Thursday, June 03, 2021

Learn from Rama -15 – Control your anger; don’t humiliate anybody

 Learn from Rama -15Control your anger; don’t humiliate anybody

अनसूयो जितक्रोधो दृप्तो मत्सरी |
चावमन्ता भूतानां कालवशानुगः ||  (वा रा --३०/३१)

 

Rama had no jealousy. He had conquered anger. Rama was devoid of arrogance and envy. Rama had not humiliated any living being. Also, Rama had not surrendered to time.

Humans have many defects and the major ones that are considered as enemies are: kaama (lust), krodha (anger), mada (pride/intoxication), lobha (greed), moha (illusion), maatsarya (envy). All our shastras ask us to get over these enemies. These are the gateways to hell. None of the above six can be seen in Rama. Lord Rama, of course is devoid of all defects. He had conquered anger. He was not arrogant despite being the best archer, foremost warrior. (Also refer ‘Learn from Rama-4’ for more). He also never envied anyone.

Arrogance also leads person to humiliate others. Lord Rama had never humiliated any being – at His palace or elsewhere. (Nor could anybody humiliate Rama)

Each of the above are the attributes that we, insignificant beings, should emulate from Rama. Arrogance for our atomic capabilities, envying others for them being better than us, humiliating others and showing them in low light are our common behaviours.

Rama shows us how to behave, what to shun, how to treat others. Let such Rama remove our defects and make us follow His path always.

 

ಶ್ರೀರಾಮನಿಂದ ಕಲಿಯೋಣ – ೧೫: ಕೋಪವನ್ನು ನಿಯಂತ್ರಿಸಿ; ಯಾರನ್ನೂ ಅವಮಾನಿಸಬೇಡಿ

ಅನಸೂಯೋ ಜಿತಕ್ರೋಧೋ ದೃಪ್ತೋ ಮತ್ಸರೀ |
ಚಾವಮನ್ತಾ ಭೂತಾನಾಂ ಕಾಲವಶಾನುಗಃ || (ವಾ ರಾ --೩೦/೩೧)

ರಾಮನಲ್ಲಿ ಅಸೂಯೆಯಿರಲಿಲ್ಲ. ಅವನು ಕೋಪವನ್ನು ಗೆದ್ದಿದ್ದ. ರಾಮನಲ್ಲಿ ದರ್ಪವಾಗಲಿ, ಮಾತ್ಸರ್ಯವೇ ಆಗಲಿ, ಎಂದಿಗೂ ಇರಲಿಲ್ಲ. ಅವನು ಯಾವ ಜೀವಿಯನ್ನು ಅವಮಾನ ಮಾಡಿರಲಿಲ್ಲ. ಅವನು ಕಾಲಕ್ಕೆ ವಶನಾಗಿರಲಿಲ್ಲ.

ಮನುಷ್ಯರಲ್ಲಿ ಅನೇಕ ದೋಷಗಳಿವೆ. ಅವುಗಳಲ್ಲಿ, ಮುಖ್ಯ ವೈರಿಗಳು ಎಂದರೆ : ಕಾಮ, ಕ್ರೋಧ, ಮದ, ಲೋಭ, ಮೋಹ, ಮಾತ್ಸರ್ಯ. ಎಲ್ಲಾ ಶಾಸ್ತ್ರಗಳ ಆಂತರ್ಯ ಈ ಶತ್ರುಗಳ ಮೇಲೆ ನಾವು ವಿಜಯ ಸಾಧಿಸಬೇಕು ಎಂಬುದೇ. ಇವುಗಳು ನರಕಕ್ಕೆ ಹೆಬ್ಬಾಗಿಲುಗಳು. ಮೇಲಿನ ಆರು ದೋಷಗಳು ರಾಮನಲ್ಲಿ ಇರಲಿಲ್ಲ. ರಾಮನು ದೋಷ ರಹಿತನು. ಅವನು ಕೋಪವನ್ನು ಗೆದ್ದವನು. ಪ್ರಪಂಚದ ಅತ್ಯುತ್ತಮ ಬಿಲ್ಲಾಳುವಾಗಿದ್ದರೂ, ಶ್ರೇಷ್ಠ ಯೋಧನಾಗಿದ್ದರೂ, ಅವನಲ್ಲಿ ಕಿಂಚಿತ್ತೂ ಗರ್ವವಿರಲಿಲ್ಲ. (ಹೆಚ್ಚಿನ ಓದಿಗೆ, ‘ರಾಮನಿಂದ ಕಲಿಯೋಣ-೪’ ಭಾಗವನ್ನು ಪರಿಶೀಲಿಸಬಹುದು). ರಾಮನು ಅನ್ಯರ ವಿಷಯದಲ್ಲಿ ಎಂದಿಗೂ ಮತ್ಸರ ಪಟ್ಟುಕೊಂಡವನೂ ಅಲ್ಲ.

ಗರ್ವವು ಅನ್ಯರನ್ನು ಅವಮಾನ ಮಾಡುವ ದುರ್ಬುದ್ಧಿಗೆ ಪ್ರಚೋದಿಸುತ್ತದೆ. ರಾಮನು ಯಾರನ್ನೂ ಅವಮಾನ ಮಾಡುತ್ತಿರಲಿಲ್ಲ – ಅವನ ಅರಮನೆಯಲ್ಲಿಯೇ ಆಗಲಿ, ಹೊರಗೇ ಆಗಲಿ. (ರಾಮನನ್ನು ಯಾರೂ ಅವಮಾನಿಸಲು ಸಾಧ್ಯವಿರಲಿಲ್ಲ).

ಇಲ್ಲಿ ಮೇಲ್ಕಂಡ ಪ್ರತಿಯೊಂದು ಗುಣವನ್ನೂ ನಾವು ರಾಮನಿಂದ ಕಲಿಯಬೇಕು. ಯಃಕಶ್ಚಿತ್ ಹುಲುಜೀವಿಗಳಾದ ನಾವು ನಮ್ಮ ಅಣುಗಾತ್ರದ ಸಾಧನೆಗಳಿಗೆ ಗರ್ವಪಡುತ್ತೇವೆ, ಇತರರ ವಿಷಯದಲ್ಲಿ ಮತ್ಸರಿಸುತ್ತೇವೆ. ಅನ್ಯರನ್ನು ಕೀಳಾಗಿ ಕಾಣುತ್ತಾ ಅವರನ್ನು ಅವಮಾನಿಸುತ್ತೇವೆ. ಇವೆಲ್ಲಾ ನಮ್ಮಲ್ಲಿ ಕಾಣಬರುವ ಸಾಮಾನ್ಯ ದುರ್ಗುಣಗಳು.

ನಾವು ಹೇಗೆ ನಡೆದುಕೊಳ್ಳಬೇಕು, ಯಾವುದನ್ನು ಬಿಡಬೇಕು, ಹೇಗೆ ಇತರರೊಂದಿಗೆ ವ್ಯವಹರಿಸಬೇಕು – ಎಂಬ ಪಾಠವನ್ನು ರಾಮನು ನಮಗೆ ಕಲಿಸುತ್ತಿದ್ದಾನೆ. ಅಂತಹ ಪ್ರಭು ಶ್ರೀರಾಮನು ನಮ್ಮ ದೋಷಗಳನ್ನು ಕಳೆದು ನಮ್ಮನ್ನು ಸದಾ ಅವನ ದಾರಿಯಲ್ಲಿ ನಡೆಸಲಿ.

No comments: