Learn from Rama -12 – Read the shastras well; be judicious
शास्त्रज्ञश्च कृतज्ञश्च पुरुषान्तरकोविदः |
यः प्रग्रहानुग्रहयोर्यथान्यायं विचक्षणः || वा।रा।
२-१-२५
Lord Rama was well-versed in shastras/sacred literature. He was thankful for the services rendered by others. He understood the differences among men/He could read people’s minds. As a King, as a judge, He could discriminate judiciously and knew whom to protect and whom to punish.
Rama, being omniscient, does not have to study the shastras when He takes avatar on Earth. But, He is teaching us here that we should study the shastras keenly - learn the tenets from our shastras and adhere to them (Refer to ‘Learn from Rama-8’ for more). We MUST include this in our busy schedule – Spend, at least, few minutes every day reading our shastras. (Gita, Ramayana, Bhagavata, Mahabharata, Puranas to start with)
Rama, as a judge, could discriminate whom to punish and whom to protect. He would identify good men and protect them. He would punish the people worthy of reprimand. Rama had no vengeance against anybody, but, as a King, it was Rama’s duty to punish those who were wrong and protect the righteous ones. Rama knew this exact way of discriminating as per the principles of judiciary.
Let such all-knowing Rama, make us read the shastras everyday and bless us to take right decision.
ಶ್ರೀರಾಮನಿಂದ ಕಲಿಯೋಣ – ೧೨ – ಶಾಸ್ತ್ರಗಳನ್ನು ಓದಿರಿ; ವಿಮರ್ಶಿಸಿ ನಿರ್ಧರಿಸಿ
ಶಾಸ್ತ್ರಜ್ಞಶ್ಚ ಕೃತಜ್ಞಶ್ಚ ಪುರುಷಾನ್ತರಕೋವಿದಃ |
ಯಃ ಪ್ರಗ್ರಹಾನುಗ್ರಹಯೋರ್ಯಥಾನ್ಯಾಯಂ ವಿಚಕ್ಷಣಃ || ವಾ।ರಾ। ೨-೧-೨೫
ಪ್ರಭು ಶ್ರೀರಾಮನು ಶಾಸ್ತ್ರಗಳಲ್ಲಿ ನಿಪುಣನಾಗಿದ್ದನು. ಸಹಾಯ ಮಾಡಿದವರಿಗೆ ಕೃತಜ್ಞನಾಗಿದ್ದನು. ಮನುಷ್ಯರ ನಡುವಿನ ವೈವಿಧ್ಯವನ್ನು ತಿಳಿದವನಾಗಿದ್ದನು/ಮನುಷ್ಯರ ಮನಸ್ಸನ್ನು ಬಲ್ಲವನಾಗಿದ್ದನು. ಒಬ್ಬ ನ್ಯಾಯಾಧೀಶನಾಗಿ, ರಾಜನಾಗಿ, ನ್ಯಾಯಯುತವಾಗಿ ಯಾರನ್ನು ರಕ್ಷಿಸಬೇಕು, ಯಾರನ್ನು ಶಿಕ್ಷಿಸಬೇಕು ಎಂದು ತಿಳಿದವನಾಗಿದ್ದನು.
ಶ್ರೀರಾಮನು, ಸರ್ವಜ್ಞನು. ಭೂಮಿಯಲ್ಲಿ ಅವತರಿಸಿದಾಗ, ಆತನು ಶಾಸ್ತ್ರಗಳನ್ನು ಓದಿ ತಿಳಿಯಬೇಕಾದದ್ದು ಇಲ್ಲ. ಆದರೆ, ಇಲ್ಲಿ ರಾಮನು ನಮಗೆ ತೋರಿಸಿಕೊಡುತ್ತಿದ್ದಾನೆ -ನಾವೂ ಸಹ ಶಾಸ್ತ್ರಗಳನ್ನು ಶ್ರದ್ಧೆಯಿಂದ ಓದಬೇಕು. ಶಾಸ್ತ್ರಗಳ ಮೂಲಕ ತತ್ವಗಳನ್ನು ತಿಳಿದು, ಅದರಂತೆ ನಡೆಯಬೇಕು. (‘ರಾಮನಿಂದ ಕಲಿಯೋಣ- ೮’ ಭಾಗದಲ್ಲಿ ಮತ್ತಷ್ಟು ಓದಬಹುದು). ನಮ್ಮ ಬಿಡುವಿರದ ಕೆಲಸಗಳಲ್ಲಿ, ಇದನ್ನು ನಾವು ಖಂಡಿತವಾಗಿ ಅಳವಡಿಸಿಕೊಳ್ಳಬೇಕು – ಕೆಲವು ನಿಮಿಷಗಳಾದರೂ, ಶಾಸ್ತ್ರಗಳನ್ನು ಪ್ರತಿದಿನವೂ ಓದೋಣ (ಗೀತೆ, ರಾಮಾಯಣ, ಭಾಗವತ, ಮಹಾಭಾರತ, ಪುರಾಣಗಳು ಇವುಗಳಿಂದ ತೊಡಗಿ..)
ರಾಮನು, ಒಬ್ಬ ನ್ಯಾಯಧೀಶನಾಗಿ, ಯಾರನ್ನು ಶಿಕ್ಷಿಸಬೇಕು, ಯಾರನ್ನು ರಕ್ಷಿಸಬೇಕು ಎಂದು ವಿಮರ್ಶಿಸುತ್ತಿದ್ದನು. ಸಜ್ಜನರ ರಕ್ಷಣೆ ಮತ್ತು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಿದ್ದನು. ರಾಮನಿಗೆ ಯಾರ ಮೇಲೆಯೂ ದ್ವೇಷವಿಲ್ಲ. ಆದರೆ, ತಪ್ಪಿತಸ್ಥರ ಶಿಕ್ಷೆ ಮತ್ತು ಮುಗ್ಧರ ಸಂರಕ್ಷಣೆ ಒಬ್ಬ ರಾಜನ ಕರ್ತವ್ಯ. ಇದನ್ನು ರಾಮನು ಸರಿಯಾಗಿ ವಿಮರ್ಶಿಸಿ, ನ್ಯಾಯಯುತವಾಗಿ ನಿರ್ಧಾರ ಮಾಡುತ್ತಿದ್ದನು,
ಇಂತಹ ಸರ್ವಜ್ಞನಾದ ರಾಮನು, ನಮಗೆ ಸದಾ ಶಾಸ್ತ್ರಗಳನ್ನು ಓದಲು ಪ್ರೇರಿಸಿ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೆ ಅನುಗ್ರಹಿಸಿಲಿ.
No comments:
Post a Comment