Thursday, March 04, 2021

Learn from Rama -6 (Rama with His citizens: Mingle with your men)

Learn from Rama -6

Rama with His citizen: Mingle with your men


पौरान् स्वजनवन्नित्यं कुशलं परिपृच्छति | पुत्रेष्वग्निषु दारेषु प्रेष्यशिष्यगणेषु च ||
निखिलेनानुपूर्व्याच्च पिता पुत्रानिवौरसान् | २-२-३८


Rama enquires about the well-being of his people, as though they were his own, like a father does to his sons. He asks about their wives and children, about their servants and students, and in a perfect order
.

Rama, the prince of one of the biggest Kingdom of those times, is very humble and mingles with His citizens in a very simple manner. With His limitless love, Rama, when He meets the citizens, asks them about their kith and kin, even about their students and servants. He is not doing it superficially; He knows every person in Ayodhya and hence His queries are genuine. Rama is not enquiring just about the rich and popular people, He is also inquiring about the well-being of students, of servants of the house that He visits, such is His affection.
  Even at the Ashramas, Rama after paying due respects to the Rishis, asks 'Are your disciples serving you by properly performing their actions?' And all this in a perfect order of - Starting with the senior-most in the house/ashram and then to the juniors.  Rama, through His actions, is teaching us to have compassion, to mingle with everyone and to share the love.
  It may be comparable to the love a father has towards his children. Indeed, is He not our father?! Let such affectionate Rama, Gunabhirama, always love us and take care of our well-being.
-------------------------

ಶ್ರೀರಾಮನಿಂದ ಕಲಿಯೋಣ – ೬ 

ಪ್ರಜೆಗಳೊಂದಿಗೆ ರಾಮ; ಜನರೊಳೊಂದಾಗು


ಪೌರಾನ್ ಸ್ವಜನವನ್ನಿತ್ಯಂ ಕುಶಲಂ ಪರಿಪೃಚ್ಛತಿ |
ಪುತ್ರೇಷ್ವಗ್ನಿಷು ದಾರೇಷು ಪ್ರೇಷ್ಯಶಿಷ್ಯಗಣೇಷು ಚ ||
ನಿಖಿಲೇನಾನುಪೂರ್ವ್ಯಾಚ್ಚ ಪಿತಾ ಪುತ್ರಾನಿವೌರಸಾನ್ | ೨-೨-೩೮

ಪ್ರಜೆಗಳ ಸೌಖ್ಯದ ಬಗ್ಗೆ ಕಾಳಜಿಯುಳ್ಳ ರಾಮನು, ತಂದೆಯು ತನ್ನ ಮಕ್ಕಳ ಬಗ್ಗೆ ಪ್ರಶ್ನಿಸುವಂತೆಯೇ, ಪ್ರಜೆಗಳಲ್ಲಿಯೂ ವಿಚಾರಿಸುತ್ತಾನೆ. ಅವರ ಮಡದಿ-ಮಕ್ಕಳ ಬಗ್ಗೆ, ಸೇವಕರ, ವಿದ್ಯಾರ್ಥಿಗಳ ಬಗ್ಗೆ ಕ್ರಮವಾಗಿ ಪ್ರಶ್ನಿಸಿ ವಿಚಾರಿಸಿಕೊಳ್ಳುತ್ತಾನೆ.

ನಿಗರ್ವಿಯಾದ, ವಿನಯವಂತನಾದ ಶ್ರೀ ರಾಮನು ಪ್ರಜೆಗಳೊಂದಿಗೆ ಆನಂದದಿಂದ ಅತ್ಯಂತ ಸಹಜವಾಗಿ  ಹೊಂದಿಕೊಳ್ಳುತ್ತಾನೆ. ಪ್ರಜೆಗಳನ್ನು ಭೇಟಿಯಾದಾಗ ರಾಮನು, ಅವರ ಮಡದಿ-ಮಕ್ಕಳ-ಮನೆಯ ವಾರ್ತೆಯನ್ನು ಕೇಳುತ್ತಾನೆ. ಎಣೆಯಿರದ ಪ್ರೀತಿಯಿಂದ ಅವರ ಸೇವಕರ ಬಗ್ಗೆಯೂ, ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆಯೂ ವಿಚಾರಿಸುತ್ತಾನೆ. ಇದು ಕೇವಲ ಮೇಲ್ಮೆಯ ವಿಚಾರಣೆಯಲ್ಲ. ಆತನಿಗೆ ಅಯೋಧ್ಯೆಯ ಪ್ರತಿಯೊಬ್ಬ ಪ್ರಜೆಯ ವಿಷಯ ತಿಳಿದಿದೆ, ಆದ್ದರಿಂದ ರಾಮನಿಗೆ ಇದು ಅತ್ಯಂತ ಸಹಜ ಹಾಗೂ ನಟನೆಯಿಲ್ಲದ ನಡತೆ. ಅಲ್ಲದೇ, ರಾಮನು ಕೇವಲ ಸಿರಿವಂತರ, ವಿಖ್ಯಾತ ವ್ಯಕ್ತಿಗಳ ಬಗ್ಗೆಯಲ್ಲದೇ, ಮನೆ-ಮನೆಗಳಲ್ಲಿನ ಸೇವಕರ ಬಗ್ಗೆಯೂ ತಿಳಿದುಕೊಳ್ಳುತ್ತಾನೆ.
    ಆಶ್ರಮಗಳಿಗೆ ಹೋದಾಗ, ಋಷಿ-ಮುನಿಗಳಿಗೆ ವಂದಿಸಿದ ನಂತರ, ಆಸ್ಥೆಯಿಂದ ಅವರಲ್ಲಿ ವಿಚಾರಿಸುತ್ತಾನೆ ‘ನಿಮ್ಮ ಶಿಷ್ಯರು ನಿಮಗೆ ಸರಿಯಾಗಿ ಸೇವೆ ಮಾಡುತ್ತಿದ್ದಾರಷ್ಟೆ? ತಮ್ಮ-ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರಷ್ಟೆ?’ ಇವೆಲ್ಲವೂ ಶುದ್ಧವಾದ ಕ್ರಮದಿಂದ ಪ್ರಶ್ನಿಸುತ್ತಾನೆ – ಹಿರಿಯರಿಂದ ಶುರುಮಾಡಿ ಕಿರಿಯರ ತನಕ. ದಯಾಳುವಾದ ರಾಮನು, ತನ್ನ ಇಂತಹ ನಡತೆಯಿಂದ ನಮಗೂ ಕಲಿಸುತ್ತಿದ್ದಾನೆ – ಎಲ್ಲರೊಡನೆ ಬೆರೆಯಿರಿ, ಪ್ರೀತಿಯನ್ನು ಹಂಚಿರಿ  
    ತಂದೆಯು ತನ್ನ ಮಕ್ಕಳಲ್ಲಿ ಕಾಣಬಹುದಾದ ಪ್ರೇಮಕ್ಕೆ ವಾತ್ಸಲ್ಯಕ್ಕೆ ರಾಮನ ಈ ನಡತೆಯನ್ನು ಹೋಲಿಸಬಹುದೇನೋ. ರಾಮನು ನಮ್ಮೆಲ್ಲರ ತಂದೆಯಲ್ಲವೇ? ಇಂತಹ ರಾಮನು, ಗುಣಾಭಿರಾಮನು, ನಮ್ಮನ್ನು ಎಂದೆಂದಿಗೂ ಪ್ರೀತಿಸಲಿ, ನಮ್ಮನ್ನು ಸೌಖ್ಯದಿಂದಿರಿಸಲಿ

No comments: