ಶ್ರೀರಾಮನಿಂದ ಕಲಿಯೋಣ - ೩
ಹಿರಿಯರಿಗಾಗಿ ಸಮಯ ಹೊಂದಿಸೋಣ
ಶೀಲವೃದ್ಧೈ:
-ಜ್ಣಾನವೃದ್ಧೈ:-ವಯೋವೃದ್ಧೈಶ್ಚ
ಸಜ್ಜನೈಃ |
ಕಥಯನ್ನಾಸ್ತ ವೈ ನಿತ್ಯಂ-ಅಸ್ತ್ರಯೋಗ್ಯಾನ್ತರೇಷ್ವಪಿ
|| ೨-೧-೧೨
ಸದಾ ಬಿಡುವಿಲ್ಲದಿರುವಷ್ಟು ಕೆಲಸದಲ್ಲಿಯೂ, ಶಸ್ತ್ರಾಭ್ಯಾಸದಲ್ಲಿಯೂ ನಿರತನಾದ ರಾಮನು, ಹೇಗಾದರೂ ಸಮಯ ಹೊಂದಿಸಿ, ವಯಸ್ಸಿನಲ್ಲಿ, ಗುಣದಲ್ಲಿ, ಜ್ಞಾನದಲ್ಲಿ ಹಿರಿಯರಾಗಿರುವ ಸಜ್ಜನರೊಂದಿಗೆ ಸಂಭಾಷಿಸುತ್ತಾನೆ.
ಇಂದಿನ
ಯುಗದಲ್ಲಿ ನಮಗೆ ಸಮಯದ ಕೊರತೆ ಇದೆ ಎಂದು ಎಲ್ಲರ ಅನಿಸಿಕೆ. ಕಚೇರಿಗೆ ಹೋಗುವುದು, ಬರುವುದು, ಇತರ
ಮನೆಗೆಲಸಗಳಲ್ಲಿ ತೊಡಗುವುದು, ಮಕ್ಕಳ ಪೋಷಣೆ ಇದರಲ್ಲೇ ನಮ್ಮ ಸಮಯ ಕಳೆದು ಹೋಗುತ್ತದೆ. ಬಿಡುವು
ಮಾಡಿಕೊಳ್ಳುವುದು ಹೆಚ್ಚಿನವರಿಗೆ ಸಾಧ್ಯವೇ ಆಗುವುದಿಲ್ಲ. ಏಕೆಂದರೆ ನಮ್ಮ ಬಿಡುವಿನ ಸಮಯವೆಲ್ಲ
ಹಾಳು ಹರಟೆ, ಟಿವಿ, ಮೊಬೈಲ್, ಇದರಲ್ಲಿ ಕಳೆದು ಹೋದದ್ದು ನಮ್ಮ ಅರಿವಿಗೆ ಬರುವುದೇ ಇಲ್ಲ. ನಮ್ಮ
ಜ್ಞಾನವು ವೃದ್ಧಿಸಲಿಲ್ಲ,
ಮನಸ್ಸಿಗೆ ಸಂತೋಷವೂ ಆಗಲಿಲ್ಲ, ಅದರಿಂದ ಯಾರಿಗೂ ಉಪಕಾರವೂ ಆಗಲಿಲ್ಲ.
ರಾಮನು ಹಿರಿಯರೊಂದಿಗೆ ಸಮಯ ಕಳೆಯಿರಿ ಎಂದು ಹೇಳುತ್ತಿದ್ದಾನೆ. ಇಂದು ನಮಗೆ ಹಿರಿಯರ ಉಪದೇಶ
ಬೇಡವಾಗಿದೆ. ಗುಣಶೀಲರಾದ ಸಜ್ಜನರು ಸಿಗುವುದೇ ಅಪರೂಪ, ಜ್ಞಾನಿಗಳ ಸಹವಾಸ ಬೇಡವಾಗಿದೆ.
ವೃದ್ಧರನ್ನು ಹೊರಗೆ ಅಟ್ಟಿಯಾಗಿದೆ. ಅಧಃ ಪತನಕ್ಕೆ ಇನ್ನೇನು ಬೇಕು.
ಶ್ರೀ ರಾಮನಾದರೋ, ಸದಾ ಶಸ್ತ್ರಾಸ್ತ್ರಗಳ ಸಂಗದಲ್ಲೇ ಅನಿವಾರ್ಯವಾಗಿ ಇರಬೇಕಾದ, ಕ್ಷತ್ರಿಯ,
ಬಿಡುವಿಲ್ಲದ ಆಡಳಿತಗಾರ. ಆದರೂ, ಹೇಗಾದರೂ ಸಮಯ ಹೊಂದಿಸಿಕೊಂಡು ಹಿರಿಯರೊಂದಿಗೆ ಆ ಬಿಡುವಿನ ಸಮಯ
ಕಳೆಯುತ್ತಿದ್ದ. ನಮಗೂ ಹಾಗೆಯೇ ನಡೆಯಿರಿ ಎಂದು ಹೇಳುತ್ತಿದ್ದಾನೆ. ಊರ್ಧ್ವಗಾಮಿಗಳಾಗಲು ಅದೊಂದೇ
ದಾರಿ.
ಹಿರಿಯರ ಒಳಗೂ ಕಿರಿಯರ ಒಳಗೂ ಇದ್ದು, ಸರ್ವರನ್ನೂ ಪ್ರೇರಿಸುವ ರಾಮನು, ಸಜ್ಜನರ ಸಂಗದಲ್ಲಿರುವಂತೆ
ನಮ್ಮ ಬುದ್ಧಿಯನ್ನು ಪ್ರಚೋದಿಸಲಿ.
----------------------------------------------------
Learn from Rama -3
Make time for eldersशीलवृद्धैर्ज्ञानवृद्धैर्वयोवृद्धैश्च सज्जनैः |
कथयन्नास्त वै नित्यमस्त्रयोग्यान्तरेष्वपि || २-१-१२
Rama, despite His busy schedule of practicing warfare/archery everyday, makes time to converse with the noble, with the elderly ones - elder by conduct, elder by wisdom, or elder by age
If there is one thing we do not find these days, it is ‘time’. We are ever busy with work, commute, household chores, taking care of the kids etc., and never realize the lost day. Most never have a ‘free-time’; because our free time is spent on entertainment, mobile and useless chats. The time lost in these activities is never noticed. Neither did we acquire new knowledge, nor did it help anybody, and of course it never provided us any peace. Rama asks us to spend time with the elderly. Today, we don’t want the advice of the elderly, those with good conduct are rarely found, the wisdom of the wise is not needed anymore; and we have already thrown out our old-aged parents.
Rama, is an administrator, a
kshatriya, who has to spend time on practicing archery and other royal arts
every day; but He finds time, rather, makes time to converse with elderly, the
wise, the sajjanas. He wants us to follow Him. That is the only way to reach
the top!
Let such Rama, who is
present in the elderly as well as the young, guide us to have the right company,
the company of the noble!
No comments:
Post a Comment