Rama - Gunabhirama -18 – Rama is extremely generous; how can He have greed?
In the previous verse we saw that Rama cannot be troubled by desire, anger. How about greed?
संत्यज्य साम्राज्यमिदं प्रभुः स्याद्वनं प्रयातुं सहसा प्रसन्नः |
आत्मानमप्येष ददाति सद्भ्यो रामे न लोभो लभतेऽवकाशम् || (सं। रा | २।१।२४)
Lord Rama can leave this whole Kingdom, in a minute and happily go to forest. He is so compassionate that He can give Himself to suitable people. How can greed reside in such a person?
This is said by an elderly person in a large assembly of people, where King Dasharatha had invited the representatives of his country to get their opinion on Rama’s coronation. This person says, Rama has no greed, one of the six enemies of a human being and that He is fit to become Yuvaraja.
Greed is defined as ‘the condition where one does not give, despite being capable of giving, and despite being with the person who is fit to receive’. Rama has no greed. He can give up the whole Kingdom, with the blink of the eye and can do it happily. If He was greedy, would He have done that?
Similarly, Rama is extremely compassionate. He can give Himself up for the sake of others – the eligible devotees. How can greed reside in Him?
One may notice that both the points mentioned above came true later. Rama leaves the Kingdom without feeling sad. He also gives Himself to Hanuman.
स्वात्मप्रदानमधिकं पवनात्मजस्य कुर्वन् समाश्लिषदमुं परमाभितुष्टः (म।ता।नि। ७।५०)
(“Rama greatly pleased, finding nothing else appropriate to be given to Hanuman, and thinking gift of self to Hanuman as greater than all else, embraced him”. Mukhyaprana is also known as ‘sath’)
Let such compassionate Rama, remove the greed residing in us.
-------------------------
ರಾಮ ಗುಣಾಭಿರಾಮ-೧೮ – ರಾಮನು ಅತ್ಯಂತ ಉದಾರಿಯು. ಅವನಿಗೆ ಲೋಭ ಉಂಟೆ?
ಹಿಂದಿನ ಶ್ಲೋಕದಲ್ಲಿ ಪ್ರಭು ಶ್ರೀ ರಾಮನಿಗೆ ಕಾಮದಿಂದ/ಕೋಪದಿಂದ ತೊಂದರೆಯಾಗಲು ಸಾಧ್ಯವಿಲ್ಲವೆಂಬುದನ್ನು ನೋಡಿದೆವು. ಹಾಗಾದರೆ ರಾಮನಿಗೆ ಲೋಭವಿದೆಯೆ?
ಸಂತ್ಯಜ್ಯ ಸಾಮ್ರಾಜ್ಯಮಿದಂ ಪ್ರಭುಃ ಸ್ಯಾದ್ವನಂ ಪ್ರಯಾತುಂ ಸಹಸಾ ಪ್ರಸನ್ನಃ |
ಆತ್ಮಾನಮಪ್ಯೇಷ ದದಾತಿ ಸದ್ಭ್ಯೋ ರಾಮೇ ನ ಲೋಭೋ ಲಭತೇಽವಕಾಶಮ್ || (ಸಂ। ರಾ | ೨।೧।೨೪)
ಪ್ರಭು ಶ್ರೀರಾಮನು, ಈ ಸಾಮ್ರಾಜ್ಯವನ್ನು ಕ್ಷಣಮಾತ್ರದಲ್ಲಿ ತೊರೆದು ವನಕ್ಕೆ ಸಂತೋಷದಿಂದ ತೆರಳುತ್ತಾನೆ, ಅಂತಹ ಉದಾರಿ! ಮತ್ತು ಅವನು ಎಂತಹ ಕರುಣಾಳುವೆಂದರೆ, ಸಜ್ಜನರಿಗೆ ತನ್ನನ್ನೆ ಕೊಟ್ಟು ಬಿಡುತ್ತಾನೆ. ಅವನಲ್ಲಿ ಲೋಭಕ್ಕೆ ಅವಕಾಶವಿರಲು ಸಾಧ್ಯವೆ?
ದಶರಥ ಮಹಾರಾಜನು ತನ್ನ ರಾಜ್ಯದಲ್ಲಿನ ಜನರನ್ನು ತನ್ನ ಸಭೆಗೆ ಕರೆದು, ಅವರಲ್ಲಿ ರಾಮನ ಪಟ್ಟಾಭಿಷೇಕದ ಬಗ್ಗೆ ಅಭಿಪ್ರಾಯ ಕೇಳಿದಾಗ, ಒಬ್ಬ ವೃದ್ಧನು ಮೇಲಿನ ಶ್ಲೋಕದಿಂದ ಉತ್ತರಿಸುತ್ತಾನೆ. ಆರು ವೈರಿಗಳಲ್ಲಿ ಒಂದಾದ ಲೋಭ ರಾಮನಲ್ಲಿ ಇಲ್ಲವೇ ಇಲ್ಲ. ಅವನು ಯುವರಾಜನಾಗಲು ಅತ್ಯಂತ ಯೋಗ್ಯ ವ್ಯಕ್ತಿ ಎಂಬ ಅಭಿಪ್ರಾಯ ಅವನದು.
‘ಕೊಡಲು ಸಾಧ್ಯವಿದ್ದರೂ, ಪಾತ್ರರು ಎದುರಿನಲ್ಲಿಯೇ ಇದ್ದರೂ, ಕೊಡದೆ ಇರುವುದು ಲೋಭ’. ಅರೆಕ್ಷಣದಲ್ಲಿ ತನ್ನ ರಾಜ್ಯವನ್ನೇ ಕೊಟ್ಟು ಬಿಡುವಷ್ಟು ಉದಾರಿಯಾಗಿರುವ ರಾಮನಿಗೆ ಲೋಭವಿರಲು ಸಾಧ್ಯವೆ?
ಹಾಗೆಯೇ, ರಾಮನು, ಯೋಗ್ಯ ಭಕ್ತರಿಗಾಗಿ, ಸಜ್ಜನರಿಗಾಗಿ, ತನ್ನನ್ನೆ ಕೊಟ್ಟು ಬಿಡುವಷ್ಟು ಕರುಣಾಳು. ಅವನಲ್ಲಿ ಲೋಭದ ಲವಲೇಶವೂ ಇಲ್ಲ.
ಮೇಲಿನ ಎರಡೂ ಘಟನೆಗಳು ಮುಂದೆ ಸತ್ಯವಾಗಿ ನಡೆದವು ಎಂಬುದನ್ನು ಗಮನಿಸಬಹುದು. ರಾಜ್ಯವನ್ನು ಅತ್ಯಂತ ಪ್ರಸನ್ನನಾಗಿಯೇ ಬಿಡುವ ರಾಮನು, ತನ್ನನ್ನೆ ಹನುಮಂತನಿಗೆ ಒಪ್ಪಿಸಿಕೊಳ್ಳುತ್ತಾನೆ.
ಸ್ವಾತ್ಮಪ್ರದಾನಮಧಿಕಂ ಪವನಾತ್ಮಜಸ್ಯ ಕುರ್ವನ್ ಸಮಾಶ್ಲಿಷದಮುಂ ಪರಮಾಭಿತುಷ್ಟಃ (ಮ।ತಾ।ನಿ। ೭।೫೦)
(ರಾಮನು, ಹನುಮನ ಸೇವೆಯಿಂದ ಪರಿಪ್ರೀತನಾಗಿ, ಅವನಿಗೆ ತನ್ನನ್ನೇ ಕೊಟ್ಟರೆ ಸರಿಯಾದೀತು ಎಂದು ಹನುಮಂತನನ್ನು ಆಲಿಂಗಿಸಿದ. ಮುಖ್ಯಪ್ರಾಣನ ಮತ್ತೊಂದು ಹೆಸರು ‘ಸತ್’)
ಇಂತಹ ಪರಮ ಕರುಣಾಳು ರಾಮನು, ನಮ್ಮಲ್ಲಿನ ಲೋಭವನ್ನು ಹೋಗಲಾಡಿಸಲಿ.
No comments:
Post a Comment