Thursday, June 03, 2021

Rama - Gunabhirama -17 – He gets nothing unpleasant; how can He have anger?

 

Rama - Gunabhirama -17 – He gets nothing unpleasant; how can He have anger?

 
In the previous verse we saw that Rama cannot be troubled by desire/lust. What about anger, which most are troubled by?

प्रियस्य हानिर्न कदाचिदस्य प्रियेतरस्यापि न सम्भवः स्यात् |
क्रोधस्ततो लक्ष्मणपूर्वजस्य पराजितः पादरजांस्युपास्ते || (सं। रा | २।१।२३)
 
Lord Rama never loses anything that He wants; Nor does He get something He does not like. Therefore, ‘anger’ remains defeated and fallen, worshipping the dust off Rama’s feet.
One gets anger for two reasons.
1)    Losing something one wants, desires. Or not getting what one desires.
2)    Getting something one does not like - an unpleasant happening
Whereas, for Rama, the above two reasons are invalid. Neither does He lose what He desires, not does He get anything unpleasant. So, the defect ‘anger’ which all of us are troubled by, never ever troubles Rama.
Always remember that fully independent Rama can have no defects.
 -------------

ರಾಮ ಗುಣಾಭಿರಾಮ-೧೭ – ರಾಮನಿಗೆ ಅಪ್ರಿಯವೆಂಬುದು ಸಂಭವಿಸುವುದೇ ಇಲ್ಲ; ಕೋಪದಿಂದ ತೊಂದರೆಯಾದೀತೆ?


ಹಿಂದಿನ ಶ್ಲೋಕದಲ್ಲಿ ಪ್ರಭು ಶ್ರೀ ರಾಮನಿಗೆ ಕಾಮದಿಂದ ತೊಂದರೆಯಾಗಲು ಸಾಧ್ಯವಿಲ್ಲವೆಂಬುದನ್ನು ನೋಡಿದೆವು. ನಮ್ಮೆಲ್ಲರಿಗೂ ಹೊರೆಯಾಗಿರುವ ‘ಕೋಪದಿಂದ’ ಅವನಿಗೆ ತೊಂದರೆಯಾವುದೇ?

ಪ್ರಿಯಸ್ಯ ಹಾನಿರ್ನ ಕದಾಚಿದಸ್ಯ ಪ್ರಿಯೇತರಸ್ಯಾಪಿ ನ ಸಮ್ಭವಃ ಸ್ಯಾತ್ |
ಕ್ರೋಧಸ್ತತೋ ಲಕ್ಷ್ಮಣಪೂರ್ವಜಸ್ಯ ಪರಾಜಿತಃ ಪಾದರಜಾಂಸ್ಯುಪಾಸ್ತೇ || (ಸಂ। ರಾ | ೨।೧।೨೩)

ರಾಮನು ಬಯಸಿದ್ದು ಎಂದಿಗೂ ಸಿಗದೇ ಇರದು. ಅವನು ಬಯಸದೇ ಇರುವುದು ಎಂದಿಗೂ ಒದಗುವುದಿಲ್ಲ. ಹಾಗಾಗಿ ಕೋಪವೆಂಬುದು ಸೋತು, ಅವನ ಕಾಲಿನ ಧೂಳಿನ ಉಪಾಸನೆ ಮಾಡುತ್ತಿದೆ
.
ನಮಗೆ ಕೋಪ ಬರಲು ಎರಡು ಕಾರಣಗಳು:
೧) ನಾವು ಬಯಸಿದ್ದು ಸಿಗದೇ ಇರುವುದು.
೨) ನಾವು ಇಷ್ಟ ಪಡದೇ ಇರುವುದು ನಮಗೆ ಒದಗುವುದು.
ಪ್ರಭು ರಾಮನಿಗೆ ಈ ಮೇಲಿನ ಎರಡೂ ಕಾರಣಗಳು ಇಲ್ಲ. ಅವನು ಬಯಸಿದ್ದು ಸಿಕ್ಕೆ ಸಿಗುವುದು. ಮತ್ತು ಅವನು ಬಯಸದೇ ಇರುವುದು ಎಂದಿಗೂ ಒದಗುವುದಿಲ್ಲ. ಹಾಗಾಗಿ, ನಮ್ಮೆಲ್ಲರಿಗೂ ಅತ್ಯಂತ ವೈರಿಯಾದ ‘ಕೋಪವು’, ರಾಮನಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ.

ರಾಮನು ಅತ್ಯಂತ ಸ್ವತಂತ್ರನು, ಅವನಿಗೆ ದೋಷಗಳೆಂಬುದೇ ಇಲ್ಲ, ಎಂಬುದನ್ನು ಸದಾ ನೆನಪಿಡೋಣ.

No comments: