Rama - Gunabhirama -19 – Rama removes delusion; How can He have it?
In the previous verses we saw that Rama cannot be troubled by desire, anger, greed. But He can be in delusion, can’t He? No!
प्रयांति शांतिं किल यत्प्रसादात् मोहाद्यवद्यानि कुतोस्य
मोहः |
यस्याहिमांशोरुदये व्यपैति महान्धकारोऽत्र कुतोऽन्धकारः || (सं। रा | २।१।२५)
Just by the blessings of Rama, many defects like delusion (moha) are removed in His devotees. How can He have delusion? Can there be darkness in Sun, who removes all the darkness?
Rama removes all the defects in His devotees, including moha (delusion). He can never have moha, either in His mula rupa (Narayana) or when born on earth in the form on human (Rama) or in any avatara form, for that matter.
-------------
ರಾಮ ಗುಣಾಭಿರಾಮ-೧೯ – ಮೋಹವನ್ನು ಕಳೆವ ರಾಮನಿಗೆ, ಮೋಹವುಂಟೆ?
ಹಿಂದಿನ ಶ್ಲೋಕಗಳಲ್ಲಿ ಪ್ರಭು ಶ್ರೀ ರಾಮನಿಗೆ ಕಾಮದಿಂದ/ಕೋಪದಿಂದ ತೊಂದರೆಯಾಗಲು ಸಾಧ್ಯವಿಲ್ಲವೆಂಬುದನ್ನು ನೋಡಿದೆವು. “ರಾಮನು ಮೋಹದಿಂದ ತೊಂದರೆಗೊಳಗಾಗಬಹುದಲ್ಲವೆ?” ಇಲ್ಲವೇ ಇಲ್ಲ.
ಪ್ರಯಾಂತಿ ಶಾಂತಿಂ ಕಿಲ ಯತ್ಪ್ರಸಾದಾತ್ ಮೋಹಾದ್ಯವದ್ಯಾನಿ ಕುತೋಸ್ಯ ಮೋಹಃ |
ಯಸ್ಯಾಹಿಮಾಂಶೋರುದಯೇ ವ್ಯಪೈತಿ ಮಹಾನ್ಧಕಾರೋಽತ್ರ ಕುತೋಽನ್ಧಕಾರಃ || (ಸಂ। ರಾ | ೨।೧।೨೫)
ರಾಮನ ಅನುಗ್ರಹದಿಂದ ಅವನ ಭಕ್ತರಲ್ಲಿನ ಮೋಹಾದಿ ಅನೇಕ ದೋಷಗಳು, ಕಳೆದು ಹೋಗುತ್ತವೆ. ಹೀಗಿರುವಾಗ ಅವನಿಗೇ ಮೋಹವುಂಟಾಗಲು ಸಾಧ್ಯವೇ? ಅಂಧಕಾರವನ್ನು ದೂರಮಾಡುವ ಸೂರ್ಯನಲ್ಲಿ ಕತ್ತಲು ಇರಲು ಸಾಧ್ಯವೇ?
ಶ್ರೀರಾಮನು ತನ್ನ ಭಕ್ತರ ಮೋಹ ಮುಂತಾದ ಅನೇಕ ದೋಷಗಳನ್ನು ಕಳೆದುಬಿಡುತ್ತಾನೆ. ಅವನಿಗೆ ಮೂಲ ರೂಪದಲ್ಲಿಯಾಗಲಿ (ನಾರಾಯಣ), ಅಥವಾ ಭೂಮಿಯಲ್ಲಿ ಮಾನವನಂತೆ ಅವತರಿಸಿದಾಗ (ರಾಮನಾದಾಗ) ಆಗಲಿ, ಯಾವುದೇ ಅವತಾರದಲ್ಲಿಯೂ ಮೋಹವೆಂಬುದು ಇಲ್ಲವೇ ಇಲ್ಲ.
No comments:
Post a Comment