Rama - Gunabhirama -16 – He is Satyakama, how can kaama trouble Him?
In the previous verse we saw Valmiki Ramayana mention that Rama is not affected by any of the defects like anger, envy etc. In the next few verses, we will see why the six enemies, and other defects, do not have any effect on Rama. This is based on Sangraha Ramayana of Narayana Panditacharya. The six enemies - kaama (lust), krodha (anger), mada (pride/intoxication), lobha (greed), moha (illusion), maatsarya (envy).
सर्वत्र सर्वानपि सर्वदापि प्राप्नोति कामान् ननु सत्यकामः |
कामः कथं द्रुह्यति तेन जातु सीतापतिं विश्वपतिं सुतं ते || (सं। रा | २।१।२२)
Lord Rama is ‘Satyakama’. He has all that He desires for, at all times, and at all places. How can such Lord of the world, Lord of Sita, be affected by desire (and lust)?
Rama’s wish never goes waste. He gets whatever He wishes for. When His desires are fulfilled always how can He be troubled by kaama (desire/lust)?
'aapta kaamasya kaa spriha' says Veda.
ರಾಮ ಗುಣಾಭಿರಾಮ-೧೬ - ರಾಮನು ಸತ್ಯಕಾಮನು. ಅವನಿಗೆ ಕಾಮದಿಂದ ತೊಂದರೆಯಾದೀತೆ?
ಹಿಂದಿನ ವಾಲ್ಮೀಕಿ ರಾಮಾಯಣದ ಶ್ಲೋಕದಲ್ಲಿ ನಾವು ನೋಡಿದೆವು, ರಾಮನಿಗೆ ಮಾತ್ಸರ್ಯ, ಕೋಪ ಮುಂತಾದ ದೋಷಗಳು ಯಾವ ಪರಿಣಾಮ ಬೀರವು ಎಂದು.
ಮುಂದಿನ ಕೆಲವು ಶ್ಲೋಕಗಳಲ್ಲಿ ಏಕೆ ಈ ಆರು ವೈರಿಗಳು ರಾಮನಿಗೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ನೋಡೋಣ. ಇವು ನಾರಾಯಣ ಪಂಡಿತ ಆಚಾರ್ಯರ ಸಂಗ್ರಹ ರಾಮಾಯಣದಿಂದ ಆಯ್ದವು.
ಸರ್ವತ್ರ ಸರ್ವಾನಪಿ ಸರ್ವದಾಪಿ ಪ್ರಾಪ್ನೋತಿ ಕಾಮಾನ್ ನನು ಸತ್ಯಕಾಮಃ |
ಕಾಮಃ ಕಥಂ ದ್ರುಹ್ಯತಿ ತೇನ ಜಾತು ಸೀತಾಪತಿಂ ವಿಶ್ವಪತಿಂ ಸುತಂ ತೇ || (ಸಂ। ರಾ | ೨।೧।೨೨)
ಶ್ರೀರಾಮನು ಸತ್ಯಕಾಮನು. ಅವನು ಎಲ್ಲಾ ಕಾಲಗಳಲ್ಲೂ ಎಲ್ಲಾ ದೇಶದಲ್ಲಿಯೂ (ಎಲ್ಲೆಡೆಯಲ್ಲಿಯೂ) ಸದಾ ಪೂರ್ಣವಾಗಿ ತನ್ನ ಎಲ್ಲಾ ಕಾಮನೆಗಳನ್ನು ಹೊಂದುವನು. ಅಂತಹ ಸೀತಾಪತಿ, ವಿಶ್ವಪತಿಯಾದ ರಾಮನಿಗೆ ಯಾವ ಕಾಮದ ಪರಿಣಾಮವಾದೀತು?
ರಾಮನು ಬಯಸಿದ್ದು (ಸಂಕಲ್ಪಿಸಿದ್ದು) ಎಂದಿಗೂ ವ್ಯರ್ಥವಾಗದು. ಅವನು ಏನು ಬಯಸಿದರೂ ಅದನ್ನು ಪಡೆಯುತ್ತಾನೆ. ಅವನು ಪೂರ್ಣಕಾಮನು. ಇಂಥ ರಾಮನಿಗೆ ಕಾಮವು ಹೇಗೆ ತೊಂದರೆ ನೀಡೀತು? ‘ಆಪ್ತ ಕಾಮಸ್ಯ ಕಾ ಸ್ಪೃಹಾ’ ಎನ್ನುತ್ತದೆ ವೇದ.
No comments:
Post a Comment