Rama - Gunabhirama -20 – He is the Lord of all; How can He have ego?
Ego is the one of the six enemies that humans are troubled by. Does Rama have ego?
अविद्यमानात्म-गुणाभिमानं मोहादहंकारमुशन्ति संतः |
अविद्यमानो न गुणोऽस्ति रामे तस्मादहंकारलवोऽपि नास्य || (सं। रा | २।१।२६)
The noble say that – due to delusion, assuming that a certain attribute exists in oneself, when it’s not there, is termed as Ahankara (Ego or pride). Sri Rama is the Lord of all. There is no attribute that He does not possess. So, how can He be termed as egoistic?
अस्वरूपे स्वरूपत्वमतिरेव हि अहंकृतिः (गीता तात्पर्य)
Assuming that we have a certain attribute (guNa), when, in reality, we don’t have it – is termed as ahankara. For example: If a person thinks that s/he is the world’s best player, when s/he hardly has played against others, then such a thing is termed as being egoistic. Similarly, assuming that one is very powerful, can control anything, etc,. – all these are delusions that make a person have a certain pride or ego.
In Lord Rama, there is no such attribute which He does not have. He is all powerful, He can control everything, He can defeat anybody, He can do what He wishes for, whenever and wherever. All these attributes are indeed present in Rama, and there are no false assumptions. So, Rama does not have an iota of ahamkara.
Let such Gunapoorna Rama, bless us to remove our ahamkara.
-----------------------------
ರಾಮ ಗುಣಾಭಿರಾಮ-೨೦ – ಸರ್ವಸ್ವಾಮಿ ರಾಮನಿಗೆ ಅಹಂಕಾರವೇ?
ಅಹಂಕಾರವೆಂಬುದು ಮನುಷ್ಯನನ್ನು ಕಾಡುವ ಆರು ವೈರಿಗಳಲ್ಲಿ ಒಂದು. ರಾಮನಿಗೆ ಅಹಂಕಾರ ಉಂಟೆ?
ಅವಿದ್ಯಮಾನಾತ್ಮ-ಗುಣಾಭಿಮಾನಂ ಮೋಹಾದಹಂಕಾರಮುಶನ್ತಿ ಸಂತಃ |
ಅವಿದ್ಯಮಾನೋ ನ ಗುಣೋಽಸ್ತಿ ರಾಮೇ ತಸ್ಮಾದಹಂಕಾರಲವೋಽಪಿ ನಾಸ್ಯ || (ಸಂ। ರಾ | ೨।೧।೨೬)
ಸಜ್ಜನರ ಅಭಿಪ್ರಾಯದಲ್ಲಿ, ತನ್ನಲ್ಲಿ ಇಲ್ಲದ ಗುಣಗಳು ತನ್ನಲ್ಲಿ ಇವೆ ಎಂದು ಮೋಹದಿಂದಾಗಿ ತಿಳಿದುಕೊಳ್ಳುವುದೇ ಅಹಂಕಾರ. ಶ್ರೀರಾಮನು ಸರ್ವಸ್ವಾಮಿ. ಅವನಲ್ಲಿ ಇಲ್ಲದ ಗುಣಗಳೇ ಇಲ್ಲ! ಹೀಗಿರುವಾಗ ಅವನಿಗೆ ಅಹಂಕಾರವಿದೆ ಎನ್ನಲಾದೀತೆ?
ಅಸ್ವರೂಪೇ ಸ್ವರೂಪತ್ವಮತಿರೇವ ಹಿ ಅಹಂಕೃತಿಃ (ಗೀತಾ ತಾತ್ಪರ್ಯ)
ನಮ್ಮಲ್ಲಿ ಇಲ್ಲದೇ ಇರುವ ಗುಣವನ್ನು ಮೋಹದಿಂದಾಗಿ ಇದೆ ಎಂದು ಭಾವಿಸಿದರೆ, ಅದನ್ನು ಅಹಂಕಾರ (ಮದ) ಎನ್ನುತ್ತಾರೆ. ಉದಾಹರಣೆಗೆ – ಒಬ್ಬ ಆಟಗಾರ/ಗಾರ್ತಿ, ಇತರರೊಂದಿಗೆ ಆಟವನ್ನು ಆಡದೆಯೇ, ತನ್ನನ್ನು ತಾನೆ ಜಗತ್ತಿನ ಅತ್ಯುತ್ತಮ ಆಟಗಾರ/ರ್ತಿ ಎಂದು ಹೇಳಿಕೊಂಡರೆ, ಅದು ಅಹಂಕಾರದ ತಪ್ಪು ತಿಳುವಳಿಕೆ. ಹಾಗೆಯೇ, ತಾನು ಸರ್ವ ಶಕ್ತಿಶಾಲಿ, ಎಲ್ಲರನ್ನೂ ನಿಯಂತ್ರಿಸಬಲ್ಲೆ, ಎಂದೆಲ್ಲಾ ಮೋಹದಿಂದ ತಿಳಿದುಕೊಂಡರೆ, ಅದುವೇ ಅಹಂಕಾರ.
ಆದರೆ ರಾಮನಲ್ಲಿ ಅಂತಹ ಇಲ್ಲದಿರುವ ಗುಣವೇ ಇಲ್ಲ. ಅವನು ಸರ್ವಶಕ್ತನು, ಸರ್ವರ ನಿಯಂತ್ರಕನು. ಅವನು ಎಲ್ಲರನ್ನೂ ಸೋಲಿಸಬಲ್ಲ, ಅವನು ಬಯಸಿದ್ದನ್ನು, ಯಾವಾಗ ಬೇಕಾದರು, ಎಲ್ಲಿ ಬೇಕಾದರೂ ಮಾಡಬಲ್ಲ. ಇವೆಲ್ಲಾ ಗುಣಗಳು ಅವನಲ್ಲಿ ನಿಶ್ಚಿತವಾಗಿಯೂ ಇವೆ, ಯಾವುದೂ ಮಿಥ್ಯಾ ತಿಳುವಳಿಕೆಯಲ್ಲ. ಹಾಗಾಗಿ ರಾಮನಿಗೆ ಅಹಂಕಾರದ ಲವಲೇಶವೂ ಇಲ್ಲ.
ಅಂತಹ ಗುಣಪರಿಪೂರ್ಣ ರಾಮನು ನಮ್ಮಲ್ಲಿರುವ ಅಹಂಕಾರವನ್ನು ಕಳೆಯಲಿ.
No comments:
Post a Comment