Thursday, April 08, 2021

Learn from Rama -10 – Don’t expose your emotions; Know when to give and when not to

 

Learn from Rama -10Don’t expose your emotions; Know when to give and when not to

निभृतः संवृताकारो गुप्तमन्त्रः सहायवान् |
अमोघक्रोधहर्षश्च त्यागसंयमकालवित् || --२३

Rama was modest. He did not let His emotions appear outwardly. He kept His thoughts/forethoughts, a secret. He helped others. His anger and pleasure were unfailing. He knew when to give and when to withhold.

A King is expected to keep many of the activities related to administration a secret. Lord Rama, the best King on earth, maintained this confidentiality as and when needed. Even His emotions and feelings were concealed. Many a times, we expose our emotions externally – be it happiness, sadness, excitement, despair, pain. Rama teaches us to check our emotions and hold them from being outwardly exposed. Moreover, for a King, or head of the family, a leader, or even for a person who wants to become a role model, it is very important to keep emotions and feelings in control.  Balancing of the emotions is taught in Bhagavadgita too by Lord as Krishna (सुखे दुःखे समे कृत्वा .... )

Rama, as a King, also knew when to give to His subjects and when to withhold from giving. This is also an extremely important learning for everyone, especially elders/parents. They should know when to give what the children ask for and when not to. Even for a small kid, the mother should know when to feed and when to stop; when the kids grow up too, the parents should know when to spend for them and when to control. Lord Rama, as the father of the nation, knew exactly how to take care of His citizens – giving them when they need it and withholding when not necessary.

Let Sri Rama, tread us in the right path by blessing us to balance our emotions and providing us with what is necessary. 

----------------------

ಶ್ರೀರಾಮನಿಂದ ಕಲಿಯೋಣ ೧೦: ಭಾವನೆಗಳ ಪ್ರದರ್ಶನ ಬೇಡ; ಯಾವಾಗ ಕೊಡಬೇಕು, ಯಾವಾಗ ಕೊಡಬಾರದು ತಿಳಿದುಕೊ

ನಿಭೃತಃ ಸಂವೃತಾಕಾರೋ ಗುಪ್ತಮಂತ್ರಃ ಸಹಾಯವಾನ್ |
ಅಮೋಘ-ಕ್ರೋಧ-ಹರ್ಷಶ್ಚ ತ್ಯಾಗ-ಸಂಯಮ-ಕಾಲವಿತ್ || ೨-೧-೨೩

ರಾಮನು ವಿನಯವಂತನು. ತನ್ನ ಭಾವನೆಗಳನ್ನು ಹೊರಗೆ ತೋರಿಕೊಳ್ಳುತ್ತಿರಲಿಲ್ಲ. ಅವನ ಆಲೋಚನೆಗಳನ್ನು ಗುಪ್ತವಾಗಿ ಇರಿಸುತ್ತಿದ್ದನು. ಇತರರಿಗೆ ಸಹಾಯಕನೂ ಆಗಿದ್ದನು. ಅವನ ಕೋಪ ಮತ್ತು ಹರ್ಷ ಎಂದಿಗೂ ವ್ಯರ್ಥವಾಗುತ್ತಿರಲಿಲ್ಲ. ಕೊಡುವುದು ಮತ್ತು ಕೊಡದಿರುವುದು ಇವೆರಡರ ಕಾಲವನ್ನು ರಾಮನು ಚೆನ್ನಾಗಿ ತಿಳಿದಿದ್ದನು.

ಒಬ್ಬ ರಾಜನು, ತನ್ನ ರಾಜ್ಯದ ಆಡಳಿತದ ಬಹು ಅಂಶಗಳನ್ನು ಗುಪ್ತವಾಗಿ ಇಡಬೇಕಾಗುತ್ತದೆ. ಭೂಪತಿಯಾದ ಪ್ರಭು ಶ್ರೀರಾಮನು, ವಿಶೇಷವಾಗಿ ಗೌಪ್ಯವಾಗಿ ಇಡಬೇಕಾದ ವಿಷಯಗಳನ್ನು ಎಂದಿಗೂ ಬಹಿರಂಗಗೊಳಿಸುತ್ತಿರಲಿಲ್ಲ. ಅವನ ಭಾವನೆಗಳನ್ನೂ ಸಹ ಮುಚ್ಚಿಟ್ಟುಕೊಂಡಿರುತ್ತಿದ್ದನು. ನಾವೆಲ್ಲರೂ, ಬಹುಶಃ ನಮ್ಮ ಭಾವನೆಗಳನ್ನು ಅಭಿಪ್ರಾಯಗಳನ್ನು ಹೊರಗೆ ತೋರಿಸಿಕೊಳ್ಳುತ್ತೇವೆ – ಸುಖ, ದುಃಖ, ಸಡಗರ, ನೋವು, ನಲಿವು ಇವೆಲ್ಲವನ್ನೂ ಹೊರಗೆ ತೋರಗೊಡುತ್ತೇವೆ. ರಾಮನು ನಮಗೆ ಕಲಿಸುವ ವಿಷಯ – ಭಾವನೆಗಳನ್ನು ಅನಗತ್ಯವಾಗಿ ತೋರಿಕೊಳ್ಳಬೇಡಿ, ಅವುಗಳನ್ನು ನಿಯಂತ್ರಿಸಿ! ಮಿಗಿಲಾಗಿ, ಒಬ್ಬ ರಾಜನಿಗೆ, ಮನೆಯ ಹಿರಿಯನಿಗೆ, ನಾಯಕನಿಗೆ, ಆದರ್ಶವ್ಯಕ್ತಿಗಳಾಗಿ ರೂಪಗೊಳ್ಳುತ್ತಿರುವವರಿಗೆ, ಭಾವನೆಗಳ ಹೊರ ಪ್ರದರ್ಶನ ಉತ್ತಮವಲ್ಲ. ಭಗವಂತನು ಕೃಷ್ಣಾವತಾರದಲ್ಲು ಭಗವದ್ಗೀತೆಯಲ್ಲಿ ಇದನ್ನೇ ತಿಳಿಸುತ್ತಾನೆ (ಸುಖೆ ದುಃಖೆ ಸಮೇ ಕೃತ್ವಾ...)

ರಾಜ ರಾಮಚಂದ್ರನಿಗೆ ತನ್ನ ಪ್ರಜೆಗಳ ಹಿತಕ್ಕಾಗಿ ಕೊಡುವುದೂ ತಿಳಿದಿತ್ತು, ಕೊಡದೇ ಇರುವುದೂ ತಿಳಿದಿತ್ತು. ಇದೂ ಸಹ ಬಹು ಮುಖ್ಯವಾದ ಕಲಿಕೆ, ಮುಖ್ಯವಾಗಿ ಹಿರಿಯರಿಗೆ/ಪೋಷಕರಿಗೆ. ಮಕ್ಕಳಿಗೆ ಯಾವಾಗ, ಎಷ್ಟು ಕೊಡಬೇಕು, ಕೊಡಬಾರದು ಎಂದು ಗೊತ್ತಿರಬೇಕು. ಚಿಕ್ಕ ಮಗುವಾದರೂ, ತಾಯಿಗೆ ಯಾವಾಗ ತಿನ್ನಿಸಬೇಕು, ಯಾವಾಗ ನಿಲ್ಲಿಸಬೇಕು ಎಂದು ತಿಳಿದಿರಬೇಕಾಗುತ್ತದೆ. ದೊಡ್ಡ ಮಕ್ಕಳಿಗೂ ಅವರು ಕೇಳಿದ್ದನ್ನು ಎಷ್ಟು ಮತ್ತು ಯಾವಾಗ ಕೊಡಬೇಕು ಎಂದು ಅರಿವಿರಬೇಕು, ಹಾಗೆಯೇ ಯಾವಾಗ ನಿಯಂತ್ರಿಸಬೇಕು ಎಂಬುದೂ ಮುಖ್ಯ. ಜಗತ್ಪತಿಯಾದ ರಾಮನಿಗೆ ತನ್ನ ಮಕ್ಕಳಂತಿರುವ ಪ್ರಜೆಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ಸರಿಯಾಗಿ ತಿಳಿದಿತ್ತು – ಬೇಕಾದಾಗ ಕೊಡುವುದೂ, ಬೇಡವೆಂದಾಗ ನಿಯಂತ್ರಿಸುವುದೂ ರಾಮನಿಗೆ ಅರಿವಿತ್ತು.

ಇಂತಹ ಶ್ರೀರಾಮನು, ನಮ್ಮನ್ನೂ ಸಹ ಉತ್ತಮ ಮಾರ್ಗದಲ್ಲಿ ನಡೆಸುತ್ತಾ, ನಮ್ಮ ಭಾವನೆಗಳ ನಿಯಂತ್ರಣಕ್ಕೆ ಆಶೀರ್ವದಿಸುತ್ತಾ, ನಮಗೆ ಅವಶ್ಯವಾದದ್ದು ಕೊಟ್ಟು ನಮ್ಮನ್ನು ಅನುಗ್ರಹಿಸಲಿ.

No comments: