Thursday, February 25, 2021

Learn from Rama -5 (Love your juniors; they will in-turn love you)

 Learn from Rama -5
Love your juniors; they will in-turn love you

चानृतकथो विद्वान् वृद्धानां प्रतिपूजकः |
अनुरक्तः प्रजाभिश्च प्रजाश्चाप्यनुरज्यते || --१४

The all-knowing Rama never spoke untruth. He used to worship elders and was receptive to them. People used to love Rama; and Rama used to love the people.

Rama teaches something very relevant for us here. While it is very easy for a leader to command his followers, it is very difficult to earn their love. A leader should earn that love from his juniors, from his followers, from people who are at a sub-ordinate position. The junior could be a helping hand at home, or even kids and relatives younger to us at home. It is relevant to even those working in a professional environment, offices, or any place of service, or in the political parties. Every person should love his juniors not just treat them as sub-ordinates and order them. When such a love is harboured by the senior, the juniors will in-turn start loving the leader.

The work will be very effectively done if the juniors love their bosses. The house will prosper if the younger ones look up to the elders and love them. Students will learn well and learn faster if they love their teachers and teachers too love the students. The army will win every war if the soldiers love their colonel and vice-versa. The work at office will get extra efficient where the officer is loved by everyone and in-turn the officer loves the team. We can appreciate this even better in these days of open and cosmopolitan culture.

Rama teaches this very important, but rarely spoken, tenet in a subtle manner.

Let such Rama who is the world leader, love us always; and let such Rama, make us - His followers - love Him unconditionally. 

--------

ಶ್ರೀರಾಮನಿಂದ ಕಲಿಯೋಣ – ೫  
ಕಿರಿಯರನ್ನು ಪ್ರೀತಿಸಿ; ಅವರೂ ನಿಮ್ಮನ್ನು ಪ್ರೀತಿಸುವರು

ಚಾನೃತಕಥೋ ವಿದ್ವಾನ್ ವೃದ್ಧಾನಾಂ ಪ್ರತಿಪೂಜಕಃ |
ಅನುರಕ್ತಃ ಪ್ರಜಾಭಿಶ್ಚ ಪ್ರಜಾಶ್ಚಾಪ್ಯನುರಜ್ಯತೇ || --೧೪

ವಿದ್ವಾಂಸನಾದ ಶ್ರೀರಾಮನು ಎಂದಿಗೂ ಸುಳ್ಳನ್ನಾಡಿದವನಲ್ಲ. ಹಿರಿಯರನ್ನು ಗೌರವಿಸಿ ಪೂಜಿಸುತ್ತಿದ್ದನು. ರಾಮನು ಪ್ರಜೆಗಳನ್ನು ಪ್ರೀತಿಸುತ್ತಿದ್ದನು, ಪ್ರಜೆಗಳೂ ರಾಮನನ್ನು ಪ್ರೀತಿಸುತ್ತಿದ್ದರು.

ಇಂದಿನ ಕಾಲಕ್ಕೆ ಅನ್ವಯಿಸುವ ವಿಷಯವೊಂದನ್ನು ರಾಮನು ಹೇಳಿಕೊಡುತ್ತಿದ್ದಾನೆ.

ಒಬ್ಬ ನಾಯಕ ತನ್ನ ಅನುಚರರಿಗೆ ಆಜ್ಞೆ ಮಾಡುವುದು ತುಂಬಾ ಸುಲಭ. ಆದರೆ ಅವರ ಪ್ರೀತಿಯನ್ನು ಗಳಿಸುವುದು ತುಂಬಾ ಕಷ್ಟದ ಕೆಲಸ. ನಾಯಕನಾದವನು ತನ್ನ ಕಿರಿಯರ, ಅನುಚರರ, ತನಗಿಂತ ಕೆಳಗಿನ ಹಂತದಲ್ಲಿ ಇರುವವರ ಪ್ರೇಮಕ್ಕೆ ಪಾತ್ರನಾಗಬೇಕು. ಅನುಚರರು ಯಾರೂ ಆಗಿರಬಹುದು – ನಮ್ಮ ಮನೆಗಳಲ್ಲಿ ಕೆಲಸ ಮಾಡುವವರು, ಮಕ್ಕಳು, ತಮಗಿಂತ ಕಿರಿಯ ಸಂಬಂಧಿಕರು, ನಮ್ಮ ಕಛೇರಿಗಳಲ್ಲಿ ನಮ್ಮ ಸಹಾಯಕರಿರಬಹುದು, ರಾಜಕೀಯ ಪಕ್ಷಗಳಲ್ಲಿ ಅನುಯಾಯಿಗಳೂ ಆಗಿರಬಹುದು – ಎಲ್ಲರಿಗೂ ಅನ್ವಯಿಸುವ ವಿಷಯವಿದು. ಪ್ರತಿಯೊಬ್ಬರೂ ತನ್ನ ಅನುಚರರನ್ನು ಸೇವಕರಂತೆ ನೋಡುವುದನ್ನು ಬಿಟ್ಟು, ಅವರಿಗೆ ಆಜ್ಞೆ ಮಾಡುವುದನ್ನು ಬಿಟ್ಟು, ಪ್ರೀತಿಸಿದರೆ, ಪ್ರೇಮದಿಂದ ನಡೆಸಿಕೊಂಡರೆ, ಅದರ ಪರಿಣಾಮ ಅಪರಿಮಿತ. ನಾಯಕನ ಈ ಗುಣವನ್ನು ಅನುಚರರು ಆದರಿಸಿ ಅನುಕರಿಸುವುದರಲ್ಲಿ ಸಂಶಯವಿಲ್ಲ.

ಇದು ಇಂದಿನ ಕಾಲದ ತೆರೆದ ಸಾಮಾಜಿಕ ಮತ್ತು ವಿಶ್ವ-ಪ್ರಜಾ’ ಸಾಂಸ್ಕೃತಿಕ ನೆಲೆಗಳಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅಧಿಕಾರಿಯನ್ನು ಪ್ರೀತಿಸುವ ಕಚೇರಿಗಳಲ್ಲಿ ಕೆಲಸವು ತುಂಬ ದಕ್ಷತೆಯಿಂದ ಮುಗಿಯುತ್ತದೆ. ಕಿರಿಯರು ಹಿರಿಯರನ್ನು ಪ್ರೀತಿಸಿ, ಆದರಿಸಿ, ಅನುಕರಿಸಿದರೆ, ಮನೆಯಲ್ಲೇ ಬೃಂದಾವನ. ಶಿಕ್ಷಕರನ್ನು ಒಲುಮೆಯಿಂದ ಕಾಣುವ ವಿದ್ಯಾರ್ಥಿಗಳ ಕಲಿಕೆ ವೇಗದಿಂದ ಸಾಗುತ್ತದೆ. ತಮ್ಮ ಸೈನ್ಯಾಧಿಕಾರಿಯನ್ನು ಪ್ರೀತಿಸುವ ಮತ್ತು ಸೈನ್ಯಾಧಿಕಾರೂ ತನ್ನ ಸೈನ್ಯವನ್ನು ಪ್ರೀತಿಸುವ ಪರಿಸ್ಥಿತಿಯಿದ್ದರೆ ಯಾವುದೇ ಯುದ್ಧವನ್ನಾದರೂ ಗೆಲ್ಲಬಹುದು. ತಂಡದ ಎಲ್ಲಾ ಸದಸ್ಯರನ್ನು ಪ್ರೇಮದಿಂದ ಕಾಣುವ ಮುಂದಾಳಿಗೆ ಮತ್ತು ಆ ಮುಂದಾಳುವಿನಲ್ಲಿ ಒಲ್ಮೆಯಿಟ್ಟಿರುವ ಸದಸ್ಯರಿರುವ ತಂಡ ಯಾವುದನ್ನಾದರು ಸಾಧಿಸಬಹುದು.

ಇಂತಹ ಅತಿ ಮುಖ್ಯವಾದ ಆದರೆ ಅಪರೂಪವಾಗಿ ಮಾತನಾಡಲ್ಪಡುವ ತತ್ತ್ವವನ್ನು ಪ್ರಭು ಶ್ರೀರಾಮನು ತನ್ನ ನಡತೆಯ ಮೂಲಕ ಸೂಕ್ಷ್ಮವಾಗಿ ತಿಳಿಸಿಕೊಡುತ್ತಿದ್ದಾನೆ.

ಜಗತ್ತಿನ ಏಕೈಕ ನಾಯಕನಾದ ರಾಮನು, ನಮ್ಮನ್ನು ಸದಾ ಪ್ರೀತಿಸಲಿ. ಮತ್ತು ಅವನ ಅನುಚರರಾದ ನಾವೂ ಸಹ ಅವನನ್ನು ಷರತ್ತುಗಳಿಲ್ಲದೆ ಪ್ರೀತಿಸುವಂತೆ ಮಾಡಲಿ.

No comments: