Thursday, February 25, 2021

Learn from Rama -4 (Shun arrogance; start the conversation)

 Learn from Rama -4

 Shun arrogance; start the conversation

बुद्धिमान्मधुराभाषी पूर्वभाषी प्रियंवदः |
वीर्यवान्नच वीर्येण महता स्वेन विस्मितः || --१३

The wise Rama always speaks sweetly. He is the first one to initiate a dialogue. His speech is compassionate. Though, valorous, Rama is not arrogant of His mighty valor.

There are many books available that teach us ‘how to start a conversation?’. Lord Rama, the greatest teacher, shows it by example. Not only should our words be sweet, but we should also be the first to start a conversation. Not just with strangers, Rama teaches us to speak openly and initiate that conversation even with people whom we know. Being the prince of the biggest empire, being the best person on earth, Rama, is not arrogant. He initiates the dialogue, with a smiling face, with an inviting attitude, with a sweet talk and with soft spoken words. His valour like many of His other attributes is matchless, but He does not show-off, He is not proud, does not hold a superiority complex. Also, Rama is wise! But that wisdom has not brought arrogance in Him either.

We, insignificant beings, show arrogance, are proud of our miniscule success stories like ‘I know this, I play well, I speak well, I sing well, I am rich, I am a born genius…’ the list goes on. But Rama, the mightiest warrior, gives no space to pretentious displays.

As the saying goes, ‘how you treat people tells all’. Rama teaches us to shun arrogance, to speak with sweet words, to be the first to initiate a dialogue, to not show-off.

May such sweet Rama, always be present in us, making us speak sweetly and may He always remove the arrogance in us.

------------------------------

ಶ್ರೀರಾಮನಿಂದ ಕಲಿಯೋಣ - ೪

ಅಹಂಕಾರ ತೊರೆಯೋಣ; ಮೊದಲು ಮಾತಾಡೋಣ

ಬುದ್ಧಿಮಾನ್-ಮಧುರಾಭಾಷೀ ಪೂರ್ವಭಾಷೀ ಪ್ರಿಯಂವದಃ |
ವೀರ್ಯವಾನ್ ನ ಚ ವೀರ್ಯೇಣ ಮಹತಾ ಸ್ವೇನ ವಿಸ್ಮಿತಃ || ೨-೧-೧೩

ಶ್ರೀರಾಮನು ಬುದ್ಧಿವಂತನು, ಸದಾ ಮಧುರವಾಗಿ, ಪ್ರಿಯವಾಗಿ ನುಡಿಯುತ್ತಿದ್ದನು. ತಾನೇ ಮೊದಲು ಸಂಭಾಷಣೆಯನ್ನು ಆರಂಭಿಸುತ್ತಿದ್ದನು. ಪರಮವೀರನಾದರೂ, ತನ್ನ ಶೌರ್ಯದ ಬಗ್ಗೆ ಕಿಂಚಿತ್ತೂ ಗರ್ವಪಡುತ್ತಿರಲಿಲ್ಲ.

ಜಗತ್ತಿನ ಅರ್ಧದಷ್ಟು ಜಗಳ ನಿಲ್ಲಲು ಇದೊಂದೆ ಉಪಾಯ – ರಾಮನಿಂದ ಕಲಿಯಿರಿ! ಪ್ರಿಯವಾಗಿಯೂ ಮಧುರವಾಗಿಯೂ ನುಡಿಯುವ ವ್ಯಕ್ತಿಯನ್ನು ಕಂಡರೆ ಯಾರಿಗೆ ಪ್ರೀತಿಯಾಗದು? ರಾಮಚಂದ್ರನು ಮೃದು ಮಾತುಗಳಿಂದ, ಪ್ರೀತಿಯಿಂದ, ಸಿಹಿಯಾದ ವಚನಗಳಿಂದಲೂ ಮಾಡಿದ ಮೋಡಿ ಅಸದೃಶ. ನಮ್ಮ ನುಡಿಗಳು ಸಿಹಿ ಮಾತ್ರವಲ್ಲ, ನಾವೇ ಮೊದಲು ಮತ್ತೊಬ್ಬರೊಂದಿಗೆ ಸಂಭಾಷಣೆ ಆರಂಭಿಸಬೇಕು. ಮೊದಲು ಮಾತನಾಡದೆ, ಮಗುಮ್ಮಾಗಿ ಕುಳಿತರೆ, ಆಗುವ ನಷ್ಟ ಎಲ್ಲರಿಗೂ ತಿಳಿದಿದೆ. ‘ಹೇಗೆ ಸಂಭಾಷಣೆ ಪ್ರಾರಂಭಿಸಬೇಕು?’ ಎಂಬುದರ ಬಗ್ಗೆ ಬಹಳಷ್ಟು ಪುಸ್ತಕಗಳು ಇಂದು ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಜಗತ್ತಿನ ಮೊದಲ ಗುರುವು ಆದ ಶ್ರೀರಾಮನು ಇದನ್ನು ನಮಗೆ ತೋರಿಕೊಡುತ್ತಾನೆ. ಪರಿಚಯವಿದ್ದರೊಂದಿಗೂ ‘ನಾವೇಕೆ ಮೊದಲು ಮಾತನಾಡಬೇಕು, ಅವನೇ ಬಂದು ನನ್ನನ್ನು ಮಾತನಾಡಿಸಲಿ’ ಎಂದು ನಾವು ಸುಮ್ಮನೆ ಕೂರುತ್ತೇವೆ. ಆದರೆ, ಆ ರಾಮಚಂದ್ರನು, ಆ ಕಾಲದ ಅತ್ಯುತ್ತಮ ರಾಜ್ಯಕ್ಕೆ ಯುವರಾಜನಾದರೂ, ಶ್ರೇಷ್ಠ ವ್ಯಕ್ತಿಯಾದರೂ, ತಾನೆ ನಗುನಗುತ್ತಾ ಮೊದಲು ಮಾತನಾಡಿಸಿ, ಸಿಹಿ ಮಾತುಗಳಿಂದ ಪ್ರೀತಿ ಹಂಚುವಾಗ, ನಾವು ಹೇಗಿರಬೇಡ? ರಾಮನು ಅಪ್ರತಿಮ ವೀರನೂ ಹೌದು. ಆದರೆ ಎಂದಿಗೂ ತನ್ನ ಶೌರ್ಯದ ಬಗ್ಗೆ ಕಿಂಚಿತ್ತೂ ಗರ್ವಪಡುತ್ತಿರಲಿಲ್ಲ, ಹಾಗೆ ತೋರಿಕೊಳ್ಳಲೂ ಇಲ್ಲ.

ಅತಿ ಕನಿಷ್ಠ ಜೀವಿಗಳಾದ ನಾವು, ನಮ್ಮ ಯಃಕಶ್ಚಿತ್ ಸಾಧನೆಗಳನ್ನು ದೊಡ್ಡದು ಮಾಡಿ ತೋರಿಕೊಳ್ಳುತ್ತೇವೆ – ನನಗೆ ಇವೆಲ್ಲವೂ ತಿಳಿದಿದೆ, ನಾನು ಶ್ರೇಷ್ಠ ಆಟಗಾರ, ನನ್ನ ಕಂಠ ಅದ್ಭುತ, ನನ್ನ ಪ್ರತಿಭೆ ಅಸದೃಶ, ನನ್ನಂತಹ ಸಿರಿವಂತರು ಯಾರು... ಮುಗಿಯದ ದರ್ಪ. ಆದರೆ, ಜಗತ್ತಿನ ಅಪ್ರತಿಮ ಶೂರನಾದ ರಾಮನಲ್ಲಿ ಈ ಪ್ರದರ್ಶನಗಳಿಗೆ ಜಾಗವಿರಲಿಲ್ಲ.  

ಎಲ್ಲರೊಂದಿಗೆ ಬೆರೆಯುತ್ತಾ, ಸಿಹಿ ನುಡಿಯುತ್ತಾ, ತನ್ನ ಬಗ್ಗೆ ಕೊಚ್ಚಿಕೊಳ್ಳುವುದನ್ನು ಬಿಟ್ಟು, ಹೇಗಿರಬೇಕು ಎಂದು ಪ್ರಭು ಶ್ರೀರಾಮನು ಬೋಧಿಸುತ್ತಿದ್ದಾನೆ.

ಸಿಹಿನುಡಿಗಳನ್ನಷ್ಟೇ ಆಡುವ ಆ ಶ್ರೀರಾಮನು, ನಮ್ಮಲ್ಲಿ ನಿಂತು ಸದಾ ರತ್ನದಂತ ಮಾತುಗಳನ್ನೇ ಆಡಿಸಲಿ. ನಾವೆಂದಿಗೂ ಅಹಂಕಾರದಿಂದ ವರ್ತಿಸದಂತೆ ನಡೆಸಲಿ ಎಂದು ಪ್ರಾರ್ಥಿಸೋಣ.

No comments: