Wednesday, April 29, 2009

gita satsang 4.39

The shloka that had come up for discussion last month was again from the 4th chapter of the bhagavadgita

shraddhavallabhate jnanam
tat-parah samyatendriyah
jnanam labdhva param shantim
acirenadhigacchati
4.39

"A faithful man who is dedicated to transcendental knowledge and who subdues his senses is eligible to achieve such knowledge, and having achieved it he quickly attains the supreme spiritual peace."

These are some of the points which I spoke upon. (date: April 5th 2009)

*****************************************

ಇದರ ಹಿಂದಿನ ೩ ಶ್ಲೋಕದಲ್ಲಿ ಕೃಷ್ಣನು ಮೋಹವನ್ನು ಗೆಲ್ಲುವ ಸಾಧನ ಜ್ಞಾನ ಎಂದು ಹೇಳಿ, ಜ್ಞಾನದ ಪ್ರಶಂಸೆ ಮಾಡುತ್ತಾನೆ

’ಯಜ್ಞಾತ್ವಾ ನ ಪುನರ್ಮೋಹಂ ಎವಂ ಯಾಸ್ಯಸಿ ಪಾಂಡವ..’

ಪರಮ ಪಾಪಿಯಾಗಿದ್ದರು ಜ್ಞಾನ ನೌಕೆಯ ಮೂಲಕ ದಾಟಬಹುದು ಎಂದೂ, ಬೆಂಕಿಯು ಹೇಗೆ ಭಸ್ಮ ಮಾಡುತ್ತದೆಯೋ ಹಾಗೆಯೇ ಜ್ಞಾನವು ಕರ್ಮ ರಾಶಿಯನ್ನು ಭಸ್ಮ ಮಾಡುತ್ತದೆ ಎಂದು ಹೇಳುತ್ತಾನೆಮತ್ತೂ ಜ್ಞಾನದಷ್ಟು ಪವಿತ್ರ ವಸ್ತು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಹೇಳುತ್ತಾನೆ.
ಪ್ರಸ್ತುತ ಈ ಶ್ಲೋಕದಲ್ಲಿ -- ಜ್ಞಾನ ಪಡೆಯುವ ದಾರಿ ಯಾವುದು? ಜ್ಞಾನ ಸಾಧನವಾವುದು? ಅದರ ಫಲವೇನು? ಎಂಬುದನ್ನು ಹೇಳುತ್ತಾನೆ
ಇದರ ಮುಂದಿನ ಶ್ಲೋಕದಲ್ಲಿ ಅಜ್ಞಾನ-ವಿಪರೀತ ಜ್ಞಾನ ಯಾವುದು? ಹೇಗೆ ಬರುತ್ತದೆ? ಮತ್ತು ಅದರ ಫಲವೇನು? ಎಂಬುದನ್ನು ಹೇಳುತ್ತಾನೆ
ಜ್ಞಾನ ಸಾಧನವೇನು? ಈ ಜ್ಞಾನ ಯಾರಿಗೆ ಸಿಗುತ್ತದೆ? ಎಂಬುದಕ್ಕೆ -- ಶ್ರದ್ಧಾವಾನ್ ಮತ್ಪರಃ ಸಂಯತೇದ್ರಿಯಃ

ಯಾರಿಗೆ ಶ್ರದ್ಧೆ ಇದೆಯೋ, ಯಾರಿಗೆ ನನ್ನ ಮೇಲೆ ನಿಷ್ಠೆ ಇದೆಯೋ, ಮತ್ತು ಯಾರು ಜಿತೇಂದ್ರಿಯನೋ - ಇಂದ್ರಿಯ ನಿಗ್ರಹ ಮಾಡಿರುವನೋ ಅವನಿಗೆ ಜ್ಞಾನ ಸಿಗುತ್ತದೆ

(ಬಹಳಷ್ಟು ಗೀತೆಯ ಪುಸ್ತಕಗಳಲ್ಲಿ ’ಮತ್ಪರಃ’ ಬದಲು ’ತತ್ಪರಃ’ ಎಂದು ಇದೆ. ಪ್ರಾಯಶಃ ಪಾಠಾಂತರಗಳು. ಇಲ್ಲಿ ಮಂತ್ರಾಲಯದ ರಾಘವೆಂದ್ರ ಸ್ವಾಮಿಗಳ ’ಗೀತ ವಿವೃತ್ತಿ’ಯ ಪಾಠವನ್ನು ಪರಿಗಣಿಸಲಾಗಿದೆ)

ಶ್ರದ್ಧಾವಾನ್ ಎಂದರೆ ಆಸ್ತಿಕ ಬುದ್ಧಿಯುಳ್ಳವನು ಎಂದೂ ಅರ್ಥವಿದೆ;

ಶ್ರದ್ಧಾವಾನ್ ಆಸ್ತಿಕ್ಯ ಬುದ್ಧಿಮಾನ್

ಮತ್ಪರಃ ಮದೇಕನಿಷ್ಠಃ

ಸಂಯತೇಂದ್ರಿಯೋ ಜಿತೇಂದ್ರಿಯಶ್ಚ


ಮತ್ತು ಜ್ಞಾನ ಸಿಕ್ಕ ನಂತರ ಏನು?
ಪರಾಂ ಶಾಂತಿಂ ಅಚಿರೇಣ ಅಧಿಗಚ್ಛತಿ
ಮೋಕ್ಷ ಸಿಗುತ್ತದೆ - ಆದಷ್ಟು ಬೇಗ ಸಿಗುತ್ತದೆ; ಎಂದು ಕೃಷ್ಣ ಹೇಳುತ್ತಾನೆ ಪ್ರಾರಬ್ಧವಿಲ್ಲದಿದ್ದರೆ ತಕ್ಷಣ ಸಿಗುತ್ತದೆ ಮತ್ತು ಪ್ರಾರಬ್ಧ ಕರ್ಮ (ಫಲ) ಇನ್ನೂ ಮಿಕ್ಕಿದ್ದರೆ, ಅದು ಮುಗಿದ ನಂತರ ಮೋಕ್ಷ ಸಿಗುತ್ತದೆ ಎಂಬುದು ಕೃಷ್ಣನ ನುಡಿ.


ನಮಗೆಲ್ಲ ರಾಜ ಅಂಬರೀಷನ ಕಥೆ ಗೊತ್ತಿದೆ. ಪರಮ ಭಾಗವತನಾದ ಆತನು, ಒಮ್ಮೆ ದ್ವಾದಶಿ ವ್ರತ ಸಾಧನೆ ಮಾಡಬೇಕು ಎಂದು ಒಂದು ವರುಷ ವ್ರತ ಮಾಡಿದನು. ಜಿತೇಂದ್ರಿಯನಾಗಿ (ಇಂದ್ರಿಯ ನಿಗ್ರಹ ಮಾಡಿ) ರಾಜ್ಯ ಭೋಗಾದಿಗಳನ್ನು ಬಿಟ್ಟು, ಎಲ್ಲವೂ ಆ ಶ್ರೀ ಹರಿಯೇ ಎಂದೆಣಿಸಿ ವ್ರತ ಮಾಡಿದನು. ಕಡೆಯ ದ್ವಾದಶಿ ಕಾರ್ತಿಕ ಮಾಸದಲ್ಲಿ ಬಂದಿತ್ತು. ಮೂರು ದಿವಸಕ್ಕೆ ಮುಂಚೆಯೇ ಉಪವಾಸ ಮಾಡಿ, ದ್ವಾದಶಿಯ ದಿನ ಬೆಳಿಗ್ಗೆಯೇ ಎದ್ದು ಸಹಸ್ರ ಕುಂಭಾಭಿಷೇಕ ಇತ್ಯಾದಿಗಳನ್ನು ಮುಗಿಸಿ, ದಾನಾದಿಗಳನ್ನು ಮಾಡಿ, ಎಲ್ಲರಿಗೂ ಮೃಷ್ಟಾನ್ನ ಭೋಜನ ಉಣಿಸಿದನು. ಇನ್ನೇನು ತಾನು ತಿನ್ನಬೇಕು ಎನ್ನುವುದರಲ್ಲಿ ದೂರ್ವಾಸ ಮಹರ್ಷಿಗಳು ಅಲ್ಲಿಗೆ ಬಂದರು.

ಪರಮ ಆದರದಿಂದ ಅವರನ್ನು ಬರ ಮಾಡಿಕೊಂಡ ಅಂಬರೀಷನು ’ಇದು ಸಾಧನಿ ದ್ವಾದಶಿಯಾಗಿದ್ದು ತಾವು ಬಂದದ್ದು ತುಂಬಾ ಸಂತೋಷವಾಯಿತು; ಇಂದು ತಮ್ಮೊಂದಿಗೆ ನನ್ನ ಭೋಜನವಾಗಲಿ’ ಎಂದಿತ್ಯಾದಿಯಾಗಿ ಹೇಳಿ, ಅವರಿಗೆ ಯಮುನಾ ನದಿಯಲ್ಲಿ ಮಿಂದು ಬರಲು ತಿಳಿಸಿದನು ಮತ್ತು ದೂರ್ವಸರಿಗಾಗಿ ಕಾಯುತ್ತ ಇದ್ದನು.

ಇತ್ತ ಸ್ನಾನಕ್ಕಾಗಿ ಯಮುನೆಗೆ ಹೋದ ದೂರ್ವಾಸರು ಸ್ನಾನ-ಸಂಧ್ಯೆಯನ್ನು ಮುಗಿಸಿ ಬರುವುದರಲ್ಲಿ ಬಹಳ ಹೊತ್ತಾಯಿತು. ದ್ವಾದಶಿಗೆ ಕೇವಲ ಒಂದೆ ಗಳಿಗೆ ಮಿಕ್ಕಿತ್ತೆಂದು ಮನಗಂಡ ಅಂಬರೀಷನು ತನ್ನ ಒಂದು ವರುಷದ ವ್ರತವು ಈಗ ಪಾರಣೆ ಮಾಡದಿದ್ದರೆ ವ್ಯರ್ಥವಾಗುತ್ತದೆ ಎಂದು ತಿಳಿದು ಚಡಪಡಿಸಿದನು. ತನ್ನ ಪುರೋಹಿತರೊಂದಿಗೆ-ಗುರುಗಳೊಂದಿಗೆ ವಿಚಾರ ಮಾಡಿದನು. ಆಗ ’ಕೇವಲ ತೀರ್ಥ ಮತ್ತು ತುಳಸಿ ತೆಗೆದುಕೊಂಡು ದ್ವಾದಶಿ ಪಾರಣೆ ಮುಗಿಸು. ವ್ರತವು ಸಂಪೂರ್ಣವಾಗುತ್ತದೆ ಮತ್ತು ದೂರ್ವಾಸರನ್ನು ಬಿಟ್ಟು ಊಟ ಮಾಡಿದಂತೆಯು ಆಗುವುದಿಲ್ಲ’ ಎಂದು ಆತನ ಪುರೋಹಿತರು-ಗುರುಗಳು ಹೇಳಿದರು.ಅಂಬರೀಷ ಮಹಾರಾಜನು ಒಂದು ಪತ್ರ ತುಳಸಿ ಮತ್ತು ತೀರ್ಥ ತೆಗೆದುಕೊಂಡು ದೂರ್ವಾಸರಿಗಾಗಿ ಕಾಯುತ್ತ ಕೂತನು.

ಯಮುನಾ ತೀರದಿಂದ ಬಂದ ದೂರ್ವಾಸರು ನಡೆದಿದ್ದನ್ನು ತಿಳಿದು ಕೋಪಾವಿಷ್ಟರಾಗಿ ’ನನ್ನನ್ನು ಬಿಟ್ಟು ದ್ವಾದಶಿ ಪಾರಣೆ ಮುಗಿಸಿದೆಯಾ?’ ಎಂದು ಹೇಳಿ ಒಂದು ಶಕ್ತಿ ದೇವತೆಯನ್ನು ಪ್ರಕಟಿಸಿ ರಾಜನನ್ನು ಕೊಲ್ಲಲು ಅಜ್ಞಾಪಿಸಿದರು. ಇಷ್ಟೆಲ್ಲ ನಡೆಯುತ್ತಿದ್ದರು ರಾಜನು ಶ್ರದ್ಧೆಯಿಂದ ಶ್ರೀ ಹರಿಯಲ್ಲೆ ನೆಟ್ಟ ಮನಸ್ಕನಾಗಿ ಧ್ಯಾನದಲ್ಲಿ ಇದ್ದನು.

ಹಿಂದೆ ಪರಮ ಭಕ್ತನಾದ ಅಂಬರೀಷನನ್ನು ಕಾಪಾಡಲು ಸ್ವಯಂ ಪರಮಾತ್ಮನು ತನ್ನ ಸುದರ್ಶನವನ್ನು ರಾಜನಿಗೆ ಕೊಟ್ಟಿದ್ದನು. ಆ ಸುದರ್ಶನವು ಆ ಶಕ್ತಿ ದೇವತೆಯನ್ನು ಕೊಂದು ದೂರ್ವಸರ ಕಡೆಗೆ ಹೋಯಿತು. ಇದರಿಂದ ಕಂಗೆಟ್ಟ ದೂರ್ವಾಸರು ಸುದರ್ಶನದ ಜ್ವಾಲೆಯಿಂದ ತಪ್ಪಿಸಿಕೊಂಡು ಓಡ ತೊಡಗಿದರು.

ಶಿವನಲ್ಲಿ-ಬ್ರಹ್ಮನಲ್ಲಿ-ಕಡೆಗೆ ವಿಷ್ಣುವಿನಲ್ಲಿ ಹೋಗಿ ಬೇಡಿಕೊಳ್ಳಲು, "ಈ ಸುದರ್ಶನವು ತನ್ನ ಭಕ್ತನ ಅಧೀನವಾಗಿದೆ; ನೀನು ಹೋಗಿ ಆ ಅಂಬರೀಷನಲ್ಲೆ ಕ್ಷಮೆಯಾಚಿಸು" ಎಂದು ಆಜ್ಞಾಪಿಸಿದನು. ಮತ್ತೆ ಅಂಬರೀಷನಲ್ಲಿ ಮರಳಿದ ದೂರ್ವಸನು ರಾಜನ ಕಾಲಿಗೆ ಬಿದ್ದು ರಕ್ಷಿಸು ಎನ್ನಲು, ಅಂಬರೀಷನೆ ಸುದರ್ಶನನಲ್ಲಿ ಬೇಡಿಕೊಂಡು ಶಾಂತವಾಗಿಸಿದನು.

ಇಷ್ಟೆಲ್ಲ ಕಳೆಯಲು ೧ ವರುಷವಾಗಿತ್ತು. ಈ ಎಲ್ಲ ಹೊತ್ತೂ ರಾಜನು ಕೇವಲ ಏಕ ನಿಷ್ಠೆಯಿಂದ (ಮತ್ಪರಃ) ಪರಮಾತ್ಮನಲ್ಲಿ ಮನಸ್ಸಿಟ್ಟು ಕೇವಲ ನೀರನ್ನು ಕುಡಿದು ದಿನ ಕಳೆದಿದ್ದನು. ನಂತರ ದೂರ್ವಾಸರೊಂದಿಗೆ ಊಟ ಮಾಡಿ ಅವರನ್ನು ಬೀಳ್ಕೊಟ್ಟನು.


ಇಲ್ಲಿ ನಾವು ಅಂಬರೀಷನಲ್ಲಿ ಗಮನಿಸಬಹುದಾದ ಗುಣಗಳನ್ನೆ ಪರಮಾತ್ಮನು ಗೀತೆಯ ಶ್ಲೋಕದಲ್ಲಿ ತಿಳಿಸಿದ್ದಾನೆ.ಶ್ರದ್ಧೆ-ಏಕ ನಿಷ್ಠೆ-ಜಿತೆಂದ್ರಿಯತ್ವ ಇವುಗಳಿದ್ದರೆ ಜ್ಞಾನವು ಮತ್ತು ಜ್ಞಾನದಿಂದ ಮೋಕ್ಷವು ಸಿಗುವುದು ಎಂದು ಈ ಶ್ಲೋಕದ ಅಭಿಪ್ರಾಯ.
**********************

gita satsanga - 4.11

The shloka that had come up for discussion last month was, the famous shloka from the 4th chapter of the bhagavadgita

ye yatha mam prapadyante
tams tathaiva bhajamy aham
mama vartmanuvartante
manushyah partha sarvasah 4.11

"As all surrender unto Me, I reward them accordingly. Everyone follows My path in all respects, O son of Pritha."

These are some of the points which I spoke upon. (date: March 1st 2009)

*****************************************

ಹಿಂದಿನ ಶ್ಲೋಕದಲ್ಲಿ ಕೃಷ್ಣ, ತಾನು ಯಾವಾಗ ಜನ್ಮ ತಾಳುತ್ತೇನೆ, ಏಕೆ ಜನ್ಮಿಸುತ್ತೇನೆ ಇತ್ಯಾದಿ ಹೇಳುತ್ತಾನೆ. ಅವನ ಜನ್ಮ-ಕರ್ಮ ಎರಡೂ ದಿವ್ಯ ಎಂದೂ ಹೇಳುತ್ತಾನೆ. ಮತ್ತೂ, ಯಾರೂ ’ವೀತ ರಾಗ ಭಯ ಕ್ರೋಧ’ರೊ (ರಾಗ-ಭಯ-ಕ್ರೋಧ ಗಳಿಂದ ಮುಕ್ತರೋ) ಅಂತಹ ಜ್ಞಾನಿಗಳು ತನ್ನನ್ನು ಪಡೆಯುತ್ತಾರೆ ಎಂದೂ ಹೇಳುತ್ತಾನೆ.

ಪ್ರಸ್ತುತ ಈ ಶ್ಲೋಕದಲ್ಲಿ, ಹೇಗೆ ಆತನನ್ನು ಆರಾಧಿಸಬೇಕು, ಎಂಬ ಪ್ರಶ್ನೆಗೆ ಕೃಷ್ಣನು ತಿಳಿಸುತ್ತಾನೆ --
’ಯಾರು ಹೇಗೆಯೇ ನನ್ನನ್ನು ಆರಾಧಿಸಲಿ, ನನ್ನನ್ನು ಪಡೆಯುತ್ತಾರೆ.
ಜನರು ಎಲ್ಲ ರೀತಿಯಿಂದಲೂ ನನ್ನ ದಾರಿಯನ್ನು ಹಿಡಿಯುತ್ತಾರೆ’ ಎಂದು

(ಇದೇ ಶ್ಲೋಕವನ್ನು ಸ್ವಾಮಿ ವಿವೇಕಾನಂದರು ಪ್ರಖ್ಯಾತ ಸರ್ವ ಧರ್ಮ ಸಮ್ಮೇಳನದಲ್ಲಿ ಉದಾಹರಿಸಿದರು ಮತ್ತು ಈ ಶ್ಲೋಕವು ಅತ್ಯಂತ ಪ್ರಶಸ್ತವಾಗಿತ್ತು ಎಂಬ ಅಂಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದು)


ಇಲ್ಲಿ ಎರಡು ವಿಷಯಗಳನ್ನು ಹೇಳಲಾಗಿದೆ.
ಮೊದಲನೆಯದು, ’ಮಮ ವರ್ತ್ಮ’
--ಯಾವುದೇ ದೇವರ ಆರಾಧನೆ ಮಾಡಿದರೂ, ಅದು ಕೃಷ್ಣನಿಗೆ ತಲುಪುತ್ತದೆ
--ಈಶ್ವರನಿಗೆ ಪೂಜಿಸಿ, ದೇವಿಗೆ ಪೂಜಿಸಿ, ಯಜ್ಞ ಯಾಗಾದಿಗಳ ಮೂಲಕ ಇಂದ್ರಾದಿ ದೇವತೆಗಳನ್ನು ಪೂಜಿಸಿ, ಅದು ತಲುಪುವುದು ಕೃಷ್ಣನಿಗೆ

ಎರಡನೆಯದು, ’ಯೇ ಯಥಾ ಮಾಮ್ ಪ್ರಪದ್ಯಂತೆ :

೨ ರೀತಿಯ ವಿಷ್ಣು ಉಪಾಸಕರು ಇರುತ್ತಾರಂತೆ
ಮೊದಲನೆ ಬಗೆಯ ಭಕ್ತರು, ಶ್ರೀ ಹರಿಯನ್ನೇ (ಕೃಷ್ಣನನ್ನೇ) ಪೂಜಿಸುತ್ತಾರೆ. ಮುಕ್ತಿಯನ್ನು ಇಚ್ಛಿಸುವ, ಈ ಬಗೆಯ ಭಕ್ತರು ಜ್ಞಾನಿಗಳು
ಎರಡನೆಯ ಬಗೆಯ ಜನರು - ಬೇರೆ ದೇವರ ಪೂಜೆಯನ್ನು ಮಾಡಿ ’ಕೃಷ್ಣಾರ್ಪಣ’ ಎಂದು ಹೇಳುತ್ತಾರೆ. ಇವರು ಇತರ ಫಲೇಚ್ಛೆ ಇರುವ ಭಕ್ತರು. ಇವರನ್ನು ಶಾಸ್ತ್ರ ’ತ್ರೈವಿದ್ಯರು’ ಎಂದು ಕರೆಯುತ್ತದೆ. (ಎರಡು ಬಗೆಯ ಭಕ್ತರು ಹರಿ ಭಕ್ತರೇ ಎಂಬುದನ್ನು ಮರೆಯಬಾರದು)

[ನಾವು ಗೌರಿ-ಗಣೇಶ ಪೂಜೆಯ ಸಂದರ್ಭದಲ್ಲೂ ಹೀಗೆಯೆ ಪೂಜೆಯನ್ನು ಮಾಡಿ
ಅನೇನ --- ಪೂಜಾರಾಧನೇನ ಭಗವಾನ್ ಶ್ರೀ ಕೃಷ್ಣಃ ಪ್ರೀಯತಾಂ ಪ್ರೀತೊ ಭವತು. ಶ್ರೀ ಕೃಷ್ಣಾಪಣಮಸ್ತು’ ಎಂದು ಹೇಳುತ್ತೇವೆ’]

ಹೀಗೆ ಬೇರೆ ದೇವರ ಪೂಜೆ ಮಾಡಿದರೂ, ಅದರ ಪ್ರೇರಕನಾಗಿ ಸ್ವೀಕಾರ ಮಾಡುವವನು ಕೂಡ ಶ್ರೀ ಹರಿಯೆ; ಆದ್ದರಿಂದ ಅನ್ಯ ದೇವತೋಪಾಸನೆಯೂ ಸಹ ಶ್ರೀ ಹರಿಯ ಆರಾಧನೆಯೇ ಆಗುತ್ತದೆ

೯ನೆ ಅಧ್ಯಾಯದಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ
ಯೆಪ್ಯನ್ಯದೇವತಾ ಭಕ್ತಾಃ ಯಜಂತೆ ಶ್ರದ್ಧಯಾನ್ವಿತಾಃ
ತೇಪಿ ಮಾಮೇವ ಕೌಂತೇಯ ಯಜಂತ್ಯವಿಧಿ ಪೂರ್ವಕಮ್ ೯.೨೩
"ಯಾವ ಭಕ್ತರು ಅನ್ಯ ದೇವತೆಗಳನ್ನು ಶ್ರದ್ಧೆಯಿಂದ ಪೂಜಿಸುತ್ತಾರೊ, ಅವರು ಅವಿಧಿ-ಪೂರ್ವಕವಾಗಿಯಾಗಿದ್ದರೂ (ವಿಧಿ ಪೂರ್ವಕವಲ್ಲದಿದ್ದರೂ) ನನ್ನನ್ನೆ ಪೂಜಿಸುತ್ತಾರೆ"

ಹೀಗೆ ತಿಳಿಸಿ, ಕೃಷ್ಣನು ಇನ್ನೊಂದು ಮಾತನ್ನು ಹೇಳುತ್ತಾನೆ ’ಯೇ ಯಥಾ ಮಾಂ ...’
-ಅವರವರ ಸೇವೆಗೆ ಅನುರೂಪವಾಗಿ ಫಲವನ್ನು ನೀಡುತ್ತಾನೆ ’ ಯೇ ಯಥಾ..’

ಬೇರೆ ದೇವರ ಪೂಜೆ ಮಾಡಿದರೂ ಅವನ ಪೂಜೆ ಮಾಡಿದರು ಒಂದೇಯಾದರೆ, ಅವನನ್ನು ಏಕೆ ಪೂಜಿಸಬೇಕು?
ಎಂದುದಕ್ಕೆ ಉತ್ತರವಾಗಿ ಮಧ್ವಾಚಾರ್ಯರು - ಶ್ರೀ ಹರಿಯನ್ನು ಪೂಜಿಸಿದರೆ ಮುಕ್ತಿಯೇ ಫಲವು. ಇತರ ದೇವತೆಗಳ ಪೂಜೆಯು ಸ್ವರ್ಗಾದಿ ಅಮುಖ್ಯವಾದ ಫಲಗಳನ್ನು ನೀಡುತ್ತದೆ - ಎಂದು ಹೇಳುತ್ತಾರೆ

ಆದ್ದರಿಂದ ಕೃಷ್ಣನು ಮುಂದಿನ ಶ್ಲೋಕದಲ್ಲಿ
’ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಇಜಂತ ಇಹ ದೇವತಾಃ
ಕ್ಷಿಪ್ರಮ್ ಹಿ ಮಾನುಷೆ ಲೋಕೆ ಸಿದ್ಧಿರ್ಭವತಿ ಕರ್ಮಜಾ ’
ಅನ್ಯ ದೇವತೋಪಾಸನೆಯನ್ನು ಸಿದ್ಧಿಗಾಗಿ (ಅಮುಖ್ಯ ಫಲಗಳಿಗಾಗಿ) ಮಾಡುತ್ತಾರೆ - ಎಂದು ಹೇಳುತ್ತಾನೆ

ಛಾಂದ್ಯೋಗ್ಯೋಪನಿಷತ್ತಿನಲ್ಲಿ ಒಂದು ವಾಕ್ಯ ಬರುತ್ತದೆ:

ತದ್ ಯ ಇಮೆ ವೀಣಾಯಾಂ ಗಾಯಂತಿ ಏತಂ ತೇ ಗಾಯಂತಿ
ತಸ್ಮಾತ್ ತೇ ಧನಸನಯಃ ಛಾಂ.ಉ. ೧,೭.೬

"ರಾಜನ ಎದುರಿಗೆ ವೀಣಾವಾದನ ಇತ್ಯಾದಿ ಮಾಡುವವರು ರಾಜನ ಒಳಗಿರುವ ಪರಮಾತ್ಮನ ಎದುರಿಗೆ ವೀಣೆ ನುಡಿಸುತ್ತಿರುತ್ತಾನೆ. ರಾಜನ ಮೂಲಕ ಆ ಪರಮಾತ್ಮನೆ ಧನ ಮುಂತಾದವನ್ನು ಕೊಟ್ಟು ಸಲಹುತ್ತಾನೆ"

ಹಿಂದಿನ ಬಾರಿ ಶ್ರೀ ಸುಧೀಂದ್ರ ತೀರ್ಥರು ಇದನ್ನೆ ತಮ್ಮ ಪ್ರವಚನದಲ್ಲಿ ತಿಳಿಸಿದ್ದರು.
’ನೀನು ಯಾರನ್ನೆ ಪೂಜೆ ಮಾಡು, ಶ್ರದ್ಧೆಯಿಂದ ಮಾಡು’
...ಸರ್ವ ದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ

************************************
This is my friend Jyothsna Kamath's speech material;
"Nothing but the Lord is bliss (Ananda) and the Lord is nothing but bliss (Ananda)"
as usual.. exceptional!

************************************

ye yathA mAm prapadyante tAmstathaiva bhajAmyaham

mama vartmAnuvartante manuShyAh pArtha sarvaShah (BG. 4:11)

All individuals are not the same; there are differences in Samskaras, Vasanas, dispositions, etc. Accordingly, they differ in their heart’s desires, degree of mental understanding, manner of worship and capacity to receive the fruits of their worship. The Lord reciprocates the same sentiment to the devotee and reveals Himself in the same form that the devotee chooses to think of, depending on his/her faith. Pure devotees conceptualize and worship the Supreme in one of many forms – as a child, parent, spouse, friend, master, etc. which He reciprocates appropriately. Pure devotion is an ideal, which very few can reach. That apart, even for normal individuals, He ultimately grants whatever each one prays for – whether it is desire to have a vision of His Divine Form (Saguna Brahman), become absorbed in His unmanifest effulgence (Nirguna Brahman), to attain knowledge, love, liberation, yogic powers, material wealth, or removal of misery, etc.

All of creation has an order behind it. Nothing that happens is haphazard. Just as a jackfruit seed cannot give mango fruits, the words spoken in a valley echo back in the very same way and a mirror reflects the image of the object placed in front if it, we reap the fruits of our own actions. The Lord also follows the same cosmic principle, that of reciprocity. He does not favour anybody out of love or aversion, but in tune with ultimate justice, disburses the fruit in proportion to each one’s thought, word and action.

But it is He alone who decides who should be given what, when and how. All beings are at His mercy.

He goes on to say that all beings follow His path only. In this context, individuals who are ‘Astik’ and worship Him in various forms can be believed to be following His path. But what about the ‘Nastik’ lot, who live against God and Dharma? How can they be said to be following His path?

Well, all beings seek happiness in whatever they do. It is the nature of every creature to pursue activities that bring pleasure and drive away pain. The true goal of any Jiva is bliss or Ananda, which lies ultimately in reaching the Supreme Lord. But most of us are unaware of this and mistaking pleasure (Sukha) for Ananda, seek happiness in various material pursuits, which yield only short-lived pleasure. We don’t realize that the bliss we are seeking can be found in only one place, and that is in the Supreme. Nothing but the Lord is bliss (Ananda) and the Lord is nothing but bliss (Ananda). Whatever the individual aims to achieve, he is directly or indirectly engaged in reaching the state of bliss, which is synonymous with liberation from sorrow and reaching the Lord Himself. As different streams from different sources all flow towards and mingle in the same ocean, so also all paths which men take all lead to Him. Whatever path one follows up a mountain, he finally reaches the summit. Some may reach earlier while others may take longer. The routes, though diverse, all lead to one goal. Hence Krsna says that all beings inevitably worship Him alone.

***************