Wednesday, February 17, 2021

Learn from Rama -1 (Speak softly; never react to harsh words)

 Learn from Rama -

Speak softly; never react to harsh words

नित्यं प्रशान्तात्मा मृदुपूर्वं तु भाषते |
उच्यमानोऽपि परुषं नोत्तरं प्रतिपद्यते || --१०

Rama is soft-spoken and has an ever-peaceful mind. He does not even react, if others use harsh words against Him.

‘I am a very nice person, I always speak softly, gently. But you see, there are others who are rude, and they make me speak rudely too!’ This is our everyday statement.  Every person rates himself/herself very highly. According to us, our words are gentle. But only when others instigate, we too speak their language swearing them using bad words. ‘Oh come on! You don’t expect me to just shut up if the opposite party speaks rudely at me. Why should I take it?

This is our argument. But Lord Rama teaches us: Speak softly always. If others’ reply is harsh, don’t bother to respond!

The war of words would never end, if we start shouting at each other! There are umpteen examples of broken relationships due to spoken words. As the saying goes ‘things you say about others, say a lot about you’. Peace of mind is the most important element sought after now. If we wish to have a pleasant self with a calm, peaceful and happy mind, we just need to follow what Rama advises us to do. Let such Rama who speaks soft and pleasing words, make us speak similarly by being inside us.

-----------------------------------------------------------------------------------------


ಶ್ರೀರಾಮನಿಂದ ಕಲಿಯೋಣ - ೧ (ಮೃದುನುಡಿಗಳನ್ನೇ ಆಡು; ಕಡುನುಡಿಗಳನ್ನು ಕಡೆಗಣಿಸು)

 ಸ ಚ ನಿತ್ಯಂ ಪ್ರಶಾನ್ತಾತ್ಮಾ ಮೃದುಪೂರ್ವಂ ತು ಭಾಷತೇ |
ಉಚ್ಯಮಾನೋಽಪಿ ಪರುಷಂ ನೋತ್ತರಂ ಪ್ರತಿಪದ್ಯತೇ || ೨-೧-೧೦

ಸದಾ ಪ್ರಸನ್ನನಾಗಿರುವ ರಾಮ, ಕೇವಲ ಮೃದು ನುಡಿಗಳನ್ನಷ್ಟೆ ಆಡುತ್ತಾನೆ. ಇತರರು ಕಡುನುಡಿಗಳನ್ನು ಆಡಿದರೆ, ಉತ್ತರವನ್ನೇ ನೀಡುವುದಿಲ್ಲ.

ನಾವೆಲ್ಲರೂ ಸಾಮಾನ್ಯವಾಗಿ ಹೇಳುವ ಮಾತು “ನಾನು ಸ್ವಭಾವತಃ ತುಂಬಾ ಒಳ್ಳೆಯ ಮನುಷ್ಯ, ನಾನು ಪ್ರಿಯವಾದದ್ದನ್ನೆ ಮಾತನಾಡುವುದು. ಆದರೆ ಇತರರು ನನಗೆ ಕೆಟ್ಟ ರೀತಿಯಿಂದ ಮಾತನಾಡುವ ಹಾಗೆ ಮಾಡುತ್ತಾರೆ’. ನಮ್ಮ ಪ್ರಕಾರ ನಾವು ತುಂಬಾ ಒಳ್ಳೆಯವರು, ಕೆಟ್ಟ ನಾಲಿಗೆ ನಮ್ಮಲ್ಲಿ ಇಲ್ಲವೇ ಇಲ್ಲ. ಇತರರ ದುಷ್ಪ್ರೇರಣೆಯಿಂದ ಮಾತ್ರ ನಮ್ಮಲ್ಲಿ ಕೆಟ್ಟ ಬೈಗುಳಗಳು, ಕಠೋರ ವಾಕ್ಯಗಳು ಬರುತ್ತವೆ. ‘ನಾನು ತುಂಬಾ ಚೆನ್ನಾಗಿಯೇ ಮಾತನಾಡುತ್ತೇನೆ. ಆದರೆ ಇತರರು ಹಾಗೆ ಮಾತನಾಡಬೇಕಲ್ಲ? ಅವರು ಕಠಿಣ/ಕಠೋರ ಶಬ್ದಗಳಿಂದ ನನ್ನ ಬಳಿ ಮಾತನಾಡಿದರೆ? ನನ್ನ ಒಳ್ಳೆಯತನಕ್ಕೆ ಬೆಲೆ ಇಲ್ಲವೆ? ಆದ್ದರಿಂದ, ನಾನೂ ಅವರಂತೆ ಕೆಟ್ಟ ಮಾತುಗಳಿಂದ, ದುರ್ವಚನಗಳಿಂದ ಅವರನ್ನು ನಿಂದಿಸುತ್ತೇನೆ’. ಅಲ್ಲವೇ ಮತ್ತೆ? ಒಳ್ಳೆಯ ಮಾತಿನಲ್ಲೇ ಮಾತನಾಡುವ ನಮ್ಮನ್ನು ಕೆಣಕಿದರೆ ಸುಮ್ಮನಿರಲಾದೀತೆ? ಕೆಟ್ಟ, ಕಠೋರ ಮಾತನ್ನು ಯಾಕಾಗಿ ನಾವು ಕೇಳಬೇಕು?

ಇದು ನಮ್ಮ ವಾದದ ಧಾಟಿ. ಆದರೆ ಶ್ರೀರಾಮ ನಮಗೆ ಕಲಿಸುತ್ತಾನೆ: ಕೇವಲ ಮೃದು ನುಡಿಗಳನ್ನಷ್ಟೆ ನುಡಿ. ಇತರರು ಕಡುನುಡಿಗಳನ್ನು ಆಡಿದರೆ, ಉತ್ತರವನ್ನೇ ನೀಡಬೇಡ.
ನಾವು ಒಂದು ಹೇಳುವುದು, ಅವರು ಮತ್ತೊಂದು ಹೇಳುವುದು, ಮಾತಿಗೆ ಮಾತು ಬೆಳೆದು ಜಗಳ, ಮನಶ್ಯಾಂತಿಗೆ ಭಂಗ! ಇಂದು ಎಲ್ಲರಿಗೂ ಬೇಕಾದ ದೊಡ್ಡ ವಸ್ತು ಎಂದರೆ ಮನಸ್ಸಿಗೆ ಶಾಂತಿ, ರಾಮನಂತೆ ಪ್ರಶಾಂತ ಮನಸ್ಸಿನವರು ನಾವು ಆಗಬೇಕಾದರೆ, ನಮಗೆ ಶಾಂತಿ ಸಿಗಬೇಕಾದರೆ, ಅವನಂತೆ ನಡೆಯಬೇಕು. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು; ಕೆಟ್ಟ ಮಾತುಗಳಿಂದ ಸಂಬಂಧಗಳನ್ನು ಕಳೆದುಕೊಂಡ ಎಷ್ಟೋ ಉದಾಹರಣೆಗಳು ನಮ್ಮೆಲ್ಲರಿಗೂ ತಿಳಿದಿವೆಯಷ್ಟೆ? ದಾಸರು ಹೇಳಿದಂತೆ ‘ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿ ಕೊಂಡಿರುವ’ ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟರೆ ಮಾತ್ರ ನಮಗೆ ರಾಮನಂತೆ ಪ್ರಶಾಂತತೆ ಹೊಂದಲು ಸಾಧ್ಯ. ಅಂತಹ ಮೃದು ನುಡಿಗಳನ್ನಷ್ಟೆ ಆಡುವ ಶ್ರೀರಾಮನು ನಮಲ್ಲಿಯೂ ನಿಂತು ಒಳ್ಳೆಯ ಮಾತುಗಳನ್ನು ಮಾತ್ರ ಆಡಿಸಲಿ ಎಂದು ಪ್ರಾರ್ಥಿಸೋಣ.

No comments: