, ಅರಮನೆಯಲ್ಲಿನ ಸಕಲ ಭೋಗಳಲ್ಲಿ ಬೆಳೆದಿದ್ದರೂ, ಎಂದಿಗೂ ಆಲಸಿಯಾಗಿರಲಿಲ್ಲ.

ಪ್ರತಿಯೊಬ್ಬ ವ್ಯಕ್ತಿಯನ್ನೂ ಪ್ರವರ್ತಿಸುವ ಶ್ರೀರಾಮನು, ನಾವು ಧರ್ಮ ಮಾರ್ಗದಲ್ಲಿ ನಡೆಯುತ್ತಾ ಸುಖ ಭೋಗಿಸುವಂತೆ ಸಲಹಲಿ.

No comments: