ಶ್ರೀರಾಮನಿಂದ ಕಲಿಯೋಣ - 2
ಸಣ್ಣ ಉಪಕಾರಗಳನ್ನೂ ನೆನೆಯೋಣ; ಅಪಕಾರಗಳನ್ನು ಮರೆಯೋಣ
ಕಥಞ್ಚಿದುಪಕಾರೇಣ ಕೃತೇನೈಕೇನ ತುಷ್ಯತಿ
|
ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ || ೨-೧-೧೧
ಇತರರು ಎಂದೋ ಮಾಡಿದ ಸಣ್ಣ ಉಪಕಾರಗಳನ್ನೂ ರಾಮನು ಸಂತೋಷದಿಂದ ನೆನೆಯುತ್ತಾನೆ. ಯಾರಾದರೂ ಅಪಕರಿಸದರೆ? ನೂರಾರು ಬಾರಿ ತನಗೆ ಯಾರಾದರು ಅಪಕರಿಸಿದರೂ, ಅದನ್ನು ಆ ರಾಮಚಂದ್ರನು ಮರೆತು ಬಿಡುತ್ತಾನೆ.
ಶ್ರೀರಾಮನು ನಮಗೆ ಮಾಡುವ ಬೋಧನೆ ಇದು. ಬಹಳಷ್ಟು ಸಲ ನಮಗೆ ಇತರರು ಮಾಡಿದ ಉಪಕಾರಗಳು ಮರೆತು ಹೋಗುವುದುಂಟು. ಒಮ್ಮೊಮ್ಮೆ ದೊಡ್ಡ ಉಪಕಾರಗಳನ್ನು ನೆನೆದುಕೊಂಡರೂ, ಸಣ್ಣ-ಸಣ್ಣ ವಿಷಯಗಳಲ್ಲಿನ ಉಪಕಾರಗಳು ನಮಗೆ ಸುಲಭವಾಗಿ ಮರೆತು ಹೋಗುತ್ತದೆ. ರಾಮನು ಹೇಳುತ್ತಾನೆ, ಉಪಕಾರ ಯಾವುದೇ ಇರಲಿ, ಅದನ್ನು ಎಂದಿಗೂ ಮರೆಯಬೇಡ. ಇಂದು ನೀನು ಏನಾಗಿರುವೆಯೊ ಅದು ಅಂದು ಇತರರ ಸಣ್ಣ ಸಹಾಯದಿಂದ ಆಗಿರಬಹುದು. ಮತ್ತೊಮ್ಮೆ ನಿನಗೆ ಅದೇ ವ್ಯಕ್ತಿಯಿಂದ ಸಹಾಯ ಬೇಕಾಗಬಹುದು. ಅಲ್ಲವೇ? ಹಾಗಾಗಿ ಕೃತಜ್ಞನಾಗಿರು.
ಸರಿ, ಅಪಕರಿಸಿದವರೊಂದಿಗೆ ಹೇಗಿರಬೇಕು? ಇಂದು ಬಹುತೇಕರು ತಿಳಿಸುವುದು ಏನೆಂದರೆ, ಅಪಕರಿಸಿದವರನ್ನು ಮರೆಯದಿರಿ, ಎಂದು. ಆದರೆ ರಾಮನ ಶಿಕ್ಷಣ ಹಾಗಿಲ್ಲ. ಹತ್ತಾರು ಬಾರಿ, ನೂರಾರು ಬಾರಿ ಜನರು ನಿಮ್ಮನ್ನು ಅಪಕರಿಸಲಿ. ಅದನ್ನು ಮರೆತುಬಿಡಿ. ಆ ದ್ವೇಷದ ಬೀಜವನ್ನು ಮನದಲ್ಲಿಟ್ಟು ಅದು ಹೆಮ್ಮರವಾಗಿ ಬೆಳೆವುದಕ್ಕೆ ಬಿಟ್ಟರೆ, ಅದು ನಿಮ್ಮನ್ನೂ ನುಂಗುತ್ತದೆ. ಆ ದ್ವೇಷದ ಫಲವಾಗಿ ನೀವೂ ನಿಮಗೆ ಅಪಕರಿಸಿದ ವ್ಯಕ್ತಿಗೆ ಅಪಕರಿಸುತ್ತೀರಿ, ಮುಯ್ಯಿಗೆ ಮುಯ್ಯಿ ತೀರಿಸಲು ಪ್ರಯತ್ನಿಸುತ್ತೀರಿ. ಅದು ಸಫಲವಾದಾಗ ತೃಪ್ತರಾಗುತ್ತೀರಿ. ಆದರೆ ಆ ವ್ಯಕ್ತಿ ಇದನ್ನು ಮರೆಯನು. ಅವನು ಮತ್ತೊಮ್ಮೆ ನಿಮ್ಮ ವಿರುದ್ಧ ಕತ್ತಿ ಮಸೆಯುತ್ತಾನೆ. ಇದು ನಿಲ್ಲದ ವಿಷ ವರ್ತುಲ. ಹಾಗಾಗಿ ರಾಮನ ಬೋಧನೆ – ಅಪಕಾರವನ್ನು ಮರೆ, ಉಪಕಾರವನ್ನು, ಅದು ಎಷ್ಟೇ ಚಿಕ್ಕದಾದರು ಸರಿ, ಎಂದಿಗೂ ಮರೆಯಬೇಡ. ಎಲ್ಲರೊಳಗಿದ್ದು ನಮಗೆ ಸದಾ ಸಹಾಯ ಮಾಡುವ ರಾಮನು, ಅವನ ನೆನಪನ್ನು ಸದಾ ನಮ್ಮಲ್ಲಿರಿಸಲಿ. ಮನಸ್ಸಿನ ದ್ವೇಷದ ಬೀಜವನ್ನು ಹುರಿದು ಹಾಕಲಿ.
---------------------------------------------------------------
Learn from Rama -2
Remember the smallest help; never remember the harm by others
कथञ्चिदुपकारेण कृतेनैकेन तुष्यति |
न स्मरत्यपकाराणां शतमप्यात्मवत्तया || २-१-११
Rama, is glad even for the smallest help offered to Him, by others. Never does He remember any number of bad things done to him.
Lord Rama asks us to be happy and grateful for the small help done by others. Do not forget those who helped you when you needed; and not just those who provided significant assistant, but even those who helped you in small ways. You never know when you may need help from the same person. Also, the reason for you being what you are today, could be because of those small help provided by others.
The theory that is taught these days is to remember those who have hurt you too. But that is not what Rama teaches. Even if someone tries to hurt you in multiple ways innumerable times, remembering it and being vengeful about it makes no sense. The revenge, the thought to put down someone just because h/she caused you a harm long ago, would mean they too will wait for an opportunity for revenge. The more we go into this, the more we are pulled into the vicious cycle never to return. So, Rama says, do not harbour vengeance. Forget all the bad things done to you by others. But never forget even the smallest help provided by others unto you!
Let such Rama who stays in every being and provides us timely help, make us remember Him constantly. Let such Rama remove the seed of vengeance in us.
No comments:
Post a Comment