Tuesday, January 27, 2009

ಗೀತಾ ಸತ್ಸಂಗ - 4.7

This is based on the satsang that goes on in Kashi Mutt, Bangalore, every first sunday of the month. The shloka that had come up for discussion last month was, the famous shloka from the 4th chapter of the Bhagavad Gita

"yadaa yadaa hi dharmasya glanir-bhavti-bharataa
abhyut-thaaanam-adharmasya tadaatmaanam srijaamyam "
(Bhagavad Gita 4.7)
Arjuna, whenever righteousness is on the decline, the unrighteousness is in ascendant, then I body My self forth.

These are some of the points which I spoke over there. (date: Feb 1st 2009)

*****************************************

ಅರ್ಜುನ ಯುದ್ಧ ಮಾಡೋಲ್ಲ ಎಂದಾ ತಕ್ಷಣ, ಕೃಷ್ಣ ನಾನೇ ಪರಮಾತ್ಮ ಅನ್ನುವುದಿಲ್ಲ; ವಿಶ್ವರೂಪ ತೋರಿಸಿ ’ನಡಿ ಯುದ್ಧ ಮಾಡು’ ಎನ್ನುವುದಿಲ್ಲ. ಮೊದಲು ಅರ್ಜುನನ ಷಂಡತನ ದೂರ ಮಾಡ್ತಾನೆ - ಆತ್ಮ ಜ್ಞಾನ ಕೊಡುತ್ತಾನೆ- ದೇಹಾತ್ಮ ವಿರೋಧ ಹೇಳ್ತಾನೆ; ತಾನೆ ಪರಮಾತ್ಮ ಎಂದು ಹೇಳೋಲ್ಲ. ಕೆಲವು hints ಕೊಡ್ತಾನೆ
"ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ " -೬೧
"ವಿಷಯಗಳ ಕಡೆ ಹೋಗುವ ಇಂದ್ರಿಯಗಳನ್ನು ಸಂಯಮಿಸಿ, ನನ್ನಲ್ಲಿ ಮನಸ್ಸನ್ನಿಡು" ಎಂದಷ್ಟೆ ಹೇಳುತ್ತಾನೆ - ಎಲ್ಲೂ ನಾನು ಪರಮಾತ್ಮ ಎಂದು ಹೇಳುವುದಿಲ್ಲ

೩ನೇ ಅಧ್ಯಾಯದ ಕರ್ಮ ಯೋಗದಲಿ -- ಕರ್ಮ ಮಾಡು - ಫಲಾಪೇಕ್ಷೆ ಬಿಡು ಎನ್ನುತ್ತಾನೆ
ಯಜ್ಞದ ರೀತಿಯಲ್ಲಿ ಕರ್ಮ ಮಾಡು ಎನ್ನುತ್ತಾನೆ; ಜನಕ ಮೊದಲಾದವರು ಮಾಡಿದ ರೀತಿಯಲ್ಲಿ ಮಾಡು ಎನ್ನುತ್ತಾನೆ
" ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ
ನಾನವಾಪ್ತವ ವಾಪ್ತವ್ಯಂ ವರ್ತ ಏವ ಕರ್ಮಣಿ" -೨೨
"ಈ ಮೂರು ಲೋಕದಲ್ಲಿ ನಾನು ಮಾಡುವ ಕೆಲ್ಸ ಯಾವುದು ಇಲ್ಲ, ನನಗೆ ಪಡೆದು ಕೊಳ್ಳುವುದು ಯಾವುದು ಇಲ್ಲ, ಆದರೂ ಕರ್ಮದಲ್ಲಿ ನನ್ನನ್ನು ನಾನು ತೊಡಗಿಸುರುತ್ತೇನೆ" ನಾನು ಕರ್ಮ ಮಾದುವ ಹಾಗೆ ನೀನು ಮಾಡು ಎನ್ನುತ್ತಾನೆ - ಇಲ್ಲೂ ಸಹ ತಾನೆ ಪರಮಾತ್ಮ ಎನ್ನುವುದಿಲ್ಲ. ಅದೇ ಅಧ್ಯಾಯದಲ್ಲಿ ಮುಂದುವರೆಸಿ, "ನನ್ನಲ್ಲಿ ಎಲ್ಲ ಕರ್ಮಗಳನ್ನು ಸಮರ್ಪಿಸಿ ಯುದ್ಧ ಮಾಡು" ಎನ್ನುತ್ತಾನೆ ("ಮಯಿ ಸರ್ವಾಣಿ ಕರ್ಮಾಣಿ ..." ೩-೩೦) ಹೀಗೆ ೪-೫ ಕಡೆಯಲ್ಲಿ hints ಕೊಡುತ್ತಾನೆ

ನಂತರ ೪ನೇ ಅಧ್ಯಾಯದಲ್ಲಿ ವಿವಸ್ವಾನನಿಗೆ (ಸೂರ್ಯನಿಗೆ) ಉಪದೇಶಿಸಿದ ವಿಷಯ ತಿಳಿಸುತ್ತಾನೆ ("ಇಮಂ ವಿವಸ್ವತೆ ಯೋಗಂ.." ೪-೧) ಕಾಲಕ್ರಮೇಣ ರಹಸ್ಯವಾದ ಈ ಯೋಗ ನಷ್ಟವಾದ ವಿಷಯ ತಿಳಿಸುತ್ತಾನೆ.

ಈಗ ಅರ್ಜುನಾನಿಗೆ ದಿಗ್ಭ್ರಮೆ*
(*ಅರ್ಜುನನಿಗೆ ಸಂದೇಹ ಬರಲು ಸಾಧ್ಯವಿಲ್ಲವೆಂದೂ ಆತನಲ್ಲಿ ಇಂದ್ರನ ಆವೇಶವಿದೆಯೆಂದೂ ಸಂದೇಹ-ಪ್ರಶ್ನೆಗಳು ನಮ್ಮಂತವರಿಗಾಗಿ ಎನ್ನುವ ವಾದವನ್ನು ಅಲ್ಲಗೆಳೆಯಲು ಅಸಾಧ್ಯ)
ಇಷ್ಟು ದಿನ ಕೃಷ್ಣನನ್ನು ತನ್ನ ಸೋದರ ಮಾವನ ಮಗ ಎಂದೂ, ಚುರುಕು ಬುದ್ಧಿಯವನೆಂದು, ಸಮಯದಲಿ ಸಹಾಯ ಮಾಡುವ ಆತ್ಮೀಯನೆಂದೂ ಕಡೆಗೆ ಗುರು ಎಂದೂ ತಿಳಿದಿದ್ದ
("ಕಾರ್ಪಣ್ಯ ದೋಷೋಪಹತ ಸ್ವಭಾವಃ ...
...
ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಾಂ" -೨೦ ನನಗೆ ನಿನ್ನ ಶಿಷ್ಯನೆಂದು ತಿಳಿದು ಶಿಕ್ಷಣ ನೀಡು )
ಅರ್ಜುನನ ಸಂದೇಹ - ಕೃಷ್ಣ ಈಗಿನವನು, ಸೂರ್ಯನಿಗೆ ಉಪದೇಶಿಸುವುದು ಹೇಗೆ?
[ಕೃಷ್ಣ ಅರ್ಜುನನಿಗಿಂತ ೬ ತಿಂಗಳು ದೊಡ್ಡವನು - ಕೃಷ್ಣ ಶ್ರಾವಣದಲ್ಲಿ ಹುಟ್ಟಿದ್ದರೆ ಅರ್ಜುನ ಫಾಲ್ಗುಣ ಮಾಸದಲ್ಲಿ ಹುಟ್ಟಿದವನು -ಫಾಲ್ಗುನಿ ಎಂದೂ ಹೆಸರು ಆತನಿಗೆ]

ಈಗ ಕೃಷ್ಣನು -- ತಾನೆ ಪರಮಾತ್ಮ, ಸರ್ವತಂತ್ರ ಸ್ವತಂತ್ರ ಎಂದು, ತನಗೆ ಜನ್ಮಾತರವಿಲ್ಲವೆಂದು ಸೃಷ್ಟಿಯ ಸ್ವಾಮಿಯೆಂದೂ ಅವತಾರ ಎತ್ತುವನೆಂದೂ ತಿಳಿಸುತ್ತಾನೆ. ತನ್ನ ಜನ್ಮ ಕಾರಣವನ್ನು - ತಾನು ಹೇಗೆ, ಯಾವಾಗ ಮತ್ತು ಏತಕ್ಕಾಗಿ ಜನ್ಮ ತಾಳುವೆನೆಂದು ತಿಳಿಸುತ್ತಾನೆ.
  • ಪರಮಾತ್ಮನು ಪ್ರಕೃತಿಯನ್ನು ವಶ ಮಾಡಿಕೊಂಡು ಮಾಯೆಯ ಮೂಲಕ ಜನ್ಮ ಎತ್ತುವನು. ಮನುಷ್ಯನಾದರೂ ಪೂರ್ವಾಜಿತ ಕರ್ಮದ ಬಲಾತ್ಕಾರದಿಂದ ಜನ್ಮ ಎತ್ತುವನು
  • ಪರಮಾತ್ಮನಾದರೋ ಸೃಷ್ಟಿಯ ಒಡೆಯ ಅವನ ಸಂಕಲ್ಪ ಮಾತ್ರದಿಂದ ಅವತಾರವೆತ್ತುವನು. ಆತನು ಮಾಯಾಧೀಶನು ನಾವಾದರೊ ಮಾಯಾಧೀನರು
  • ಬೇರೆ ಬೇರೆ ಅವತಾರವನೆತ್ತುವನು - ವಾಮನ-ನರಸಿಂಹ-ಮತ್ಸ್ಯ ಹೀಗೆ. ಸಾಮಾನ್ಯ ಮನುಷ್ಯನ ರೂಪದಿಂದ ಅವತಾರವೆತ್ತಿದರೂ ಸಾಮಾನ್ಯನಂತೆ ಮಾಯೆಗೆ ಸಿಲುಕನು

ಯಾವಾಗ ಅವತಾರವೆತ್ತುವನು ?
ಆತನ ಅವತಾರ ದಿನವೂ ಸಾಧ್ಯವಿಲ್ಲ; ನಮ್ಮ ಸಾಮಾಜಿಕ-ರಾಜಕೀಯ-ಆರ್ಥಿಕ ಬಿಕ್ಕಟ್ಟುಗಳು ಕಾರಣದಿಂದ ಆತನ ಅವತಾರವಲ್ಲ
(ಆದರೆ ಆತನ ಅವತಾರವಾದ ನಂತರ ಇವೆಲ್ಲವೂ ಸರಿ ದಾರಿಗೆ ಬರಲೂ ಬಹುದು)
ಆತನ ಅವತಾರಕ್ಕೆ ಮುಖ್ಯವಾದ ಕಾರಣ ಧರ್ಮ-ಗ್ಲಾನಿ. ಯಾವಾಗ ಧರ್ಮದ ಅವಸಾನವಾಗಿ ಅಧರ್ಮದ ವೃದ್ಧಿಯಾಗುವುದೊ ಆಗ ಪರಮಾತ್ಮನ ಅವತಾರವಾಗುವುದು. ಅಧರ್ಮದ ಉತ್ಥಾನವು ಧರ್ಮದ ಗ್ಲಾನಿಯು ಆಗುವ ಸಮಯವು ಯಾವಾಗ ಎಂಬ ನಿರ್ಣಯವೂ ಆತನದೆ. ಯಾವ ಕಾಲದಲ್ಲಿ, ಯಾವ ದೇಶದಲ್ಲಿ, ಯಾವ ರೂಪದಲ್ಲಿ ತಾನು ಅವತಾರ ಎತ್ತಬೇಕೆಂದು ನಿರ್ಧರಿಸುತ್ತಾನೊ ಆಗ ಆತನ ಸಂಕಲ್ಪ ಮಾತ್ರದಿಂದ ಅವತಾರವಾಗುವುದು

"ಧರ್ಮ" ಎಂದರೇನು ಎಂಬ ಪ್ರಶ್ನೆ ಇದೆ
ಧರತಿ - ಹಿಡಿದು ಕೊಳ್ಳುವುದು ಧರ್ಮ

ಮಹಾಭಾರತದಲ್ಲಿ ಧರ್ಮಕ್ಕೆ ಭೀಷ್ಮನ ವ್ಯಾಖ್ಯಾನವು ಹೀಗಿದೆ:
"ಅಹಿಂಸಾರ್ಥಾಯ ಲೋಕಾನಾಂ ಧರ್ಮ ಪ್ರವಚನಂ ಕೃತಂ
ಪ್ರಭವಾರ್ಥಾಯ ಲೋಕಾನಾಮ್...
ಧಾರಣಾಥಾಯ ಲೋಕಾನಾಮ್.."
ಯಾವುದು ಅಹಿಂಸೆಯೋ ಅದು ಧರ್ಮ; ಯಾವುದರಿಂದ ಮನುಷ್ಯನಿಗೆ ಶ್ರೇಯಸ್ಸೋ ಅದು ಧರ್ಮ; ಯಾವುದರಿಂದ ಮನುಷ್ಯನು ತನ್ನ ಕಾಲ ಮೇಲೆ ತಾನು ಸ್ವತಂತ್ರವಾಗಿ ನಿಲ್ಲಲು ಸಾಧ್ಯವಾಗುವುದೋ ಅದು ಧರ್ಮ

ಸುಧೀಂದ್ರ ತೀರ್ಥ ಸ್ವಾಮಿಗಳು ತಮ್ಮ ಹಿಂದಿನ ಪ್ರವಚನದಲ್ಲಿ ಧರ್ಮಕ್ಕೆ ಒಂದು interesting ವ್ಯಾಖ್ಯಾನ ನೀಡಿದ್ದರು
"ಈಗ ಒಂದು ವಸ್ತುವಿದೆ - ನೀರು ಅಥವಾ ಬೆಂಕಿ
’ಬೆಂಕಿಯ ಧರ್ಮವೇನು’ ಎಂದು ಯಾರಾದರು ಪ್ರಶ್ನಿಸಿದರೆ ತಕ್ಷಣ ಬರುವ ಉತ್ತರ --
’ಬೆಂಕಿಯ ಧರ್ಮ ಸುಡುವುದು, ಶಾಖ ಕೊಡುವುದು’
ಇಲ್ಲಿ ಧರ್ಮವೆಂದರೆ property ಸ್ವಭಾವ ಎನ್ನುವ ಅರ್ಥ ಬಂದಿತು
ಒಂದು ಪದಾರ್ಥದ ಸಾರ ತತ್ವ ಎನ್ನುವ ಅರ್ಥ ಬಂದಿತು
ಒಂದು ದ್ರವ್ಯಕ್ಕೆ ಅದರ ಗುಣ; ಗುಣವಿಲ್ಲದಿದ್ದರೆ ದ್ರವ್ಯವಿಲ್ಲ matter:property
ಮನುಷ್ಯನ-ಜಗತ್ತಿನ ಸಹಜ ಸ್ವಭಾವದ (ಸಹಜ ಧರ್ಮದ) ಅವಸಾನವಾಗಿ ಯಾವಾಗ ಪಾಶವೀ-ರಾಕ್ಷಸೀ ಸ್ವಭಾವದ ಅಭ್ಯುದಯವಾಗುವುದೋ ಆಗ ಧರ್ಮಗ್ಲಾನಿ ಆಯಿತೆಂದೆ ಅರ್ಥ"

ಭೀಮನ ಪ್ರಕಾರ (ಯುಧಿಷ್ಟಿರನಿಗೆ ಹೇಳುವಾಗ) ಧರ್ಮವೆಂದರೆ -- ದಾನ, ಯಜ್ಞ, ಪೂಜ್ಯಪೂಜ (ಅಂದರೆ ಪೂಜ್ಯರ-ಹಿರಿಯರ ಸೇವೆ-ಪೂಜನೆ), ವೇದಧಾರಣ (ವೇದದ ಅಧ್ಯಯನ), ಆರ್ಜವ(ಸರಳತೆ)

ಕೃಷ್ಣನು ಭಾಗವತದಲ್ಲಿ ತಿಳಿಸುವ ಧರ್ಮದ ವ್ಯಾಖ್ಯಾನ -- ಯಜ್ಞಾಃ ದಾನಂ, ತಪಃ
  • ಯಜ್ಞ ಎಂದರೆ ಹೋಮ-ಹವನದ ಮೂಲಕ ದೇವರನ್ನು ತೃಪ್ತಿಸುವುದರ ಜೊತೆಗೆ, ಋಷಿಗಳ ಆರಾಧನೆ, ಪಿತೃಗಳ ಪೂಜೆ, ಮನುಷ್ಯರಸೇವೆ, ಪ್ರಾಣಿ-ಪಕ್ಷಿಗಳ ಸೇವೆ-ಆರಾಧನೆ -- ಇವಿಷ್ಟು ಸೇರಿ ಯಜ್ಞ
  • ದಾನಮ್ - ಎರಡು ಬಗೆಯ ದಾನ. ಆಂತರಿಕ ದಾನವೆಂದರೆ ಜ್ಞಾನ ದಾನ, ಬಹಿರಂಗ ದಾನವೆಂದರೆ ಹಣ, ಪದಾರ್ಥಮೊದಲಾದವುಗಳ ದಾನ
  • ತಪಃ - ಶಾರೀರಿಕ ತಪಸ್ಸಲ್ಲದೆ (ಭೀಮನ ಮಾತಿಗೂ ಅನ್ವಯಿಸಿ) ಪೂಜ್ಯರ ಪೂಜೆ (ದೇವದ್ವಿಜಗುರುಪ್ರಾಜ್ಞ ಪೂಜನಮ್), ವೇದದ ಅಧ್ಯಯನ, ಹಾಗು ಆರ್ಜವಮ್ ಎಂದರೆ ಸರಳತೆ-ಪ್ರಮಾಣಿಕತೆ
ಇದರ ವಿರುದ್ಧವಾದುದು ಅಧರ್ಮವಾಗುತ್ತದೆ; ಎಂದರೆ ಯಜ್ಞವಿಲ್ಲದಿರುವುದು, ದಾನವಿಲ್ಲದಿರುವುದು(ಜ್ಞಾನವಿಲ್ಲದಿರುವುದು), ತಪಸ್ಸು ಇಲ್ಲದಿರುವುದು.

ಇಲ್ಲಿಗೆ ಧರ್ಮದ ವ್ಯಾಖ್ಯಾನವಾಯಿತು. ಮುಂದುವರೆದು ಪರಮಾತ್ಮನ ಅವತಾರದ ಸಮಯಗಳಲ್ಲಿ ಧರ್ಮದ ಗ್ಲಾನಿ ಹೇಗಾಗಿತ್ತು ಎಂಬುದನ್ನು ಗಮನಿಸಬಹುದು

ರಾಮನ ಅವತಾರವಾದಾಗ:
  • ದಂಡಕಾರಣ್ಯದವರೆಗೆ ಹರಡಿದ ರಾಕ್ಷಸ ಧರ್ಮದ ಎದುರು ನಲುಗುತ್ತಿದ್ದ ಸನಾತನ ಧರ್ಮ
  • ದಕ್ಷಿಣದ ರಾವಣ ಮತ್ತು ಅವನ ಮಾಯಾವಿ ರಾಕ್ಷಸರ ಉಪಟಳ. ರಾಮ ಅಗಸ್ತ್ಯನ ಆಶ್ರಮಕ್ಕೆ ಹೋದಾಗ ಅಲ್ಲಿ ಋಷಿಗಳ ಅಸ್ಥಿ-ಮಜ್ಜೆಗಳನ್ನು ಕಾಣುತ್ತಾನೆ; ಇದೇಂದೆನು ಕೇಳಲಾಗಿ ಅವನಿಗೆ ತಿಳಿಯಿತು ರಾಕ್ಷಸರು ಸಮಾಧಿಯಲ್ಲಿದ್ದ ಋಷಿಗಳನ್ನು ಹಿಡಿದು ತಿನ್ನುತ್ತಿದ್ದರಂತೆ ಆಗ ಋಷಿಗಳಿಗೆ ತಿರುಗಿ ಶಾಪ ಕೊಡಲು ಅಥವಾ ತಪ್ಪಿಸಿಕೊಳ್ಳಲು ಅಥವಾ ಸ್ವ-ರಕ್ಷಣೆ ಮಾಡಿಕೊಳ್ಳಲು ಅವಕಾಶವಾಗದು ಎಂದು ರಾಕ್ಷಸರು ಕಂಡುಕೊಂಡ ಉಪಾಯ (ರಾಮನು ಅಲ್ಲಿಯೆ ಪ್ರತಿಜ್ಞೆ ಮಾಡುವುದು - ರಾಕ್ಷಸರನ್ನು ಆಮೂಲಾಗ್ರವಾಗಿ ಮುಗಿಸುವೆನೆಂದು -- ಪ್ರತಿಜ್ಞಾಮಕರೋದ್ರಾಮಃ...)

ಕೃಷ್ಣನ ಅವತಾರದ ವೇಳೆಯಲ್ಲಿ:
  • ಒಂದೆಡೆ ಕಂಸ, ಶಿಶುಪಾಲ, ಪೂತನಿ ಮತ್ತವರ ಅಸುರ ಪರಿವಾರ, ಶಕಟ ತೃಣಾವರ್ತ ಇತ್ಯಾದಿ
  • ಇನ್ನೊಂದೆಡೆ ನರಕಾಸುರ ೧೬,೧೦೦ ರಾಜಕುಮಾರಿಯರನ್ನು ಬಂಧಿಸಿ ಇಟ್ಟಿರುತ್ತಾನೆ
  • ಅಲ್ಲಿ ಜರಾಸಂಧ ೨೨,೮೦೦ ರಾಜಕುಮಾರರನ್ನು ಬಂಧನದಲ್ಲಿ ಹಾಕಿ ನರಮೇಧಕ್ಕಾಗಿ ತಯಾರಾಗುತ್ತಿದ್ದಾನೆ
  • ಪೌಂಢ್ರಕ ವಾಸುದೇವನೆಂಬ ಇನ್ನೊಬ್ಬ ತಾನೆ ಪರಮಾತ್ಮನೆಂದು ಕೃತಕ ಕೈಗಳನ್ನು ಹಾಕಿಕೊಂಡು ಶಂಖ-ಚಕ್ರಗಳನ್ನು ಅಂಟಿಸಿಕೊಂಡು ಇರುತ್ತಾನೆ. [ಕೃಷ್ಣನಿಗೇ ಸಂದೇಶ ಕಳಿಸುತ್ತಾನೆನಿನ್ನ ಬಿರುದು-ಬಾವಲಿಗಳನ್ನು ನನಗೆ ಅರ್ಪಿಸಿ ನಾನೆ ವಾಸುದೇವನೆಂದು ನನಗೆ ಶರಣು ಬಾಎಂದು!!]
  • ಇಲ್ಲಿ ದುರ್ಯೋಧನನು ತಾನೆ ಸಾಮ್ರಾಟನಾಗಬೇಕೆಂದು ನಿಂತಿದ್ದಾನೆ; ಯಾರು ತನ್ನ ಹಿರಿಯರ ಉಪಸ್ಥಿತಿಯಲ್ಲಿ ಸ್ತ್ರೀಯ ಮಾನಭಂಗಕ್ಕೆ ಪ್ರಯತ್ನಿಸಿದ್ದನೊ ಅವನು ರಾಜ್ಯದ ರಾಯನಾದರೆ ಧರ್ಮವೆಲ್ಲಿ ನಿಲ್ಲುತ್ತದೆ?
ಹೀಗಿದ್ದಾಗ ಕೃಷ್ಣನ ಅವತಾರವಾಗಿದೆ.. ಮತ್ತು ಇದೇ ವಿಷಯವನ್ನು ಆತ assert ಮಾಡುತ್ತಿದ್ದಾನೆ

ಬಹುಶಃ ಈ ಶ್ಲೋಕ ಗೊತ್ತಿಲ್ಲದ ಜನರು ಭಾರತದಲ್ಲಿ ಬಹಳ ಕಡಿಮೆ ಇದ್ದಾರು. ಭಾಗವತ ಮತ್ತಿತರ ಪುರಾಣಗಳ ಆದಿಯಲ್ಲಿ ಅಥವಾ ಕೊನೆಯಲ್ಲಿ ಈ ಶ್ಲೋಕವನ್ನು ಹೇಳಲಾಗುತ್ತದೆ
ಅಧರ್ಮವು ಹೆಚ್ಚಿ ಧರ್ಮವು ಕಳೆಗುಂದಿದಾಗ ತಾನೆ ಅವತಾರವೆತ್ತುವುದಾಗಿ ಪರಮಾತ್ಮ ಅಶ್ವಾಸನೆ ನೀಡುತ್ತಿದ್ದಾನೆ .. ತಾನೆ ಭೂಮಿಗೆ ಬರುವುದಾಗಿ ತಿಳಿಸಿ ಭಕುತರಿಗೆ ರೋಮಾಂಚನಗೊಳಿಸುವ ಶ್ಲೋಕವಿದು

*****************************************
The commentary gets a new dimension with my dear friend Jyothsna Kamath's Satsang material. Here it goes:

*****************************************
yadA yadA hi dharmasya glAnirbhavati bhArata
abhyutthAnam adharmasya tadAtmAnam srjAmyaham 7


Dharma is derived from the Sanskrit root ‘dhr’ meaning to uphold, support, nourish, nurture, dhaarayati iti dharmah. Dharma is the basis of human life. it is a way of life to be followed by all created beings that upholds the individual performing the allotted duties according to the VarnAshrama system, thereby the moral and ethical order of society and ultimately the entire created universe. In fundamental terms, Dharma is a principle of living with a goal of reaching the Supreme to enable the soul to attain moksha or final emancipation and realize its true nature – that is its complete dependence on and love for God. Love for the Supreme is each soul’s essential nature.
Adharma refers to a life that makes us stray away from the path leading to God.


This eternal dharma is the eternal truth, the principle given by God Himself (dharmam tu sakshaad bhagavad pranitam – Srimad Bhagavatam)and thus, was never created and will never be destroyed.
But with time, its practice is forgotten by individuals as a result of which it appears to have faded out from age to age. Dharma is like the sun which is always there and never ceases to exist, but it cannot be seen when it is obscured by clouds. The true goal of existence which is communion with the Lord through Bhakti (loving devotion) takes a backseat and the human race in general becomes completely involved in adhArmik living.


When there is an obscuration of dharma and rise of adharma, it is a time of grave moral crisis. Dharmasya glAni refers to the times when the virtuous and righteous are molested by the unrighteous, not allowed to pursue their true goal. The VarnAshrama system is not followed, and there is a general faithlessness the world over. Rise of adharma manifests as ritualistic monotony, crass materialism, and excessive engagement in sense pleasures with resultant lack of discrimination and renunciation. Values of kindness and generosity, of forbearance and simplicity are relegated to the background. Materialism, excessive involvement in sense enjoyment, and identification of ourselves as body-mind complex means Adharmasya abhyutthAna or unrighteousness is in the ascendant. This excess involvement in senses means evil, greed and corruption and the evil forces trouble the virtuous.


Whenever there is a decline in dharma and an uprising of adharma, the lord says that He takes an avatAra – meaning a material form through His own potency of YogamAyA. The difference between God and all of us is that we are subject to Prakrti, but Prakrti is subject to God.


The purpose of His avatAra is threefold as the next verse says.

paritrANAya sAdhUnAm vinAsAyaca duskrtAm

dharmasamsthApanArthAya sambhavAmi yuge yuge 8


sAdhUnAm ParitrANAya - The lord appears in material form to redeem the good from the wicked forces. The unalloyed devotees are satisfied because they are granted the vision of their lord that they have longed for. Therefore, god takes avatAra because he is full of compassion and so He appears in material form for us inferior beings who are encaged in this Prakrti and cannot envision Him beyond this boundary. It is said that Dharmo rakshati rakshitah: Dharma protects those who protect it.


duskrtAm vinasAya - The lord also appears in order to chastise the wicked and evil-minded. One who deviates from the path of dharma will have to pay a price for it in the long run. He goes to the extent of destroying or killing them since it has reached a situation where no other can do anything. Even this act of his punishing is not spiteful but an act of compassion because He is freeing those souls from the present unrighteous condition to start in fresh circumstances to reform and turn godward.


dharma samsthApanArthAya - The third is to reestablish dharma which is but the consequence of the first two. He descends when there is no other means to reinstitute dharma. Therefore, an avatAra is but the very embodiment of dharma. As God Himself is dharma, the disregard of dharma is tantamount to the neglect of God. With the lord constantly watching over dharma, one thing is sure that it will never be destroyed. It may decline; but whenever adharma overrides it, there will be an avatAra at the opportune moment to reestablish it. BhagavAn emerges as an avatAra for the revival of the practice of dharma and not for its protection because it is eternal and absolute. It is only the practice of dharma that needs a renaissance.

*************************************