Thursday, April 29, 2021

Learn from Rama -13 – Know how to earn well and how to spend well

 Learn from Rama -13Know how to earn well and how to spend well

सत्संग्रहप्रग्रहणे स्थानविन्निग्रहस्य |
आयकर्मण्युपायज्ञः संदृष्टव्ययकर्मवित् ||  (वा। रा। --२६)

Lord Rama could identify pious men and protect them. He knew the men worthy of reprimand. He knew the method of tapping source of income, (without oppressing people) and also knew the art of spending money, as mentioned in shastras.

Sri Rama was expert in gathering and patronizing pious men and would protect them. As a King, He also knew whom to control and punish. For a King, it is important to generate sources of income to the Kingdom, but by righteous means and not by oppressing the citizens. Rama knew the ways of getting income without hurting His men and without burdening them with taxes.

Not just gathering money, spending money is also as important as earning it. Every rupee that is spent should be tracked down. Lord Rama, knew the economic shastras and was well versed on the ways of spending money carefully - neither by being a miser nor by being a spendthrift. This applies not just to a King, but to every common man.

Srimad Bhagavata says:

धर्माय यशसे-अर्थाय कामाय स्वजनाय च | पंचधा विभजन् वित्तं इहामुत्र च मोदते || (८।१९।३७)

A person should divide his wealth into 5 parts and spend it: 1) For Dharma, 2) for fame, 3) for earning more wealth, 4) for enjoying pleasures and 5) for maintaining his people. Such a person will rejoice in this life as well as beyond.

Today many suggest spending money. But Rama, teaches us through His behavior that one should know how to earn without hurting others and spend such wealth carefully and righteously.

Let such Rama, bless us to earn all the purusharthas and spend the well-earned money on noble deeds.

-------------------------------------------------------------------------------

 

 ಶ್ರೀರಾಮನಿಂದ ಕಲಿಯೋಣ – ೧೩ - ಗಳಿಸುವುದನ್ನು ತಿಳಿ; ಸರಿಯಾಗಿ ವ್ಯಯಿಸುವುದನ್ನೂ ತಿಳಿ


ಸತ್ಸಂಗ್ರಹಪ್ರಗ್ರಹಣೇ ಸ್ಥಾನವಿನ್ನಿಗ್ರಹಸ್ಯ ಚ |
ಆಯಕರ್ಮಣ್ಯುಪಾಯಜ್ಞಃ ಸಂದೃಷ್ಟವ್ಯಯಕರ್ಮವಿತ್ || (ವಾ। ರಾ। ೨-೧-೨೬)

ಶ್ರೀರಾಮನು ಸಜ್ಜನರನ್ನು ಆದರಿಸಿ ರಕ್ಷಿಸುತ್ತಿದ್ದ. ಶಿಕ್ಷೆಗೆ ಒಳಪಡಬೇಕಾದ ಜನರನ್ನೂ ತಿಳಿದಿರುತ್ತಿದ್ದ. ಆತನಿಗೆ ಪ್ರಜೆಗಳನ್ನು ನೋಯಿಸದೇ, ರಾಜ್ಯ ಕೋಶಕ್ಕೆ ಆದಾಯ ತರುವ ಮಾರ್ಗಗಳ ಬಗ್ಗೆ ತಿಳಿದಿತ್ತು. ಹಾಗೆಯೇ, ಅರ್ಥ ಶಾಸ್ತ್ರಗಳಲ್ಲಿ ಹೇಳಿರುವಂತೆ ಸಂಪತ್ತನ್ನು ಖರ್ಚುಮಾಡುವ ಬಗ್ಗೆಯೂ ತಿಳಿದಿತ್ತು.
 
    ಪ್ರಭು ಶ್ರೀರಾಮನು ಸಜ್ಜನ/ಪಾವನ ಚರಿತ್ರರಾದ ಜನರನ್ನು ಆದರಿಸುತ್ತಾ ಅವರನ್ನು ರಕ್ಷಿಸುತ್ತಿದ್ದ. ಒಬ್ಬ ಆದರ್ಶ ರಾಜನಂತೆ, ರಾಮನಿಗೆ ಯಾರನ್ನು ನಿಯಂತ್ರಿಸಬೇಕು, ಶಿಕ್ಷಿಸಬೇಕು ಎಂದೂ ಸಹ ತಿಳಿದಿತ್ತು. ಒಬ್ಬ ರಾಜನಿಗೆ, ಕೋಶಕ್ಕೆ ಬರಬೇಕಾದ ಆದಾಯ ಸಂಗ್ರಹದ ಮೂಲಗಳ ಬಗ್ಗೆ ಜ್ಞಾನವಿರಬೇಕು. ಆದರೆ, ಇದರಿಂದ ಪ್ರಜೆಗಳಿಗೆ ಕಷ್ಟವಾಗಬಾರದು, ಮತ್ತು ಅದು ಧಾರ್ಮಿಕ ರೀತಿಯ ಆದಾಯವಾಗಿರಬೇಕು. ಶ್ರೀ ರಾಮನಿಗೆ ಇದು ಸ್ಪಷ್ಟವಾಗಿ ತಿಳಿದಿತ್ತು. ಹಾಗಾಗಿ, ಆತನು ಪ್ರಜೆಗಳಿಗೆ ಹೊರೆಯಾಗದ ಹಾಗೆಯೂ, ಕೋಶವನ್ನು ತುಂಬುವಂತಹ ಉಪಾಯವನ್ನು ತಿಳಿದಿದ್ದ.
    ಕೇವಲ ಹಣ ಸಂಪಾದನೆಯಲ್ಲ. ಅದನ್ನು ವ್ಯಯಿಸುವ ಮಾರ್ಗವು ಅಷ್ಟೇ ಮುಖ್ಯ. ರಾಜ್ಯದ ಕೋಶದಿಂದ ಹೊರಹೋಗುವ ಪ್ರತಿಯೊಂದು ರೂಪಾಯಿಯು ಲೆಕ್ಕಕೆ ಸಿಗಬೇಕು. ಅರ್ಥ ಶಾಸ್ತ್ರಗಳ ಉತ್ತಮ ಜ್ಞಾನವಿದ್ದ ಶ್ರೀರಾಮನು ಉಪಾಯದಿಂದ ಹಣವನ್ನು ಖರ್ಚು ಮಾಡುತ್ತಿದ್ದ. ಜುಗ್ಗತನವನ್ನೂ ತೋರದೆ, ಹಣವನ್ನೂ ಪೋಲೂ ಮಾಡದೆ, ಸಂಪತ್ತನ್ನು ಅನುಭೋಗಿಸುವುದು, ರಾಜನಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ.

ಶ್ರೀಮದ್ಭಾಗವತ ಹೇಳುತ್ತದೆ:
ಧರ್ಮಾಯ ಯಶಸೇ-ಅರ್ಥಾಯ ಕಾಮಾಯ ಸ್ವಜನಾಯ ಚ | ಪಂಚಧಾ ವಿಭಜನ್ ವಿತ್ತಂ ಇಹಾಮುತ್ರ ಚ ಮೋದತೇ || (೮।೧೯।೩೭)

    ಒಬ್ಬ ವ್ಯಕ್ತಿ ತನ್ನ ಸಂಪತ್ತನ್ನು ೫ ಭಾಗ ಮಾಡಿಕೊಂಡು ವ್ಯಯ ಮಾಡಬೇಕು ಎಂದು: ೧) ಧರ್ಮಕ್ಕಾಗಿ ಒಂದು ಭಾಗ ೨) ಯಶಸ್ಸಿಗಾಗಿ ಮತ್ತೊಂದು ೩) ಹೆಚ್ಚು ಹಣ ಮಾಡಲು ಮತ್ತೊಂದು ೪) ಭೋಗಕ್ಕಾಗಿ ೫) ತನ್ನ ಸ್ವಜನರಿಗಾಗಿ. ಹೀಗೆ ಸಮಂಜಸವಾಗಿ ಖರ್ಚು ಮಾಡಿದರೆ ಮನುಷ್ಯನ ಇಹ ಮತ್ತು ಪರದ ಸುಖಕ್ಕೆ ಕಾರಣವಾಗುತ್ತದೆ.
    ಇಂದು ಬಹುತೇಕರು ಕೇವಲ ಖರ್ಚು ಮಾಡುವ ಬಗ್ಗೆಯೇ ತಿಳಿಸುತ್ತಾರೆ. ಪ್ರಭು ರಾಮನು, ತನ್ನ ನಡತೆಯಿಂದ ತೋರಿಸುತ್ತಿದ್ದಾನೆ – ಇತರರಿಗೆ ತೊಂದರೆ ಕೊಡದೆ ಧರ್ಮಮಾರ್ಗದಿಂದ ದುಡಿ. ಹಾಗೆಯೇ ದುಡಿದ ಸಂಪತ್ತನ್ನು ಸಾವಧಾನದಿಂದ ಧಾರ್ಮಿಕವಾಗಿ ವ್ಯಯಿಸು.
    ಅಂತಹ ಪುರುಷೋತ್ತಮ ರಾಮನು, ನಮಗೆ ಎಲ್ಲಾ ಪುರುಷಾರ್ಥಗಳನ್ನು ಗಳಿಸುವಂತೆಯೂ, ಧಾರ್ಮಿಕವಾಗಿ ಗಳಿಸಿದ ಸಂಪತ್ತನ್ನು ಸದ್ವ್ಯಯ ಮಾಡುವಂತೆಯೂ ಅನುಗ್ರಹಿಸಲಿ.

No comments: