Thursday, April 08, 2021

Learn from Rama -11 – Shun the company of the unworthy; Know the strength/weakness of self & others

 

Learn from Rama -11Shun the company of the unworthy; Know the strength/weakness of self & others

दृढभक्तिः स्थिरप्रज्ञो नासद्ग्राही दुर्वचाः |
निस्तन्द्रिरप्रमत्तश्च स्वदोषपरदोषवित् ||  (वा।रा --२४)

Lord Rama had a firm devotion and had a stable mind. He did not have the company of unworthy people, nor did he speak foul words. He was free from laziness and was ever alert. He knew his own faults and those of others.

Every verse about Lord Rama, from Valmiki Ramayana, has been teaching us many things. Here too, Rama is teaching us multiple things and one among those is - not to have bad company, the company of unworthy, the company of durjanas. This is of utmost importance for a King because a King with bad company, would fail in his duties, despite him being worthy. It is true with people in good position too. (How many times have we said this? “He is a great person, but he is surrounded by unworthy folks”) So, it is important for oneself to be truthful, devoted to Lord and to have a steadfast mind. It is more important to shun the bad company. Wrong people with a person, spoil all the virtues the person has.

One more teaching from Rama is to understand the strength and weakness of others, to understand the faults and virtues present in others. The analysis of other’s weaknesses, and strength helps at every stage – home, office, playground, with friends, with competitors, with family. While it is very easy to find faults in others (we love to do it and we excel there, don’t we?), we are so bad in identifying our own weaknesses. Rama says, not just that of others, every person should know his/her own strength and faults. Only then, can a good judgement be made at every situation. Rama, of course had no faults - He is nirdosha. But He is teaching this to the mankind for leading a successful life.

Let such perfect Rama, remove our faults, and take us away from the company of unworthy.

-------------------------------------

 

ಶ್ರೀರಾಮನಿಂದ ಕಲಿಯೋಣ ೧೧: ಅಸಜ್ಜನರ ಸಂಗ ಬಿಡು; ತನ್ನ, ಪರರ ಗುಣ-ದೋಷಗಳನ್ನು ತಿಳಿದುಕೊ

ದೃಢಭಕ್ತಿಃ ಸ್ಥಿರಪ್ರಜ್ಞೋ ನಾಸದ್ಗ್ರಾಹೀ ದುರ್ವಚಾಃ |
ನಿಸ್ತನ್ದ್ರಿರಪ್ರಮತ್ತಶ್ಚ ಸ್ವದೋಷಪರದೋಷವಿತ್ ||  (ವಾ.ರಾ.--೨೪)

ಪ್ರಭು ಶ್ರೀರಾಮನು, ಸ್ಥಿರ ಪ್ರಜ್ಞೆಯುಳ್ಳವನೂ, ದೃಢ ಭಕ್ತಿಯುಳ್ಳವನೂ ಆಗಿದ್ದನು. ಅಸಜ್ಜನರ ಸಂಗವನ್ನು ಮಾಡುತ್ತಿರಲಿಲ್ಲ. ಎಂದಿಗೂ ಕೆಟ್ಟ ಮಾತುಗಳನ್ನು ಆಡುತ್ತಿರಲಿಲ್ಲ. ಆಲಸಿಯಾಗಿ/ಸೋಮಾರಿಯಾಗಿ ಇದ್ದವನಲ್ಲ, ಸತತವಾಗಿ ಜಾಗ್ರತೆಯಿಂದಿದ್ದವನು. ತನ್ನ ಗುಣ-ದೋಷಗಳನ್ನು ತಿಳಿದಂತೆಯೇ, ಪರರ ಗುಣ-ದೋಷಗಳನ್ನೂ ತಿಳಿದಿದ್ದನು.

ವಾಲ್ಮೀಕಿ ರಾಮಾಯಣದಲ್ಲಿ, ರಾಮನ ಬಗ್ಗೆ ತಿಳಿಸುವ ಪ್ರತಿಯೊಂದು ಶ್ಲೋಕವೂ ಅನೇಕ ನೀತಿಗಳನ್ನು ಹೇಳಿಕೊಡುತ್ತಿದೆ. ಇಲ್ಲಿಯೂ ಸಹ, ರಾಮನು ಅನೇಕ ವಿಷಯಗಳನ್ನು ತಿಳಿಸಿಕೊಡುತ್ತಿದ್ದಾನೆ. ಅವುಗಳಲ್ಲಿ ಒಂದು – ಕೆಟ್ಟವರ ಸಂಗವನ್ನು ತೊರೆಯುವುದು, ದುರ್ಜನರ, ಅಸಜ್ಜನರ ಸಂಗವನ್ನು ಬಿಡುವುದು. ಒಬ್ಬ ರಾಜನಿಗೆ ಇದು ಬಹು ಮುಖ್ಯವಾದದ್ದು ಏಕೆಂದರೆ, ರಾಜನು ದಕ್ಷನಾಗಿದ್ದರೂ, ದುಷ್ಟ ಸಂಗವು ಆತನನ್ನು ತನ್ನ ಕರ್ತವ್ಯದಿಂದ ವಿಮುಖನನ್ನಾಗಿಸುತ್ತದೆ. ಉತ್ತಮ ಸ್ಥಾನದಲ್ಲಿದ್ದ ಎಲ್ಲರಿಗೂ ಇದು ಅನ್ವಯಿಸುತ್ತದೆ.  (ಈ ಮಾತನ್ನು ನಾವೇ ಅದೆಷ್ಟು ಬಾರಿ ಹೇಳಿದ್ದೇವೆ -- ‘ಆತನೇನೋ ಒಳ್ಳೆಯವನೆ, ಆದರೆ, ಆತನ ಸುತ್ತ-ಮುತ್ತಲಿರುವ ಜನರು ಸರಿಯಿಲ್ಲ!’) ಹಾಗಾಗಿ, ದೇವರಲ್ಲಿ ದೃಢ ಭಕ್ತಿ, ಸತ್ಯವಾಗಿರುವುದೂ, ಮನಸ್ಸು ಸ್ಥಿಮಿತದಲ್ಲಿರುವುದು ಮುಖ್ಯವೆ. ಬಹುಶಃ ಅದಕ್ಕಿಂತ ಮುಖ್ಯ ದುರ್ಜನರ ಸಂಗ ತೊರೆಯುವುದು. ಅಸಜ್ಜನರ ಸಂಗವು ಒಳ್ಳೆಯ ಗುಣಗಳಿರುವ ವ್ಯಕ್ತಿಯನ್ನೂ ಹಾಳು ಮಾಡುತ್ತವೆ.

ಶ್ರೀರಾಮನಿಂದ ಕಲಿಯುಬೇಕಾದ ಮತ್ತೊಂದು ಅಂಶ – ತನ್ನ ಹಾಗು ಪರರ ಶಕ್ತಿ ಮತ್ತು ದೌರ್ಬಲ್ಯಗಳನ್ನು ತಿಳಿದಿರಬೇಕು, ಗುಣ-ದೋಷಗಳನ್ನು ತಿಳಿದಿರಬೇಕು. ಪರರ ಬಲಾಬಲಗಳ ವಿವೇಚನೆ ನಮಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ, ಎಲ್ಲಾ ಹಂತಗಳಲ್ಲಿಯೂ ನೆರವಿಗೆ ಬರುತ್ತದೆ – ಮನೆ, ಕಚೇರಿ, ಆಟೋಟ ಸ್ಪರ್ಧೆಗಳಲ್ಲಿ, ಸ್ನೇಹಿತರೊಂದಿಗೆ, ಕುಟುಂಬಗಳಲ್ಲಿ ಇತ್ಯಾದಿ. ನಾವು ಪರರ ದೋಷ ಗುರುತಿಸುವುದರಲ್ಲಿ ಅಗ್ರಗಣಿಗಳು, ನಮಗೆ ಅದು ಅತ್ಯಂತ ಸುಲಭ ಮತ್ತು ಸಂತಸ ತರಿಸುವ ವಿಷಯ. ಆದರೆ, ರಾಮನು ಇತರರ ದೋಷಗಳು ಮಾತ್ರವಲ್ಲ, ತನ್ನ ದೋಷಗಳನ್ನೂ ತಿಳಿದಿರಬೇಕು ಎಂದು ತಿಳಿಸುತ್ತಿದ್ದಾನೆ. ಹಾಗಾದಾಗ ಮಾತ್ರ ಸಂದರ್ಭಕ್ಕೆ ಅನುಸಾರವಾಗಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಾಮನಲ್ಲಿ ಯಾವುದೇ ದೋಷಗಳಿಲ್ಲ. ಆತನು ನಿರ್ದೋಷನು. ಆದರೆ ಇದು ಮನುಕುಲಕ್ಕೆ ಆತನು ಕಲಿಸುತ್ತಿರುವ ನೀತಿ, ನಮ್ಮೆಲ್ಲರ ಒಳಿತಿಗಾಗಿ, ಜೀವನದ ಸಫಲತೆಗಾಗಿ

ಪರಿಪೂರ್ಣನಾದ ಶ್ರೀರಾಮನು, ನಮ್ಮ ದೋಷಗಳನು ಕಳೆದು, ನಮ್ಮನ್ನು ದುರ್ಜನರ ಸಂಗದಿಂದ ದೂರಮಾಡಲಿ.

No comments: